ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಾಲಿವುಡ್ ನಟ ನಿವಿಲ್ ಪೌಲಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು

On: September 4, 2024 12:58 PM
Follow Us:
---Advertisement---

ಮಲಯಾಳಂನ ಪ್ರೇಮಂ ಸಿನಿಮಾದ ಮೂಲಕ ಖ್ಯಾತಿ ಘಳೀಸಿದ ನಟ ನಿವಿನ್ ಪೌಲಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ನಟಿಯೊಬ್ಬರು ನಿವಿನ್ ಪೌಲಿ ವಿರುದ್ಧ ಗಂಭೀರ ಆರೋಪ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಜಸ್ಟಿಸ್ ಹೇಮಾ ವರದಿಯ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಘಟನೆಗಳು ನಡೆಯುತ್ತಿವೆ. ಮಹಿಳೆಯರು ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡುತ್ತಿದ್ದಾರೆ. ಇದೀಗ ನಿವಿನ್ ಪೌಲಿ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಆರೋಪ ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ.

‘ಹೇಮಾ ಕಮಿಟಿ ವರದಿ’ಯಲ್ಲಿ ಮಲಯಾಳಂ ಚಿತ್ರರಂಗ ಕರಾಳ ಮುಖ ಬಯಲಾಗಿದೆ. ಈಗ ನಟಿಯೊಬ್ಬರು ‘ಪ್ರೇಮಂ’ ಸಿನಿಮಾದ ಖ್ಯಾತಿಯ ಹೀರೋ ನಿವಿನ್​ ಪೌಲಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಿನಿಮಾದ ಮಾತುಕಥೆ ಸಲುವಾಗಿ ದುಬೈಗೆ ತೆರಳಿದ್ದಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕೇಸ್​ನಲ್ಲಿ ನಟ ನಿವಿನ್​ ಪೌಲಿ 6ನೇ ಆರೋಪಿ ಆಗಿದ್ದಾರೆ. ಶ್ರೇಯಾ ಎಂಬ ಮಹಿಳೆ ಎ1 ಆಗಿದ್ದಾರೆ. ನಿರ್ಮಾಪಕ ಎ.ಕೆ. ಸುನಿಲ್​ ಎ2 ಆಗಿದ್ದಾರೆ. ದೂರಿನಲ್ಲಿ ಉಲ್ಲೇಖ ಆಗಿರುವ ಪ್ರಕಾರ, ಸಿನಿಮಾದ ಮಾತುಕಥೆಗಾಗಿ ಶ್ರೇಯಾ ಎಂಬಾಕೆಯು ನಟಿಯನ್ನು ದುಬೈಗೆ ಕರೆಸಿಕೊಂಡಿದ್ದರು. ಅಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ತಿಳಿಸಲಾಗಿದೆ. ಮಹಿಳೆ ನೀಡಿದ ದೂರಿಗೆ ಸಂಬಂಧಿಸಿದಂತೆ ನಿವಿನ್​ ಪೌಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅವರು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ. ‘ಯುವತಿಯೊಬ್ಬಳ ಮೇಲೆ ನಾನು ಲೈಂಗಿಕ ದೌರ್ಜನ್ಯ ಎಸಗಿದ್ದೇನೆ ಎಂದು ಆರೋಪಿಸಿರುವ ಸುಳ್ಳು ಸುದ್ದಿ ನನ್ನ ಗಮನಕ್ಕೆ ಬಂದಿದೆ. ಇದು ಸಂಪೂರ್ಣ ಸುಳ್ಳು ಅಂತ ದಯವಿಟ್ಟು ತಿಳಿಯಿರಿ’ ಎಂದು ನಿವಿನ್​ ಪೌಲಿ ಹೇಳಿದ್ದಾರೆ. ‘ನನ್ನ ಮೇಲೆ ಬಂದಿರುವ ಆರೋಪಗಳು ಆಧಾರ ರಹಿತ ಎಂದು ಸಾಬೀತು ಮಾಡುತ್ತೇನೆ ಹಾಗೂ ಅದಕ್ಕೆ ಕಾರಣ ಆದವರನ್ನು ಪತ್ತೆ ಹಚ್ಚಲು ಎಲ್ಲ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. ಉಳಿದ ಎಲ್ಲವನ್ನೂ ಕಾನೂನಿನ ಮೂಲಕ ನೋಡಿಕೊಳ್ಳಲಾಗುವುದು’ ಎಂದು ಸೋಶಿಯಲ್​ ಮೀಡಿಯಾದಲ್ಲಿ ನಿವಿನ್​ ಪೌಲಿ ಅವರು ಪೋಸ್ಟ್​ ಮಾಡಿದ್ದಾರೆ.

Join WhatsApp

Join Now

Join Telegram

Join Now

Leave a Comment