ಬೇಕಾಗುವ ಪದಾರ್ಥಗಳು…
ಮಟನ್ ಕೈಮಾ- 200 ಗ್ರಾಂ
ರವೆ- 1 ಬಟ್ಟಲು
ಎಣ್ಣೆ- 3 ಚಮಚ
ಈರುಳ್ಳಿ- ಸಣ್ಣಗೆ ಹಚ್ಚಿದ್ದು ಅರ್ಧ ಬಟ್ಟಲು
ಹಸಿಮೆಣಸಿನ ಕಾಯಿ- 2
ಶುಂಠಿ,ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಬಟಾಣಿ- ಅರ್ಧ ಬಟ್ಟಲು
ಕರಿಬೇವು- ಸ್ವಲ್ಪ
ಅಚ್ಚ ಖಾರದ ಪುಡಿ – 1 ಚಮಚ
ದನಿಯಾ ಪುಡಿ- ಅರ್ಧ ಚಮಚ
ಚಕ್ಕೆ-ಲವಂಗ ಪುಡಿ- ಕಾಲು ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಟೊಮೆಟೋ – 1 ಸಣ್ಣಗೆ ಹೆಚ್ಚಿದ್ದು
ಬಿಸಿ ನೀರು- ಮೂರು ಬಟ್ಟಲು
ಕೊತ್ತಂಬರಿ ಸೊಪ್ಪು- ಸ್ವಲ್ಪ
ಮಾಡುವ ವಿಧಾನ…
ಮೊದಲಿಗೆ ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಕಾದ ನಂತರ ರವೆಯನ್ನು ಕೆಂಪೆಗೆ ಹುರಿದು ಪಕ್ಕೆಕ್ಕೆ ಇಟ್ಟುಕೊಳ್ಳಿ.
ಮತ್ತೊಂದು ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಈರುಳ್ಳಿ ಹಾಕಿ, ಕೆಂಪಗಾದ ಬಳಿಕ ಹಸಿಮೆಣಸಿನ ಕಾಯಿ, ಕರಿಬೇವು ಹಾಕಿ. ಇದೀಗ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಬಟಾಣಿ ಹಾಗೂ ಟೊಮೆಟೋ ಹಾಕಿ ಹುರಿದುಕೊಳ್ಳಿ.
ನಂತರ ಬಟನ್ ಕೈಮಾ, ಅರಿಶಿಣದ ಪುಡಿ ಹಾಕಿ 5 ನಿಮಿಷ ಬೇಯಲು ಬಿಡಿ. ಬಳಿಕ ಅಚ್ಚ ಖಾರದ ಪುಡಿ, ದನಿಯಾ ಪುಡಿ, ಚಕ್ಕೆ ಲವಂಗ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ 3 ನಿಮಿಷ ಬೇಯಲು ಬಿಡಿ. ಇದೀಗ ಬಿಸಿನೀರು ಹಾಕಿ 10 ನಿಮಿಷ ಚೆನ್ನಾಗಿ ಕುದಿಯಲು ಬಿಡಿ, ಬಳಿಕ ಗಂಟುಗಳಾಗದಂತೆ ಸ್ವಲ್ಪ ಸ್ವಲ್ಪವೇ ರವೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಸಣ್ಣ ಉರಿಯಲ್ಲಿ 3 ನಿಮಿಷ ಬಿಡಿ, ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಕೈಮಾ ಉಪ್ಪಿಟ್ಟು ಸವಿಯಲು ಸಿದ್ಧ.