SUDDIKSHANA KANNADA NEWS/ DAVANAGERE/ DATE-30-06-2025
ದಾವಣಗೆರೆ: ರಾಷ್ಟ್ರೀಯ ಪಕ್ಷಿ ನವಿಲು ಕಳೇಬರಹವೊಂದು ಪತ್ತೆ ಆದ ಘಟನೆ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ.
ನವಿಲು ಸಾವಿಗೆ ಹಲವು ಅನುಮಾನ ಹುಟ್ಟಿಕೊಂಡಿದ್ದು ನಿಖರ ಕಾರಣ ಪತ್ತೆ ಹಚ್ಚಲು ಅರಣ್ಯ ಇಲಾಖೆಯವರು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಹೊನ್ನಾಳಿ ವಲಯ ಅರಣ್ಯ ಇಲಾಖೆಯ ಅಧಿಕಾರಿ ಬಿ.ಕಿಶೋರ ನಾಯ್ಕ ತಿಳಿಸಿದ್ದಾರೆ.
Read Also This Story: ದಾವಣಗೆರೆಯ ಅಶೋಕನಗರದ ಹೊರವಲಯದ ಮನೆಯಲ್ಲಿ ವೇಶ್ಯಾವಾಟಿಕೆ: ಆರೋಪಿ ಬಂಧನ!
ತಾಲೂಕಿನ ಸೋಗಿಲು ಗ್ರಾಮದ ಜಮೀನೊಂದರಲ್ಲಿ ನವಿಲಿನ ಕಳೇಬರಹ ಪತ್ತೆ ಆಗಿರುವ ಬಗ್ಗೆ ಸ್ಥಳೀಯರ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ದೌಡಾಹಿಸಿದ್ದು ವನ್ಯಜೀವಿ ಕಾಯ್ದೆ 1972 ರ (ಸೆಕ್ಷನ್ 59, 51ರ) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ವೈದ್ಯರ ಮರಣೋತ್ತರ ಪರೀಕ್ಷೆಯ ವರದಿ ನಂತರ ನವಿಲಿನ ಸಾವಿನ ನಿಖರ ಕಾರಣ ಹೊರಬರಬೇಕಿದೆ. ಡಿಆರ್‌ಎಫ್ ಬರ್ಕತ್ ಅಲಿ ಬೀಟ್ ಫಾರೆಸ್ಟ್ ಆಫೀಸರ್ ಎಚ್.ಪಿ.ಆಶಾ, ಅಂಜಲಿ ಸೇರಿದಂತೆ ಇತರರು ಇದ್ದರು.