ನನ್ನ ಗಂಡ ಮಹಿಳೆಯರೊಂದಿಗೆ ಗೌರವದಿಂದ ನಡೆದುಕೊಳ್ಳತ್ತಾರೆ, ನಮ್ಮ ಮನೆಗೆ ಬರುವ ಮಹಿಳೆಯರನ್ನು ಗೌರವದಿಂದ ಕಾಣುತ್ತಾರೆ ಅಂತ ಪತ್ನಿ ಪಲ್ಲವಿ ಮಾತನಾಡಿದ್ದಾರೆ.
ಚಿಕ್ಕಮಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೈಕೋರ್ಟ್ ಆದೇಶದ ಮೇರೆಗೆ ಸಿ.ಟಿ.ರವಿಯವರನ್ನು ದಾವಣಗೆರೆಯಲ್ಲಿಯೇ ಬಂಧನ ಮುಕ್ತರಾಗಿದ್ದಾರೆ.ಇತ್ತ ಬಿಡುಗಡೆಯ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ನಾಯಕರು ಸಂತಸ ವ್ಯಕ್ತಪಡಿಸಿದ್ದು, ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದರು.ಚಿಕ್ಕಮಗಳೂರಿನ ಸಿ.ಟಿ.ರವಿಯವರ ಮನೆಯಲ್ಲಿಯು ಸಹ ಸಂಭ್ರಮಚಾರಣೆ ನಡೆದಿದೆ.
ಬಂಧನದ ಯಾವುದೇ ರೀತಿಯ ಮಾಹಿತಿಗಳು ನಮಗೆ ಬಂದಿಲ್ಲ, ನನಗೆ ಆಗಲಿ ನಮ್ಮ ಮನೆಯವರಿಗಾಗಲಿ ಇದರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಸಿ.ಟಿ.ರವಿ ಪತ್ನಿ ಹೇಳಿದರು.ನಾನು ಮಂಗಳೂರಿಗೆ ಹೋಗಿದ್ದೆ ನಂತರ ಟಿವಿ ನೋಡುವ ಮೂಲಕ ನನಗೆ ವಿಷಯ ತಿಳಿಯಿತು ಎಂದಿದ್ದಾರೆ.
ನಾನು ರಾತ್ರಿಯೇ ಅವರಿಗೆ ಕಾಲ್ ಮಾಡಿದ್ದೆ, ಆದರೆ ಅವರು ತಾವು ಇದ್ದಂತಹ ಜಾಗದ ಲೋಕೆಶನ್ ಗಳನ್ನು ಮಾತ್ರ ಕಳಿಸುತ್ತಿದ್ದರು.ಯಾವುದೋ ಕಾಡು, ಡ್ಯಾಂ, ಇನ್ನ್ಯಾವೂದೊ ಫಾರ್ಮ್ ಹೌಸ್ ಬಳಿ ಹೀಗೆಲ್ಲಾ ಸುತ್ತಾಡಿಸಿದ್ದಾರೆ ಎಂದು ಆರೋಪಿಸಿದರು.