ಭೋಪಾಲ್: ಚಲಿಸುವ ಅಥವಾ ನಿಲುಗಡೆಯಾಗಿರುವ ಸಾರ್ವಜನಿಕ ವಾಹನಗಳಲ್ಲಿ ಮಹಿಳೆಯರ ಸುರಕ್ಷತೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿಯಾದ ಮತ್ತೊಂದು ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಸ್‌ನೊಳಗೆ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಕಾಮುಕನಿಗೆ, ಅದೇ ಮಹಿಳೆ ತಕ್ಕ ಶಾಸ್ತಿ ಮಾಡಿ ಕಪಾಳಮೋಕ್ಷ ಮಾಡಿರುವ ಸಿಸಿಟಿವಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ನಡೆದಿದ್ದೇನು?: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ದೇವರಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ನಲ್ಲಿ ಈ ಘಟನೆ ವರದಿಯಾಗಿದೆ. ಬಸ್‌ನೊಳಗೆ ಇಬ್ಬರು ಯುವತಿಯರು ಕುಳಿತಿದ್ದಾಗ ಅಲ್ಲಿಗೆ ಬಂದ ನಿತೀಶ್ ಗೊಂಡ್ ಎಂಬ 21 ವರ್ಷದ ಯುವಕ, ಯುವತಿಯರ ಅತ್ಯಂತ ಹತ್ತಿರ ಬಂದು ನಿಂತಿದ್ದಾನೆ. ಅಷ್ಟೇ ಅಲ್ಲದೆ, ಬಸ್‌ನಲ್ಲಿ ಬೇರೆ ಪ್ರಯಾಣಿಕರು ಇದ್ದಾಗಲೂ ತನ್ನ ಪ್ಯಾಂಟ್ ಜಿಪ್ ಬಿಚ್ಚಿ ವಿಕೃತಿ ಮೆರೆಯಲು ಯತ್ನಿಸಿದ್ದಾನೆ. ಬಳಿಕ ಯುವತಿಯ ಹೆಗಲಿಗೆ ತನ್ನ ಖಾಸಗಿ ಅಂಗವನ್ನು ಮುಟ್ಟಿಸಲು ಯತ್ನಿಸಿದ್ದಾನೆ ಎಂದು ವರದಿಗಳು ತಿಳಿಸಿವೆ.
ತಿರುಗಿಬಿದ್ದ ಧೀರ ಮಹಿಳೆ:
ಆರಂಭದಲ್ಲಿ ಆತನ ವಿಕೃತ ನಡವಳಿಕೆಯಿಂದ ದೂರ ಸರಿಯಲು ಯುವತಿ ಯತ್ನಿಸಿದ್ದಾಳೆ. ಆದರೆ, ಆರೋಪಿ ಆಕೆಯ ಬೆನ್ನು ಬಿಡದೆ ಕಿರುಕುಳ ಮುಂದುವರಿಸಿದಾಗ ಆಕ್ರೋಶಗೊಂಡ ಮಹಿಳೆ ತಕ್ಷಣ ತಿರುಗಿಬಿದ್ದು ಆತನಿಗೆ ಸಾರ್ವಜನಿಕರ ಮುಂದೆಯೇ ಹಿಗ್ಗಾಮುಗ್ಗಾ ಕಪಾಳಮೋಕ್ಷ ಮಾಡಿದ್ದಾಳೆ. ಮಹಿಳೆಯ ರೌದ್ರಾವತಾರ ಮತ್ತು ಧರ್ಮದೇಟಿನಿಂದ ಗಾಬರಿಗೊಂಡ ಕಾಮುಕ ತಕ್ಷಣ ಬಸ್‌ನಿಂದ ಇಳಿದು ಪರಾರಿಯಾಗಿದ್ದಾನೆ. ಇಡೀ ದೃಶ್ಯ ಬಸ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪೊಲೀಸ್ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ:
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಆರೋಪಿ ನಿತೀಶ್ ಗೊಂಡ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಸಂತ್ರಸ್ತ ಮಹಿಳೆಯಾಗಲಿ ಅಥವಾ ಬೇರೆ ಯಾರೂ ಆಗಲಿ ಈವರೆಗೆ ಲಿಖಿತ ದೂರು ನೀಡದ ಕಾರಣ ಪೊಲೀಸರು ಕೇವಲ ಮುನ್ನೆಚ್ಚರಿಕೆ (Preventive Action) ಕ್ರಮದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಡಿಯೋ ಸಾಕ್ಷ್ಯ ಕಣ್ಣೆದುರೇ ಇದ್ದರೂ ಪೊಲೀಸರು ಕೇವಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವಯಂಪ್ರೇರಿತ (Sua Moto) ಪ್ರಕರಣ ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನೂತನ ಎಸ್‌ಡಿಒಪಿ ಅರುಣ್ ಉಯಿಕಿ, “ಸಿಸಿಟಿವಿ ದೃಶ್ಯಾವಳಿಗಳನ್ನು ತಾಂತ್ರಿಕವಾಗಿ ಪರಿಶೀಲಿಸಲಾಗುತ್ತಿದೆ. ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ. ತನಿಖೆಯಲ್ಲಿ ಇದು ಗಂಭೀರ ಅಪರಾಧ ಎಂದು ಸಾಬೀತಾದರೆ, ದೂರು ಇಲ್ಲದಿದ್ದರೂ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
- flashing on crowded bus
- Madhya Pradesh bus CCTV video
- MP crime news
- Nitish Gond detained
- Sagar district Deori bus stand
- viral video MP bus harassment
- woman slaps man on bus
- women safety public transport
- ನಿತೀಶ್ ಗೊಂಡ್ ಬಂಧನ
- ಬಸ್‌ನಲ್ಲಿ ಲೈಂಗಿಕ ಕಿರುಕುಳ
- ಮಧ್ಯಪ್ರದೇಶ ಕ್ರೈಮ್ ನ್ಯೂಸ್
- ಮಧ್ಯಪ್ರದೇಶ ಬಸ್ ಸಿಸಿಟಿವಿ ವಿಡಿಯೋ
- ಮಹಿಳಾ ಸುರಕ್ಷತೆ
- ಮಹಿಳೆಯಿಂದ ಕಪಾಳಮೋಕ್ಷ
- ವೈರಲ್ ವಿಡಿಯೋ
- ಸಾಗರ್ ಜಿಲ್ಲೆ ದೇವರಿ ಬಸ್ ನಿಲ್ದಾಣ





Leave a comment