SUDDIKSHANA KANNADA NEWS/ DAVANAGERE/ DATE:07-05-2023
ಶಿವಮೊಗ್ಗ (SHIVAMOGGA): ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ (NARENDRA MODI) ಅವರ ಚುನಾವಣಾ ರೋಡ್ ಶೋ (ROAD SHOW) , ರ್ಯಾಲಿ ಜೋರಾಗಿ ನಡೆಯುತ್ತಿದೆ. ಶತಾಯಗತಾಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕೆಂಬ ಹಠ ತೊಟ್ಟಿರುವ ನರೇಂದ್ರ ಮೋದಿ (NARENDRA MODI) ಬೆಂಗಳೂರು, ಶಿವಮೊಗ್ಗದಲ್ಲಿ ಭರ್ಜರಿ ಮತಯಾಚನೆ ನಡೆಸಿದರು. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರನ್ನು ಮುಕ್ತಕಂಠದಿಂದ ಹಾಡಿ ಹೊಗಳಿದರು.
ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ಏರ್ಪಡಿಸಲಾಗಿದ್ದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ನರೇಂದ್ರ ಮೋದಿ ಅವರು ಎಂದಿನಂತೆ ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಶಿವಮೊಗ್ಗ(SHIVAMOGGA)ದ ಸೌಂದರ್ಯಕ್ಕೆ ನಾನು ಮಾರು ಹೋಗಿದ್ದೇನೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಹುಟ್ಟಿದ ನಾಡು, ದೇವಿ ಸಿಗಂಧೂರು ಚೌಡೇಶ್ವರಿ, ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿಗೆ ನಮಸ್ಕರಿಸುತ್ತೇನೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಆಗಮಿಸಿದ್ದೆ. ಕಾಂಗ್ರೆಸ್ (CONGRESS) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ನಿಂದ ಈ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಎಂದು ಪ್ರತಿಪಾದಿಸಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸಾಧನೆಗಳ ಬಗ್ಗೆ ಮಾತನಾಡಿದ ಮೋದಿ ನಾವು 30 ಲಕ್ಷಕ್ಕೂ ಹೆಚ್ಚು ಉದ್ಯೋಗವನ್ನು ನಾವು ಪ್ರತಿವರ್ಷ ಸೃಷ್ಟಿಸುತ್ತಿದ್ದೇವೆ. ಕಳೆದ 9 ವರ್ಷಗಳಲ್ಲಿ 200 ಕ್ಕೂ ಹೆಚ್ಚು ವಿವಿಧ ಬೀಜ ಉತ್ಪಾದನೆ
ಮಾಡಿ ರೈತರಿಗೆ ನೆರವಾಗಿದ್ದೇವೆ. ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಯಡಿ ವರ್ಷಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹತ್ತು ಸಾವಿರ ರೂಪಾಯಿ ನೀಡುತ್ತಿದೆ. ಇಂಥ ಯೋಜನೆ ಯಾಕೆ ಕಾಂಗ್ರೆಸ್ ಮಾಡಿರಲಿಲ್ಲ ಎಂದು ಮೋದಿ (MODI) ಪ್ರಶ್ನಿಸಿದರು.
ಮಾಜಿ ಸಿಎಂ ಯಡಿಯೂರಪ್ಪರಿಗೆ ರೈತರ ಬಗ್ಗೆ ಅಪಾರ ಕಾಳಜಿ ಇದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಾನು ಗುಜರಾತ್ (GUJARATH) ಸಿಎಂ ಆಗಿದ್ದೆ. ಆಗ ಅಡಿಕೆ ಬೆಳೆಗಾರರ ಸಮಸ್ಯೆ, ಆಗಬೇಕಿರುವ ಕೆಲಸ ಹಾಗೂ ಪರಿಹಾರ ಕುರಿತಂತೆ ಯಡಿಯೂರಪ್ಪರು ನಿಯೋಗದೊಂದಿಗೆ ದೆಹಲಿಗೆ ಬಂದಿದ್ದರು. ಆ ಬಳಿಕ ಗುಜರಾತ್ ಗೆ ಬಂದು ನನ್ನ ಬಳಿ ಮನವಿ ಮಾಡಿದ್ದರು. ನಾನು ಪ್ರಧಾನಿಯಾದ ಬಳಿಕ ಅಡಿಕೆ ಬೆಳೆಗಾರರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದೇವೆ. ಯಾವುದೇ ಕಾರಣಕ್ಕೂ ಅಡಿಕೆ ಬೆಳೆಗಾರರು ಆತಂಕಕ್ಕೊಳಗಾಗಬೇಡಿ ಎಂದು ಅಭಯಹಸ್ತ ನೀಡಿದರು.
ಬಿ. ಎಸ್. ಯಡಿಯೂರಪ್ಪ ಅವರು ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ. ಅದು ಈಡೇರಬೇಕಾದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು. ನಾನು ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಸಚಿವ
ಕೆ. ಎಸ್. ಈಶ್ವರಪ್ಪ ಅವರ ಜೊತೆ ಮಾತನಾಡಿದ್ದೆ. ದೂರವಾಣಿ ಮೂಲಕ ಮಾತನಾಡಿದಾಗ ಶಿವಮೊಗ್ಗದ ಜನರು ತೋರಿದ ಪ್ರೀತಿ, ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ಹೇಳಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾಷಾಂತರ ಮಾಡಬೇಕಾ ಎಂದು ಕೇಳಿದರು. ಆಗ ಜನರು ಬೇಡ ಬೇಡ ಎಂಬ ಉತ್ತರ ನೀಡಿದರು. ಆ ಬಳಿಕ ಹಿಂದಿಯಲ್ಲಿಯೇ ಭಾಷಣ ಮುಂದುವರಿಸಿದರು.