SUDDIKSHANA KANNADA NEWS/DAVANAGERE/DATE:06_10_2025
ದಾವಣಗೆರೆ: ದಸರಾ ಹಬ್ಬದ ಪ್ರಯುಕ್ತ ವಿಜಯದಶಮಿಯಂದು ಶೋಭಾಯಾತ್ರೆ ನಡೆಸಲು ಜನರಿಗೆ ಆಹ್ವಾನಿಸಲು ನಡೆಸಿದ್ದ ವಿಜಯದಶಮಿ ಬೈಕ್ ರ್ಯಾಲಿ ವೇಳೆ “ಹಿಂದೂಸ್ತಾನದಲ್ಲಿರಬೇಕಾದರೆ ಹಿಂದೂಗಳು ಹೇಳಿದಂಗೆ ಕೇಳಬೇಕು” ಎಂಬ ಘೋಷಣೆ ಹಾಕಲಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ಮುಸ್ಲಿಂ ಒಕ್ಕೂಟವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಿದೆ.
READ ALSO THIS STORY: ಸೈಯದ್ ಸೈಫುಲ್ಲಾ ಸಾಬ್ ಭೇಟಿ ಮಾಡಿ ಆಶೀರ್ವಾದ ಪಡೆದ ಹೆಚ್. ಬಿ. ಮಂಜಪ್ಪ, ವಡ್ನಾಳ್ ಜಗದೀಶ್
ಬೈಕ್ ರ್ಯಾಲಿ ಉದ್ದಕ್ಕೂ ಹಿಂದೂಸ್ತಾನದಲ್ಲಿ ಇರಬೇಕಾದರೆ ಹಿಂದೂಗಳು ಹೇಳದಂಗೆ ಕೇಳಬೇಕು ಎಂಬ ಘೋಷಣೆ ಕೂಗಿದರು. ಮಾತ್ರವಲ್ಲ, ಅಕ್ಟೋಬರ್ 2 ರಂದು ಶೋಭ ಯಾತ್ರೆಯಲ್ಲಿ ಸಹ ಹಂಸಬಾವಿ ಸರ್ಕಲ್ ನಲ್ಲಿ ಸುಮಾರು ಹೊತ್ತು ಈ ಘೋಷಣೆ ಹಾಕಲಾಗಿದೆ. ಇದು ಸಂವಿಧಾನ ಬಾಹಿರ ಎಂದು ಆರೋಪಿಸಿದೆ.
ಮತ್ತೊಂದು ಧರ್ಮದ ಬಗ್ಗೆ ಅವಹೇಳನ ಮಾಡಿ ಮತ್ತೊಂದು ಧರ್ಮದ ಹೊಗಳಿಕೆ ಸರಿಯೇ? ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆ ಮತ್ತು ಜಾತಿ. ಪಂಗಡ, ಧರ್ಮದರಿಗೆ ಸಮಾನ ಹಕ್ಕು ನೀಡಿದೆ. ಆದ್ದರಿಂದ ಈ ಘೋಷಣೆ ಸಂವಿಧಾನ ವಿರೋಧಿ, ದೇಶ ದ್ರೋಹಿ ಆಗಿದೆ. ಅಕ್ಟೋಬರ್ 1ರಂದು ದಾವಣಗೆರೆ ಯ ಶ್ರೀ ದುರ್ಗಾಂಬಿಕಾ ದೇವಸ್ಥಾನ ಮುಂದೆ ದುರ್ಗಾ ದೌಡ್ ಹೆಸರಿನಲ್ಲಿ ಹರಿತವಾದ ಶಸ್ತ್ರಾಸ್ತ್ರಗಳಾದ ಖಡ್ಗ, ತಲವಾರು, ಜಾತ್ರೆಗಳಲ್ಲಿ ಪ್ರಾಣಿ ಕಡಿಯುವ ಪಡಗಲ ಕೈಯಲ್ಲಿ ಹಿಡಿದುಕೊಂಡು ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಮೆರವಣಿಗೆ ಮಾಡಲಾಗಿದೆ. ಈ ವಿಡಿಯೋ ಚಿತ್ರೀಕರಿಸಿ ರಕ್ತ ಚರಿತ್ರೆ ಎಂಬ ಹಾಡು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿ ಸರ್ವಜನಿಕರಿಗೆ ಭಯ ಉಂಟು ಮಾಡಿದ್ದಾರೆ ಎಂದು ದೂರಿದೆ.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಾಜದಲ್ಲಿ ಶಾಂತಿ ಕದಡಲು ಮುಂದಾದವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ.
ಮನವಿ ಸಲ್ಲಿಸುವ ವೇಳೆ ಒಕ್ಕೂಟದ ಪ್ರಮುಖರಾದ ಟಿ.ಅಸ್ಗರ್, ಇಬ್ರಾಹಿಂ ಖಲೀವುಲ್ಲಾ, ಮೊಹಮ್ಮದ್ ಅಲಿ, ಶೋಯೇಬ್, ಸಾಜಿದ್ ಅಹ್ಮದ್, ಜಬೀವುಲ್ಲಾ ಐಟಿಐ, ಆದಿಲ್ ಖಾನ್, ಇಲ್ಲು, ದಾದಾಪೀರ್, ಇಮ್ರಾನ್, ರಫೀಕ್, ತಮನ್ ಬಾಷಾ, ಅಜ್ಮತ್, ಖಾಜಾ, ಸಾಧಿಕ್, ಸಿದ್ಧಿಕ್ ಮತ್ತಿತರರು ಹಾಜರಿದ್ದರು.