SUDDIKSHANA KANNADA NEWS/ DAVANAGERE/DATE:12_08_2025
ದಾವಣಗೆರೆ: ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಗಟ್ಟಿಯಾಗಿಯೇ ಮುಂದುವರಿಸುತ್ತದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
READ ALSO THIS STORY: ಬಲಗೈ ಬಂಟನಂತಿದ್ದ ಕೆ. ಎನ್. ರಾಜಣ್ಣರನ್ನ ಸಿದ್ದರಾಮಯ್ಯ ಸಂಪುಟದಿಂದ ಕಿತ್ತು ಹಾಕಲು ಒಪ್ಪಿದ್ದೇಕೆ?
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬದಲಾವಣೆಯ ವ್ಯಕ್ತಿತ್ವ ದೇವೇಗೌಡರ ಬಳಿ ಇಲ್ಲ. ಪ್ರಧಾನಿ ಮೋದಿ ಕಳೆದ 11 ವರ್ಷಗಳಲ್ಲಿ ನೀಡಿದ ಆಡಳಿತ ಮೆಚ್ಚಿ ಮೈತ್ರಿಯಾಗಿದೆ. ಬಿಬಿಎಂಪಿ ಸೇರಿ ಯಾವುದೇ ಚುನಾವಣೆ ಇರಲಿ, ನಮ್ಮ ಮೈತ್ರಿ ಗಟ್ಟಿಯಾಗಿ ಮುಂದುವರಿಯುತ್ತದೆ ಎಂದು ತಿಳಿಸಿದರು.
ಧರ್ಮಸ್ಥಳ ಅರಣ್ಯದಲ್ಲಿ ಶವ ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಅನಾಮಿಕ ದೂರಿನ ಮೇರೆಗೆ ಎಸ್‌ಐಟಿ ಸ್ಥಳ ಪರಿಶೀಲನೆ ಬಗ್ಗೆ ನೋಡ್ತಿದೀವಿ. ತನಿಖೆ ಬಳಿಕ ಔಟ್‌ಕಮ್ ಏನು ಬರುತ್ತೆ ಆಮೇಲೆ ಚರ್ಚೆ ಮಾಡಬಹದು. ಎಸ್‌ಐಟಿ ತನಿಖೆಯಲ್ಲಿ ಏನು ಸಿಕ್ಕಿದೆ ಗೊತ್ತಿಲ್ಲ. ಇದು ಸೂಕ್ಷ್ಮ ವಿಚಾರ, ತನಿಖೆ ಪೂರ್ಣಗೊಂಡ ಬಳಿಕ ಪ್ರತಿಕ್ರಿಯಿಸೋದು ಒಳ್ಳೆಯದು ಎಂದು ಹೇಳಿದರು.
ದಿವಂಗತ ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಡಾ. ವಿಷ್ಣುವರ್ಧನ್ ಅವರು ಕನ್ನಡದ ಮೇರುನಟ. ಇತ್ತೀಚಿನ ಬೆಳವಣಿಗೆ ಹೀಗೆ ಆಗಬಾರದಿತ್ತು. ಈ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಸವಿವರವಾಗಿ ಮಾತನಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಎಂದು ತಿಳಿಸಿದರು.