SUDDIKSHANA KANNADA NEWS/DAVANAGERE/DATE:07_10_2025
ಗೋರಖ್‌ಪುರ: ಸಹೋದರಿಯ ಅನೈತಿಕ ಸಂಬಂಧಕ್ಕೆ ಬೇಸತ್ತಿದ್ದ ಸಹೋದರನೇ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಕರೆ ಮಾಡಿದ ಘಟನೆ ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ನಡದಿದೆ.
READ ALSO THIS STORY: 400,000 ಮಹಿಳೆಯರ ಸಾಮೂಹಿಕ ಅತ್ಯಾಚಾರಕ್ಕೆ ಅನುಮತಿ ನೀಡಿದ್ದ ಪಾಕ್: ಉಗ್ರ ರಾಷ್ಟ್ರದ ಕರಾಳತೆ ಬಿಚ್ಚಿಟ್ಟ ಭಾರತ!
ಉತ್ತರ ಪ್ರದೇಶದ ಗೋರಖ್‌ಪುರದ ಆದಿತ್ಯ ಯಾದವ್ ಹತ್ಯೆ ಮಾಡಿದ ಆರೋಪಿ. ಅನೈತಿಕ ಸಂಬಂಧ ಹೊಂದಿದ್ದಕ್ಕಾಗಿ ತನ್ನ ಸಹೋದರಿಯನ್ನು ಕೊಂದಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.
ಪೊಲೀಸರಿಗೆ ಕರೆ ಮಾಡುವ ಮೊದಲು ಶವದೊಂದಿಗೆ ಒಂದೂವರೆ ಗಂಟೆಗಳ ಕಾಲ ಆರೋಪಿ ಕುಳಿತಿದ್ದ. ಆರೋಪಿಯನ್ನು ಉತ್ತರ ಪ್ರದೇಶದ ಗೋರಖ್‌ಪುರದ ಆದಿತ್ಯ ಯಾದವ್ ಎಂದು ಗುರುತಿಸಲಾಗಿದೆ. ತನ್ನ 19 ವರ್ಷದ ಸಹೋದರಿ ನಿತ್ಯಾ ಯಾದವ್‌ಗೆ
ಎಷ್ಟೇ ಹೇಳಿದರೂ ಕೇಳುತ್ತಿರಲಿಲ್ಲ. ಪ್ರಣಯ ಸಂಬಂಧ ಹೊಂದಿದ್ದಳು. ಮುಂದುವರಿಸದಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕ್ಯಾರೆೇ ಎಂದಿರಲಿಲ್ಲವಂತೆ.
12 ನೇ ತರಗತಿಯ ವಿದ್ಯಾರ್ಥಿನಿ ನಿತ್ಯಾ ಯಾದವ್ ಕಳೆದ ಮೂರು ವರ್ಷಗಳಿಂದ ಒಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ವಿವಾಹಿತ ಮಹಿಳೆಯರ ಗುರುತು ಎಂದು ಹೇಳಲಾಗುವ ತನ್ನ ಹಣೆಯ
ಮೇಲೆ ಕುಂಕುಮವನ್ನು ಹಾಕಿಕೊಳ್ಳುವುದನ್ನು ಆದಿತ್ಯ ನೋಡಿದ್ದ. ಆದಿತ್ಯ ತನ್ನ ಸಹೋದರಿಯೊಂದಿಗೆ ಹಲವಾರು ಬಾರಿ ಚರ್ಚಿಸಲು ಪ್ರಯತ್ನಿಸಿದ್ದ. ಆದರೆ ಅವಳು ತನ್ನ ಪ್ರಿಯತಮನನ್ನು ಬಿಡಲು ನಿರಾಕರಿಸಿದ್ದರಿಂದ ಎಲ್ಲವೂ ವ್ಯರ್ಥವಾಯಿತು.
ನಿತ್ಯಾ ಮನೆಯಿಂದ ಹೊರಟುಹೋಗಿದ್ದಳು. ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಮರುದಿನ, ಅವಳು ತನ್ನ ಪ್ರೇಮಿಯೊಂದಿಗೆ ಹತ್ತಿರದ ರೆಸ್ಟೋರೆಂಟ್‌ನಲ್ಲಿ ಇದ್ದದ್ದು ಗೊತ್ತಾಯಿತು. ಆದಿತ್ಯ ಅವಳ ಮನಸ್ಸನ್ನು ಬದಲಾಯಿಸಲು ಮತ್ತು
ಅವಳನ್ನು ಮನೆಗೆ ಕರೆತರಲು ಪ್ರಯತ್ನಿಸಿದನು, ಆದರೆ ದಾರಿಯಲ್ಲಿ, ನಿತ್ಯಾ ವಾಪಸ್ ಮನೆಗೆ ಬರಲ್ಲ ಎಂದು ಹಠ ಹಿಡಿದಿದ್ದಾಳೆ. ಮನೆಯಿಂದ ಎರಡೂವರೆ ಕಿಲೋಮೀಟರ್ ದೂರದ ಏಕಾಂತ ಸ್ಥಳಕ್ಕೆ ಕರೆದೊಯ್ದನು.
ನಂತರ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆ ತಲೆಗೆ ಗಾಯವಾಯಿತು. ಬಳಿಕ ಕಾಲುವೆಗೆ ತಳ್ಳಿದನು ಎಂದು ಆದಿತ್ಯ ಪೊಲೀಸರಿಗೆ ಹೇಳಿದ್ದಾನೆ. ಆದಿತ್ಯ ತನ್ನ ಸಹೋದರಿಯ ಮೃತ ದೇಹದೊಂದಿಗೆ ಒಂದೂವರೆ ಗಂಟೆಗಳ ಕಾಲ ಕುಳಿತುಕೊಂಡಿದ್ದ. ನಂತರ
ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಅಪರಾಧದ ಬಗ್ಗೆ ತಿಳಿಸಿದ್ದ. ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದಿತ್ಯನನ್ನು ವಶಕ್ಕೆ ಪಡೆಯಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೋರಖ್‌ಪುರದ
ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶ್ರೀವಾಸ್ತವ ತಿಳಿಸಿದ್ದಾರೆ.
ಆದಿತ್ಯ ತನ್ನ ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರನೊಂದಿಗೆ ವಾಸಿಸುತ್ತಿದ್ದರು. ತಂದೆಯ ಮರಣದ ನಂತರ, ಆದಿತ್ಯ ತನ್ನ ಸಹೋದರಿಯರಿಗೆ ಶಿಕ್ಷಣ ನೀಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ. ಅವರನ್ನು ಪೋಷಿಸಲು ಕೂಲಿ
ಕೆಲಸ ಮಾಡುತ್ತಿದ್ದ.