
SUDDIKSHANA KANNADA NEWS/ DAVANAGERE/ DATE:08-04-2025
ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಹಿರೇಮಲ್ಲನಹೊಳೆ ವಿ.ವಿ.ಕೇಂದ್ರದ ಪಕ್ಕದಲ್ಲಿ ಅಸೀನಾ ವಿಂಡ್ ಎನರ್ಜಿ ಪ್ರೈ.ಲಿ.ನವರು ಕಂಬ ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ 66/11 ಕೆವಿ ಹಿರೇಮಲ್ಲನಹೊಳೆ ವಿ.ವಿ ಕೇಂದ್ರದ ವ್ಯಾಪ್ತಿಯಲ್ಲಿ ಏ.9 ರಂದು ಬೆಳಿಗ್ಗೆ 8 ರಿಂದ ಸಂಜೆ 7 ಗಂಟೆಯ ವರೆಗೆ ಎಲ್ಲಾ ಎನ್ಜೆವೈ ಮತ್ತು ಐಪಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.


ವಿದ್ಯುತ್ ವ್ಯತ್ಯಯ ಉಂಟಾಗುವ ಮಾರ್ಗಗಳು :
ಎಫ್-07 ಭರಮಸಮುದ್ರ, ಏಫ್-08 ಹೊಸಹಟ್ಟಿ, ಎಫ್-11 ಸಂಗೇನಹಳ್ಳಿಯಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ ಹಾಗೂ ಎಫ್-2 ಕಾನನಕಟ್ಟೆ, ಎಫ್-5 ಕಲ್ಲೇದೇವಪುರ, ಎಫ್-6 ಬೆಣ್ಣೆಹಳ್ಳಿ, ಎಫ್-15 ಬಸಪ್ಪನಹಟ್ಟಿ, ಎಫ್-10 ತಿಮ್ಲಾಪುರ ಮತ್ತು ಎಫ್-11 ಸಂಗೇನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.