SUDDIKSHANA KANNADA NEWS/DAVANAGERE/DATE:30_10_2025
ದಾವಣಗೆರೆ : ನಗರದ ಹಳೇ ಕುಂದುವಾಡ ಮುಖ್ಯ ರಸ್ತೆ ಅಪೂರ್ಣ ವಿಚಾರ ದೂರು ಬಂದ ಹಿನ್ನಲೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಅವರು ಬೆಳಿಗ್ಗೆ ಕುಂದುವಾಡ ಕೆರೆ ರಸ್ತೆ ಹಾಗೂ ಹಳೇ ಕುಂದುವಾಡಕ್ಕೆ ಆಗಮಿಸಿ ವಾರ್ಡ್ ಬೀಟ್ ನಡೆಸಿದರು.
READ ALSO THIS STORY: ಉದ್ಯೋಗ ಸುದ್ದಿ: ಲೆಕ್ಕಿಗರ ಹುದ್ದೆಗೆ ಅರ್ಜಿ ಆಹ್ವಾನ
ಅನೇಕ ದೂರುಗಳ ಬಂದ ಹಿನ್ನೆಲೆ ಅಧಿಕಾರಿಗಳ ಜೊತೆ ಆಯುಕ್ತರು ಆಗಮಿಸಿದರು, ಈ ವೇಳೆ ಸಾರ್ವಜನಿಕರು ದೂರಗಳ ಸರಮಾಲೆಯನ್ನ ಮುಂದಿಟ್ಟರು, ರಸ್ತೆಯನ್ನು ಅರ್ಧಂಬರ್ಧ ಮಾಡಿ ಬಿಡಲಾಗಿದೆ. ಗುಂಡಿಯನ್ನು ಅರ್ಧಂ ಬರ್ಧ ಮುಚ್ಚಲಾಗಿದೆ, ಇತ್ತ ಬೀದಿ ದೀಪ ಆಫ್ ಆಗಿ ಹಲವು ವರ್ಷಗಳೇ ಕಳೆದಿವೆ, ಸ್ವಚ್ಚತೆ ಇಲ್ಲ, ಹೇಳೋರು, ಕೇಳೋರು ಯಾರು ಇಲ್ಲದಂತಾಗಿದೆ ಎಂದು ಅಧಿಕಾರಿಗಳಿಗೆ ಜನರು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತೆ ರೇಣುಕಾ, ದೊಡ್ಡದಾದ ಗುಂಡಿಗಳ ಬಗ್ಗೆ ವಾರ್ಡ್ ನ ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಗಮನಿಸಿಲ್ಲ, ಏನಾದರೂ ಅನಾಹುತ ಆದ ಬಳಿಕ ಗುಂಡಿ ಮುಚ್ಚುತ್ತೀರಾ, ಈ ಕೂಡಲೇ ಗುಂಡಿಗಳನ್ನು ಮುಚ್ಚಿ ಇಲ್ಲದಿದ್ದರೇ ಸಂಬಂಧಪಟ್ಟ ಅಧಿಕಾರಿಯ ಮೇಲೆ ಕ್ರಮ ವಹಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಇನ್ನು ಗ್ರಾಮದಲ್ಲಿ ಬೀದಿ ದೀಪ ಸರಿಪಡಿಸಲಾಗಿಲ್ಲ, ಚರಂಡಿ ಸ್ವಚ್ಚತೆ ಇಲ್ಲ, ಈ ಕೂಡಲೇ ಬೀದಿ ದೀಪ ಸರಿಪಡಿಸಿ, ಸ್ವಚ್ಚತೆಗೆ ಆದ್ಯತೆ ನೀಡಿ ಮೊದಲು ಜಂಗಲ್ ಕಟ್ಟಿಂಗ್ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ವಾರ ಕೋರ್ಟ್ ಆದೇಶ ಬರಲಿದೆ. ಬಳಿಕ ಬಿಂದಾಸ್ ಬಾರ್ ಮುಂಭಾಗದ ರಸ್ತೆ ಪೂರ್ಣ ಮಾಡುತ್ತೇವೆ. ಕೆರೆ ರಸ್ತೆ ಟೆಂಡರ್ ಹಂತದಲ್ಲಿದ್ದು ಆದಷ್ಟು ಬೇಗ ರಸ್ತೆ ನಿರ್ಮಿಸಿಕೊಡುತ್ತೇವೆ ಎಂದು ಆಯುಕ್ತರು ಭರವಸೆ ನೀಡಿದರು..
ಈ ಸಂದರ್ಭದಲ್ಲಿ ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಮುಖಂಡರಾದ ಜೆ. ಮಾರುತಿ, ಡಿಜಿ ಪ್ರಕಾಶ್, ಮಾರುತೇಶ್, ರಾಜೂ ಕರೂರು, ವಿಜಯ್, ಗಣೇಶ್, ಮಧುನಾಗರಾಜ್, ಸಂತೋಷ್, ಮಡಿವಾಳಪ್ಪ ಸೇರಿದಂತೆ ಗ್ರಾಮಸ್ಥರು, ಅಧಿಕಾರಿಗಳು ಮತ್ತಿತರರಿದ್ದರು.







