SUDDIKSHANA KANNADA NEWS/ DAVANAGERE/ DATE-01-07-2025
ದಾವಣಗೆರೆ: ಕುಸಿದು ಬೀಳುವ ಹಂತದಲ್ಲಿದ್ದ ದೇಶ ಕಾಯುವ ಯೋಧನ ಸ್ಮಾರಕಕ್ಕೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ (Prabha Mallikarjun) ಅವರು ಕಾಯಕಲ್ಪ ಕಲ್ಪಿಸಿದ್ದಾರೆ. ಈ ಮೂಲಕ ಯೋಧನ ತಾಯಿಯ ಆಸೆ ಈಡೇರಿಸಿದ್ದಾರೆ.
ದಾವಣಗೆರೆ ತಾಲ್ಲೂಕಿನ ಹದಡಿ ಗ್ರಾಮದ ಯೋಧರಾದ ಆರ್. ಎಂ. ನಾಗಾರ್ಜುನ್ ಅವರು 2023 ರಲ್ಲಿ ಚಂಡಿಘಡದಲ್ಲಿ ಮರಣ ಹೊಂದಿದ್ದರು. ಯೋಧ ನಾಗಾರ್ಜುನ್ ಅವರ ಸ್ವಗ್ರಾಮವಾದ ಹದಡಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

Read Also This Story: ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಪ್ರಯೋಜನ ಮತ್ತು ಲಾಭದ ಬಗ್ಗೆ ತಿಳಿಯಿರಿ
ಯೋಧನ ಜ್ಞಾಪಕಾರ್ಥಕವಾಗಿ ಸ್ಮಾರಕ ನಿರ್ಮಾಣಕ್ಕೆ ಎರಡು ಲಕ್ಷ ರೂಪಾಯಿ ಅನುದಾನ ಮೀಸಲಿಡಲಾಗಿತ್ತು. ಆದರೆ ಎರಡು ವರ್ಷವಾದರೂ ಸ್ಮಾರಕ ನಿರ್ಮಾಣ ಮಾಡದೆ ನಿರ್ಲಕ್ಷ್ಯ ಮಾಡಲಾಗಿತ್ತು. ಇದರಿಂದ ಮನನೊಂದ ಮೃತಯೋಧ ನಾಗಾರ್ಜುನ್ ಅವರ ತಾಯಿ ಹನುಮಕ್ಕ ಅವರು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿ ತಮ್ಮ ಪುತ್ರನ ಜ್ಞಾಪಕಾರ್ಥವಾಗಿ ಸ್ಮಾರಕ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿದ್ದರು.
Read Also This Story: ಮಣಿಪಾಲ ಆರೋಗ್ಯ ಕಾರ್ಡ್ 2025 ರ ನೋಂದಣಿ ಪ್ರಾರಂಭ: ರಿಯಾಯಿತಿ ಪ್ರಯೋಜನಗಳ ಸಂಪೂರ್ಣ ಮಾಹಿತಿ
ಬೇಡಿಕೆಗೆ ಸ್ಪಂದಿಸಿದ ಸಂಸದರು ಗ್ರಾ.ಪಂ ಅಧ್ಯಕ್ಷರು, ಪಿಡಿಒ ಹಾಗೂ ಗುತ್ತಿಗೆದಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಯಾವುದೇ ಕಾರಣಕ್ಕೂ ವಿಳಂಬ ಮಾಡದಂತೆ ಶೀಘ್ರದಲ್ಲೇ ಸ್ಮಾರಕ ನಿರ್ಮಾಣಕ್ಕೆ ಸೂಚನೆ ನೀಡಿದ್ದರು. ಇದೀಗ ಯೋಧನ ಸ್ಮಾರಕಕ್ಕೆ ಕಾಯಕಲ್ಪ ದೊರೆತಿದೆ. ಯೋಧನ ತಾಯಿಗೆ ಸಾಂತ್ವನ ಹೇಳಿದ ಸಂಸದರು ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯವನ್ನು ಕೊಡಿಸುವುದಾಗಿ ತಿಳಿಸಿದ್ದಾರೆ.