SUDDIKSHANA KANNADA NEWS/ DAVANAGERE/DATE:12_08_2025
ದಾವಣಗೆರೆ: ವಾಸ್ತವ ಸ್ಥಿತಿಯನ್ನ ಮುಂದಿಟ್ಟು ಕಾಂಗ್ರೆಸ್ ಹಿರಿಯ ಮುಖಂಡ ಕೆ. ಎನ್. ರಾಜಣ್ಣ ಅಭಿಪ್ರಾಯ ಹೇಳಿದ್ದರು. ಅದರಲ್ಲಿ ತಪ್ಪೇನಿದೆ?. ರಾಜಣ್ಣರನ್ನು ಸಂಪುಟದಿಂದ ಏಕಾಏಕಿ ವಜಾ ಮಾಡಿದ್ದಾರೆ. ಅವರ ಹಿರಿತನಕ್ಕೆ ಕಾಂಗ್ರೆಸ್ ಪಕ್ಷ ಬೆಲೆ ಕೊಟ್ಟು ನಡೆಸಿಕೊಳ್ಳಬೇಕಿತ್ತು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
READ ALSO THIS STORY: ಬಲಗೈ ಬಂಟನಂತಿದ್ದ ಕೆ. ಎನ್. ರಾಜಣ್ಣರನ್ನ ಸಿದ್ದರಾಮಯ್ಯ ಸಂಪುಟದಿಂದ ಕಿತ್ತು ಹಾಕಲು ಒಪ್ಪಿದ್ದೇಕೆ?
ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿಯವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ 135 ಕ್ಷೇತ್ರ ಗೆದ್ದಿದ್ರು. ಆಗ ರಾಹುಲ್ ಗಾಂಧಿ ಅವರು ಕೇಳಲಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಸೀಟ್ ಬಂದಾಗ ಪ್ರಶ್ನೆ ಮಾಡ್ತಿದ್ದಾರೆ. ರಾಹುಲ್ ಗಾಂಧಿಯವರಿಗೆ ಸ್ಪಷ್ಟತೆ ಇಲ್ಲ, ರಾಜಣ್ಣರ ವಜಾ ಮಾಡಿದ್ರೆ ಏನಾಗುತ್ತೆ.? ಎಂದು ನಿಖಿಲ್ ಕುಮಾರಸ್ವಾಮಿ ಅವರು ಗುಡುಗಿದರು.
135 ಸ್ಥಾನ ಕಾಂಗ್ರೆಸ್ ಗೆದ್ದಾಗ ರಾಹುಲ್ ಗಾಂಧಿಗೆ ಸರಿ ಇತ್ತಾ. ಸಂಸತ್ ಚುನಾವಣೆಯಲ್ಲಿ ಹಿನ್ನೆಡೆಯಾದಾಗ ಮತಗಳ್ಳತನದ ಬಗ್ಗೆ ಆರೋಪ ಮಾಡಿ ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್ ಅನ್ನು ಓದಿ, ಘೋಷಣಾ ಪತ್ರಕ್ಕೆ ಸಹಿ ಹಾಕದೆ ಹೋಗಿದ್ದಾರೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಅನ್ನೋದು ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿ ಇದೆಯೇ? ಕಾಂಗ್ರೆಸ್ ಕೇಂದ್ರದ ನಾಯಕರ ಬಗ್ಗೆ ಜನ ಚರ್ಚೆ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಆರೋಪಿತ ಮಂತ್ರಿಗಳ ವಜಾಗೊಳಿಸುವ ವಿಚಾರ ಬರಲಿಲ್ಲ. ರಾಜಣ್ಣ ಅವರು ಹೇಳಿದ ವಿಚಾರದಲ್ಲಿ ವಾಸ್ತವ ಸ್ಥಿತಿ ಮಾತನಾಡಿದ್ದಾರೆ ಎಂದು ಹೇಳಿದರು.
ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡುವ ರಾಹುಲ್ ಗಾಂಧಿ ಅವರು ಪರಿಶಿಷ್ಟ ಸಮುದಾಯದವರಿಗೆ ಕೊಡುವ ಗೌರವ ಇದೇನಾ.? ರಾಜಣ್ಣ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು. ಅವರ ಹಿರಿತನಕ್ಕೆ ಕಾಂಗ್ರೆಸ್ ಬೆಲೆ ಕೊಟ್ಟು ನಡೆಸಿಕೊಳ್ಳಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
ಕೆ.ಎನ್.ರಾಜಣ್ಣ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಗೌರವಯುತವಾಗಿ ರಾಜೀನಾಮೆ ಕೇಳುವ ಪ್ರಕ್ರಿಯೆ ಮಾಡಬಹುದಿತ್ತು. ವಜಾಗೊಳಿಸಿ ಮುಜುಗರಕ್ಕೀಡು ಮಾಡಿ ಅವರ ಗೌರವಕ್ಕೆ ಧಕ್ಕೆ ಮಾಡಿದ್ದಾರೆ. ಈ ಬಗ್ಗೆ
ಪಕ್ಷಾತೀತವಾಗಿ ಚರ್ಚೆ ಆಗ್ತಿದೆ ಎಂದು ಹೇಳಿದರು.
ಪರಿಶಿಷ್ಟ ಸಮುದಾಯದ ರಾಜಣ್ಣಗೆ ಆಗಿರುವ ಮುಜುಗರ, ಅಗೌರವ ಇದನ್ನು ಕಾಂಗ್ರೆಸ್ ರಾಜ್ಯ ಕೇಂದ್ರ ನಾಯಕರು ಪ್ರಶ್ನೆ ಮಾಡಬೇಕು ಎಂದ ನಿಖಿಲ್ ಕುಮಾರಸ್ವಾಮಿ ಹೇಳಿದರು.