ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮತದಾರರ ಮತಬುಟ್ಟಿಗೆ “ನಿರ್ಮಲ”ವಾಗಿ ಕೈಹಾಕಿದ ವಿತ್ತ ಸಚಿವೆ ಮಂಡಿಸಿದ ಬಜೆಟ್…!

On: February 1, 2024 4:12 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:01-02-2024

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡನೆ ಮಾಡಿದ ಬಜೆಟ್ ಮತದಾರನ ಮತಬುಟ್ಟಿಗೆ ನಿರ್ಮಲವಾಗಿ ಕೈ ಹಾಕಲಾಗಿದೆ. ಯಾಕೆಂದರೆ ಮಹಿಳೆಯರಿಗೆ ಬಂಪರ್ ಕೊಡುಗೆ ನೀಡಿದ್ದರೆ, ಅನ್ನದಾತರಿಗೂ ಪ್ರಾಶಸ್ತ್ಯ ನೀಡಲಾಗಿದೆ. ಮಧ್ಯಂತರ ಬಜೆಟ್ ನಲ್ಲಿ ಎಲ್ಲಾ ವರ್ಗದವರನ್ನೂ ಸೆಳೆಯುವ ಪ್ರಯತ್ನ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಳೆದು ತೂಗಿ ಆಯವ್ಯಯ ನೀಡಿದ್ದಾರೆ.

ಆದಾಯ ತೆರಿಗೆ ಯಥಾಸ್ಥಿತಿ

ಲಕ್ಷದ್ವೀಪ ಸೇರಿದಂತೆ ದ್ವೀಪಗಳಲ್ಲಿ ಬಂದರು ಸಂಪರ್ಕ, ಸೌಕರ್ಯಗಳಿಗಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು, ಮೆಟ್ರೋ ರೈಲು ಇತರ ನಗರಗಳಿಗೂ ವಿಸ್ತರಿಸಲಾಗುವುದು. ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲಾಗುವುದು ತೆರಿಗೆ ದರಗಳಲ್ಲಿ ಯಥಾಸ್ಥಿತಿ ಇರಲಿದೆ.

ಆಯುಷ್ಮಾನ್ ಭಾರತ ಯೋಜನೆಯನ್ನು ವಿಸ್ತರಿಸಲಾಗುವುದು. ಈ ಯೋಜನೆ ಇನ್ನುಮುಂದೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೂ ಅನ್ವಯವಾಗಲಿದೆ.

ಮಾರುಕಟ್ಟೆಯಿಂದ ಹೆಚ್ಚಿನ ಹಣವನ್ನು ಸಂಗ್ರಹಿಸಲು ಖಾಸಗಿ ವಲಯಕ್ಕೆ ಸರ್ಕಾರ ಅವಕಾಶ ನೀಡುತ್ತದೆ. ಸದ್ಯ ಇರುವ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯಗಳನ್ನು ಬಳಸಿಕೊಂಡು ಹೆಚ್ಚಿನ ವೈದ್ಯಕೀಯ
ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಆದ್ಯತೆ ನೀಡಲಿದೆ.

ಅರ್ಹ ಮಧ್ಯಮ ವರ್ಗದ ಜನರಿಗಾಗಿ ಮನೆ ಕೊಳ್ಳಲು ಅಥವಾ ಮನೆ ಕಟ್ಟಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಸತಿ ಯೋಜನೆ ಜಾರಿಗೆ ತರಲಾಗುವುದು.

ಕಿಸಾನ್ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಲಾಭವಾಗಿದೆ. ದೇಶದಲ್ಲಿ ಹಾಲು ಉತ್ಪಾದನಾ ಡೇರಿಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ಪ್ರತ್ಯೇಕ ಮತ್ಸ ಸಂಪದ ಯೋಜನೆ ಜಾರಿಗೊಳಿಸಿದೆ. ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆ ವಿಸ್ತರಿಸಲಾಗುವುದು. ಜೈಜವಾನ್, ಜೈಕಿಸಾನ್, ಜೈವಿಜ್ಞಾನ, ಜೈ ಅನುಸಂಧಾನ ಎಂಬ ಪ್ರಧಾನಿ ಮೋದಿ ಅವರ ಘೋಷಣೆಯಡಿ ಕಾರ್ಯನಿರ್ವಹಿಸುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

300 ಯೂನಿಟ್ ವಿದ್ಯುತ್ ಪಡೆಯೋದು ಹೇಗೆ…?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಅನ್ನು ಮಂಡಿಸಿದರು. ಈ ಬಾರಿಯ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಉಚಿತ ವಿದ್ಯುತ್ ನೀಡುವ ದೊಡ್ಡ ಘೋಷಣೆ ಮಾಡಿದ್ದಾರೆ.

ಇಂದಿನ ಬಜೆಟ್ ನಲ್ಲಿ ಹಣಕಾಸು ಸಚಿವೆ ದೇಶದಲ್ಲಿ ಸೌರಶಕ್ತಿಗೆ ಹೆಚ್ಚಿನ ಉತ್ತೇಜನ ನೀಡುವುದಾಗಿ ಹೇಳಿದ್ದಾರೆ. ಇದರೊಂದಿಗೆ ದೇಶದಲ್ಲಿ ದುಬಾರಿ ವಿದ್ಯುತ್ ಸಮಸ್ಯೆ ನೀಗಿಸಲು ಪ್ರಯೋಜನವಾಗಲಿದೆ ಎಂದು ಸಲಹೆಯನ್ನು ನೀಡಿದ್ದಾರೆ.

