ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರಾಜ್ಯ, ಜಿಲ್ಲಾಡಳಿತದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಛಾಯಾಗ್ರಾಹಕರ ಕಡೆಗಣನೆ: ಮನು ಎಂ. ದೇವಗಿರಿ ಆರೋಪ!

On: November 1, 2025 12:49 PM
Follow Us:
ಕರ್ನಾಟಕ ರಾಜ್ಯೋತ್ಸವ
---Advertisement---

SUDDIKSHANA KANNADA NEWS/DAVANAGERE/DATE:01_11_2025

ದಾವಣಗೆರೆ: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವೇಳೆ ಛಾಯಾಗ್ರಾಹಕರನ್ನು ಕಡೆಗಣಿಸಲಾಗಿದೆ ಎಂದು ಕರ್ನಾಟಕ ಫೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಮನು. ಎಂ. ದೇವನಗರಿ ಆರೋಪಿಸಿದ್ದಾರೆ.

READ ALSO THIS STORY: ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಸೊಬಗು

ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಛಾಯಾಗ್ರಹಕರನ್ನು ಕಡೆಗಣಿಸಲಾಗಿದೆ. ದೀಪದ ಕೆಳಗೆ ಕತ್ತಲೆ ಎಂಬಂತೆ ಹಗಲು ರಾತ್ರಿ ಎಲ್ಲಾ ಸುದ್ದಿಗಳನ್ನು ಸೆರೆ ಹಿಡಿಯುವ ಫೋಟೋ ವಿಡಿಯೋಗ್ರಾಫರ್ ಗಳನ್ನು ದಾವಣಗೆರೆ ಜಿಲ್ಲಾಡಳಿತ ಅವಮಾನ ಮತ್ತು ಛಾಯಾಗ್ರಾಹಕರಿಗೆ ಅನ್ಯಾಯ ಮಾಡಿದೆ. ತಮಗೆ ಬೇಕಾದಾಗ ಎಲ್ಲಾ ಸಂಘ ಸಂಸ್ಥೆಗಳನ್ನು ಕರೆದು ಸಲಹೆ ಸೂಚನೆ ಕೇಳಲಾಗುತ್ತದೆ. ಆದ್ರೆ, ಮತ್ತೆ ಅದೇ ರಾಗ ಅದೇ ಹಾಡು ಎಂಬಂತೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಯಾವುದೇ ಶುಭ, ಸಮಾರಂಭಗಳು, ರಾಜಕೀಯ ಕಾರ್ಯಕ್ರಮಗಳು, ಚುನಾವಣೆ, ಪರೀಕ್ಷೆ ಸೇರಿದಂತೆ ಯಾವುದೇ ಸಂದರ್ಭ ಇರಲಿ ಛಾಯಾಗ್ರಾಹಕರ ಪ್ರಮುಖ ಪಾತ್ರ ಇರುತ್ತದೆ. ಎಲ್ಲಾ ಕಾರ್ಯಕ್ರಮಗಳಿಗೂ ಛಾಯಾಗ್ರಾಹಕರ ಅವಶ್ಯಕತೆ ಇದೆ. ಇದನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಸನ್ಮಾನಕ್ಕೆ ಆಯ್ಕೆ ಮಾಡಬಹುದಿತ್ತು. ಯಾವುದೇ ಸರ್ಕಾರಗಳಿಂದಲೂ ಯಾವುದೇ ಸೌಲಭ್ಯಗಳನ್ನು ಪಡೆಯದೆ ತಾವೇ ಸ್ವತಃ ಬಂಡವಾಳ ಹಾಕಿಕೊಂಡು ಛಾಯಾಗ್ರಹಣ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಛಾಯಾಗ್ರಾಹಕರ ಪರಿಗಣನೆ ಮಾಡದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಮೂರುವರೆ ಲಕ್ಷಕ್ಕೂ ಅಧಿಕ ಛಾಯಾಗ್ರಾಹಕರು ಮತ್ತು ವೃತ್ತಿಬಾಂಧವರು ಕುಟುಂಬ ವರ್ಗದವರು ಕೆಲಸ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿಯೂ ಛಾಯಾಗ್ರಹಣ ಜೊತೆಯಲ್ಲಿಯೇ ಅನೇಕ ಸಂಘ ಸಂಸ್ಥೆಗಳಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ರಾಜ್ಯ ಸರ್ಕಾರ ಹಾಗೂ ದಾವಣಗೆರೆ ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವ ಸನ್ಮಾನ ಆಯ್ಕೆ ಕಾರ್ಯಕ್ರಮದಲ್ಲಿ ಅವಕಾಶ ನೀಡಬಹುದಿತ್ತು. ಲಕ್ಷಾಂತರ ಛಾಯಾಗ್ರಾಹಕರಿಗೆ ಮಾಡಿದ ಅನ್ಯಾಯ ಎಂದು ಮನು ಎಂ. ದೇವನಗರಿ ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಕರ್ನಾಟಕ

ನೀತಿ ಆಯೋಗ 2025 ವರದಿ: ಐಟಿ, ಹಣಕಾಸು, ಆತಿಥ್ಯ ಮತ್ತು ರಿಯಲ್ ಎಸ್ಟೇಟ್ ಸೇರಿ ಸೇವಾ ಕ್ಷೇತ್ರಗಳಲ್ಲಿ ದೇಶದಲ್ಲೇ ಕರ್ನಾಟಕ ಫಸ್ಟ್!

ಸಿದ್ದರಾಮಯ್ಯ

18000ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ: ಉದ್ಯೋಗದ ಬಗ್ಗೆ ಮಹತ್ವದ ಮಾಹಿತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ದ್ರೋಹದಿಂದ 1 ಲಕ್ಷ ಕೋಟಿ ರೂ. ಕರ್ನಾಟಕಕ್ಕೆ ನಷ್ಟ: ಸಿಎಂ ಸಿದ್ದರಾಮಯ್ಯ ಸಿಡಿಮಿಡಿ!

ಸಿದ್ದರಾಮಯ್ಯ

ಎಐನಿಂದ ಉದ್ಯೋಗ ನಷ್ಟವಾಗದಂತೆ ಕನ್ನಡ ಭಾಷೆ ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ದ: ಸಿಎಂ ಸಿದ್ದರಾಮಯ್ಯ ಘೋಷಣೆ

ಸಿದ್ದರಾಮಯ್ಯ

800 ಕನ್ನಡ ಮತ್ತು 100 ಉರ್ದುಶಾಲೆಗಳು ಕೆಪಿಎಸ್ ಶಾಲೆಗಳಾಗಿ ಅಭಿವೃದ್ಧಿ ಜೊತೆಗೆ ಮದರಸಾಗಳಲ್ಲಿ ಕನ್ನಡ ಕಲಿಕೆಗೆ ಆದ್ಯತೆ: ಸಿದ್ದರಾಮಯ್ಯ ಘೋಷಣೆ!

ನೇಮಕಾತಿ

ನ.13 ರಿಂದ 19 ರವರೆಗೆ ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಅಗ್ನಿವೀರ್ ನೇಮಕಾತಿ ರ‍್ಯಾಲಿ

Leave a Comment