SUDDIKSHANA KANNADA NEWS/ DAVANAGERE/ DATE:09-01-2025
ದಾವಣಗೆರೆ: ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಪ್ರತೀಕ್ ಎಸ್.ವಿ. ಅಸ್ಸಾಂನ ಗುಹಾಹಟಿಯಲ್ಲಿ ನಡೆದ 6ನೇ ವಾರ್ಷಿಕ ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿ ತನ್ನ ಪ್ರತಿಭೆ ಪ್ರದರ್ಶಿಸಿ ಬಂಗಾರದ ಪದಕವನ್ನು ಮುಡಿಗೆರಿಸಿಕೊಂಡಿದ್ದಾರೆ.
ನಗರದ ಈಗಲ್ ಫಿಟ್‌ನೆಸ್ ಅಂಡ್ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ನ ಕ್ರೀಡಾ ವಿದ್ಯಾರ್ಥಿಯಾಗಿರುವ ಪ್ರತೀಕ್ ಎಸ್.ವಿ. ಗ್ಲೋಬಲ್ ಇಂಟರ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್, ಗುಹಾಹಟಿ ಹಾಗೂ ಅಸ್ಸಾಂ ಸರ್ಕಾರದ
ವತಿಯಿಂದ 2024ನೇ ಸಾಲಿನ ಡಿಸೆಂಬರ್ 27, 28 ಮತ್ತು 29 ರಂದು ನಡೆದ 6ನೇ ವಾರ್ಷಿಕ ರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ ಸ್ಪರ್ಧೆಗಳಲ್ಲಿ ಮೋಯ್ ಥೈ ಕಿಕ್ ಬಾಕ್ಸಿಂಗ್ 69 ಕೆ.ಜಿ. ಒಳಗಿನ ವಿಭಾಗದಲ್ಲಿ ತರಬೇತುದಾರರಾದ ವೆಂಕಿ ಸೆನ್ಸೈ ಅವರ ಮಾರ್ಗದರ್ಶನದಲ್ಲಿ ಬಂಗಾರದ ಪದಕವನ್ನು ಪಡೆದಿದ್ದಾರೆ.
ಈ ಸಾಧನೆಗಾಗಿ ಜಿಎಂಯು ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಕುಲಪತಿಗಳಾದ ಡಾ. ಹೆಚ್.ಡಿ. ಮಹೇಶಪ್ಪ, ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್., ಜಿಎಂಐಟಿ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ, ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಬಸವರಾಜು ಪಿ.ಎಸ್., ನಿರ್ದೇಶಕರಾದ ಶಿವ ಕುಮಾರ್ ಎಸ್. ಸೇರಿದಂತೆ ಇಡೀ ಜಿಎಂ ವಿಶ್ವವಿದ್ಯಾಲಯ ಮತ್ತು ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಸಮುದಾಯದವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.