ಮನೆಯ ಮೇಲ್ಛಾವಣಿಗೆ ಸೌರಶಕ್ತಿ ಬಳಸುವ ಮೂಲಕ ಉಚಿತ ವಿದ್ಯುತ್ ಅನ್ನು ಘೋಷಿಸಿದ ಸಚಿವೆ, ರೂಫ್‌ಟಾಪ್ ಸೋಲಾರ್ ತಂತ್ರಜ್ಞಾನದ ಮೂಲಕ ಒಂದು ಕೋಟಿ ಕುಟುಂಬಗಳು ತಿಂಗಳಿಗೆ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು ಅಷ್ಟುಮಾತ್ರವಲ್ಲದೆ ಈ ಯೋಜನೆಯಿಂದ ದೇಶದ ವಿದ್ಯುತ್ ಸಮಸ್ಯೆಯನ್ನು ನಿಭಾಯಿಸಲು ಸಾಕಷ್ಟು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯಡಿಯಲ್ಲಿ ಒಂದು ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರ ವಿದ್ಯುತ್ ಅಳವಡಿಸುವ ಕೇಂದ್ರದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಘೋಷಿಸಿದ್ದರು. ಈ ಯೋಜನೆಯ ಉದ್ದೇಶವು ಮೇಲ್ಛಾವಣಿ ಸೌರೀಕರಣದ ಮೂಲಕ ಕಡಿಮೆ ಮತ್ತು ಮಧ್ಯಮ ಆದಾಯದ ವ್ಯಕ್ತಿಗಳಿಗೆ ವಿದ್ಯುತ್ ಅನ್ನು ಒದಗಿಸುವುದು ಮತ್ತು ವಿದ್ಯುತ್ ಉತ್ಪಾದನೆಯ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸುವುದಾಗಿದೆ.

ಯೋಜನೆ ಜಾರಿಗೊಳಿಸಲು ರಾಷ್ಟ್ರ ಮಟ್ಟದ ಅಭಿಯಾನವನ್ನು ಆರಂಭಿಸುವಂತೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಛಾವಣಿ ಸೌರಶಕ್ತಿಯನ್ನು ಅಳವಡಿಸಿಕೊಳ್ಳಲು ಜನರಿಗೆ ಅರಿವು ಮೂಡಿಸಲು ಬೃಹತ್ ರಾಷ್ಟ್ರೀಯ ಮಟ್ಟದ ಅಭಿಯಾನವೂ ನಡೆಯುತ್ತಿದೆ ಎಂದು ಹೇಳಲಾಗಿದೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಐಪಿಎಸ್

ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಪತ್ನಿ ಬಂಧನದವರೆಗೆ ಅಂತ್ಯಕ್ರಿಯೆ ನೆರವೇರಿಸಲ್ಲ: ಮೃತ ಎಎಸ್ಐ ಸಂದೀಪ್ ಕುಟುಂಬ ಪಟ್ಟು!

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್ ಊಸರವಳ್ಳಿ ಆಟ: ಒಮ್ಮೆ ಪಾಕ್ ಪ್ರಧಾನಿ, ಮುನೀರ್ ಹೊಗಳಿಕೆ, ಮಗದೊಮ್ಮೆ ಮೋದಿಗೆ ಶಹಬ್ಬಾಸ್ ಗಿರಿ!

ಆರ್ ಜೆಡಿ

ಆರ್ ಜೆಡಿ-ಕಾಂಗ್ರೆಸ್ ಮೈತ್ರಿಕೂಟ ಸೀಟು ಹಂಚಿಕೆಯಲ್ಲಿ ಬಿರುಕು: ಚಿಹ್ನೆ ವಾಪಸ್ ಪಡೆದ ಲಾಲೂ ಯಾದವ್ ಪಕ್ಷ!

ಅನಿಲ್ ಚೌಹಾಣ್

ಪಾಕಿಸ್ತಾನದ ಪರಮಾಣು ದಾಳಿ ಸಂಚು ವಿಫಲಗೊಳಿಸಿದ್ದೇ ಆಪ್ ಸಿಂದೂರ: ಜನರಲ್ ಅನಿಲ್ ಚೌಹಾಣ್

ಪ್ರಿಯಾಂಕ್ ಖರ್ಗೆ

ನಿಮ್ಮ ತಂದೆ, ನೀವು ಬೆಂಬಲಿಸುವ ನಕಲಿ ಗಾಂಧಿ ಕುಟುಂಬದಿಂದ ಆರ್ ಎಸ್ ಎಸ್ ನಿಷೇಧ ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆಗೆ ಸಾಲು ಸಾಲು ಪ್ರಶ್ನೆ ಕೇಳಿದ ಬಿಜೆಪಿ!

ಸಿದ್ದರಾಮಯ್ಯ

ಜಸ್ಟ್ ಡಿನ್ನರ್ ಅಷ್ಟೇ, ರಾಜಕೀಯ ಚರ್ಚೆ ಇಲ್ಲ: ಸಚಿವ ಸಂಪುಟ ಪುನರ್ರಚನೆ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ!

Leave a Comment