SUDDIKSHANA KANNADA NEWS/ DAVANAGERE/ DATE:15-10-2023
ಬೆಂಗಳೂರು: ಮೈಸೂರು ದಸರಾ (Mysore Dasara)ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಖ್ಯಾತ ಸಂಗೀತ ನಿರ್ದೇಶಕ, ಗೀತ ರಚನೆಕಾರ ಹಂಸಲೇಖ ಉದ್ಘಾಟನೆ ನೆರವೇರಿಸಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ಸಚಿವರಾದ ಹೆಚ್. ಸಿ. ಮಹಾದೇವಪ್ಪ, ಕೆ. ಜೆ. ಜಾರ್ಜ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಗಣ್ಯಾತಿ ಗಣ್ಯರು ಹಾಜರಿದ್ದರು.
READ ALSO THIS STORY:
Israel: ಮೊದಲು ಬಂದವರಿಗೆ ಮೊದಲ ಆದ್ಯತೆ: ಯುದ್ಧಪೀಡಿತ ಸ್ಥಳದಿಂದ ಭಾರತಕ್ಕೆ ಬರುತ್ತಿದ್ದಾರೆ ಭಾರತೀಯರು: ಇಸ್ರೇಲ್ ನಲ್ಲಿ ಎಷ್ಟು ಭಾರತೀಯರಿದ್ದಾರೆ ಗೊತ್ತಾ…?
ಪೂಜ್ಯ ಕನ್ನಡಕ್ಕೆ, ಪೂಜ್ಯ ಕನ್ನಡಗರಿಗೆ ಧನ್ಯವಾದ. ಸಿಎಂ ಸಿದ್ದರಾಮಯ್ಯರು ಸಾಮಾನ್ಯ ವ್ಯಕ್ತಿಯು ನಾಡಹಬ್ಬ ದಸರಾ ಉದ್ಘಾಟನೆ ಮಾಡುತ್ತಾರೆ ಎಂದು ಹೇಳಿದ್ದರು. ಅವರಿಗೆ ಧನ್ಯವಾದ ಹೇಳಿದ್ರೆ ಸಾಲದು. ಚಿರಋಣಿಯಾಗಿರುತ್ತೇನೆ. ನನ್ನ ಕೈ ಕನ್ನಡದ ದೀಪ ಹಚ್ಚಿದೆ. ಕನ್ನಡದಲ್ಲಿ ನಮ್ಮ ತಾಯಿ ಇದ್ದಾಳೆ, ನಮ್ಮ ಹಾಡಿದೆ. ನಮ್ಮ ನದಿ ಇದೆ, ನಮ್ಮ ನಿಧಿ ಇದೆ. ನಮ್ಮ ಜನ ಇದೆ ಎಂದು ಹಂಸಲೇಖ ತಿಳಿಸಿದರು,
ದಸರಾ ಎನ್ನೋದು ಜೀವಂತ ಮಹಾಕಾವ್ಯ. ಕನ್ನಡ ನಮ್ಮ ಶೃತಿ ಆಗಬೇಕು. ಅಭಿವೃದ್ಧಿ ನಮ್ಮ ಕೃತಿಯಾಗಬೇಕು. ಕಾವೇರಿಗೆ ಮಿತಿ ಇದೆ. ಆದ್ರೆ, ಕಾವೇರಿ ಕಾರುಣ್ಯಕ್ಕೆ ಎಲ್ಲಿ ಮಿತಿ ಇದೆ? ಕಾವೇರಿ, ಗಂಗಾ ಮುಟ್ಟೋದು ಬಂಗಾಳಕೊಲ್ಲಿಯಲ್ಲಿ. ಕನ್ನಡ ಭಾಷೆಗೆ ಮಿತಿ ಇದೆ. ಅದರ ಭಾವಕ್ಕೆ ಎಲ್ಲಿ ಮಿತಿ ಇದೆ. ನಮಗೆ ದೆಹಲಿ ಬೇಕು, ದೆಹಲಿಗೆ ಬೇಕು. ಟೀಕೆ ಮಾಡುವುದು ಬೇಡ. ನಾವು ಕನ್ನಡಿಗರು. ಕನ್ನಡವನ್ನು ಪ್ರಪಂಚದ ವೇದಿಕೆಯಲ್ಲಿ ಪ್ರತಿಷ್ಠಾಪಿಸಬೇಕು ಎಂದು ಹೇಳಿದರು.
ಆಗ ರಾಷ್ಟ್ರದ ಜೊತೆ ಕನ್ನಡ ಜೋಡಿಯಾಗಿ ಜಗತ್ತಿನಲ್ಲಿ ಮೆರೆಯಲು ಸಾಧ್ಯ. ಶಾಂತಿ ಮಂತ್ರ ಕನ್ನಡ. ಅಭಿವೃದ್ಧಿ ಮತ್ತು ಶಾಂತಿ ಸಮೃದ್ಧಿ ಕನ್ನಡಿಗರಿಗೆ ಒಂದಂಶದ ಕಾರ್ಯಕ್ರಮ ಆಗಬೇಕು. ಕನ್ನಡದ ಅಭಿವೃದ್ಧಿಯಾಗಬೇಕು. ಶಾಂತಿ ಸಮೃದ್ಧಿಗೊಳಿಸಬೇಕು ಎಂದು ಹೇಳಿದರು.
ಕನ್ನಡ ಗೊತ್ತಿಲ್ಲ ಎಂಬುವವರಿಗೆ, ಕನ್ನಡ ಬರುತ್ತಿಲ್ಲ ಎನ್ನುವವರಿಗೆ, ಕನ್ನಡವೇ ಗೊತ್ತಿಲ್ಲ ಎಂಬುವವರಿಗೆ ಕನ್ನಡ ಕಲಿಸಬೇಕು. ಕರ್ನಾಟಕ ಮಾತ್ರವಲ್ಲ, ಪ್ರಪಂಚದಲ್ಲಿಯೂ ಕನ್ನಡ ಭಾಷೆಯ ಕಂಪು ಪಸರಿಸಬೇಕು. ಕನ್ನಡ ಕಲಿಯಲು ಕಾರ್ಪೊರೇಟ್ ಸಂಘ ದೊಡ್ಡ ಸಮೂಹ ಇದೆ ಬಳಸಿಕೊಳ್ಳೋಣ. ಪ್ರತಿಭೆ, ಉದ್ಯಮ, ಅಗತ್ಯತೆ ಇದೆ ಎಂದು.
ನನ್ನ ಐವತ್ತು ವರ್ಷದ ಜೀವನದಲ್ಲಿ ಇದೊಂದು ಅವಿಸ್ಮರಣೀಯ ಘಟನೆ. ನನ್ನ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ನಾದಬ್ರಹ್ಮ ಹಂಸಲೇಖ ತಿಳಿಸಿದರು.