ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕೇಂದ್ರದ ಈ ಯೋಜನೆಯಡಿ ಪ್ರತಿ ತಿಂಗಳು ಸಿಗುತ್ತೆ ರೂ 3,000! ಇಲ್ಲಿದೆ ಸಂಪೂರ್ಣ ವಿವರ

On: September 17, 2024 12:51 PM
Follow Us:
---Advertisement---

ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ (Pradhan Mantri Shram Yogi Maandhan Yojana)ಯೋಜನೆಯಡಿ ಅರ್ಹ ಅರ್ಜಿದಾರರು ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ರೂ ಹೇಗೆ ಪಡೆಯಬಹುದು ಎಂದು ಈ ಅಂಕಣದಲ್ಲಿ ವಿವರಿಸಲಾಗಿದ್ದು, ಇದರ ಜೊತೆಗೆ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವ ವಿಧಾನವನ್ನು ಸಹ ತಿಳಿಸಲಾಗಿದೆ.

ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆಯಡಿ(best pension scheme) ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳೇನು? ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಫಲಾನುಭವಿಗಳು ಅನುಸರಿಸಬೇಕಾದ ಕ್ರಮಗಳೇನು? ಇತ್ಯಾದಿ ಸಂಪೂರ್ಣ ವಿವರ ಇಲ್ಲಿ ವಿವರಿಸಲಾಗಿದೆ.

ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆಯಡಿ ಅಸಂಘಟಿತ ವರ್ಗದವರು ಅಂದರೆ ರೈತರು, ಕೃಷಿ ಕಾರ್ಮಿಕರು, ಬೀದಿ ವ್ಯಾಪಾಗಳು ಸೇರಿದಂತೆ ಎಲ್ಲಾ ವರ್ಗದವರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬಹುದು.

Total Number of Registration-ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆ ಅಂಕಿ-ಅಂಶ ವಿವರ ಹೀಗಿದೆ:

ಒಟ್ಟು ನೋಂದಣಿಯಾದ ಫಲಾನುಭವಿಗಳು: 45,25,357ಒಟ್ಟು ನೋಂದಣಿಯಾದ ಹೆಣ್ಣು ಮಕ್ಕಳು: 24,01,353ಒಟ್ಟು ನೋಂದಣಿಯಾದ ಗಂಡು ಮಕ್ಕಳು: 21,23,965

Documents-ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ/Adhar card ಪ್ರತಿ.2) ಬ್ಯಾಂಕ್ ಖಾತೆ ವಿವರ/Bank pass book3) IFSC/ MICR ಕೋಡ್/IFSC code4) ಮೊಬೈಲ್ ಸಂಖ್ಯೆ/Mobile number5) ಪೋಟೋ/Photo6) ಇ-ಶ್ರಮ ಕಾರ್ಡ/E-Shrama card

Pension yojana-ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆ  ಪ್ರತಿ ತಿಂಗಳು ಸಿಗುತ್ತೆ ರೂ 3,000:

ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆ ಪ್ರತಿ ತಿಂಗಳು ರೂ 3,000 ಪಿಂಚಣಿಯನ್ನು ಪಡೆಯಲು ಅರ್ಜಿದಾರರು ತಮ್ಮ ವಯಸ್ಸಿನ ಆಧಾರದ ಮೇಲೆ ಈ ಕೆಳಗೆ ನೀಡಿರುವ ಚಾರ್ಟ್ ನ ಆಧಾರದ ಮೇಲೆ ಪ್ರತಿ ತಿಂಗಳು ಇಂತಿಷ್ಟು ಹಣವನ್ನು 60 ವರ್ಷ ತುಂಬುವ ವರೆಗೆ ಠೇವಣಿ ಮಾಡಿಕೊಂಡು ಹೋಗಬೇಕು.

ಉದಾಹರಣೆಗೆ ನಿಮಗೆ ಈಗ 30 ವರ್ಷ ವಯಸ್ಸು ಅಗಿದೆ ಅಂದುಕೊಳ್ಳಿ ನೀವು ಪ್ರತಿ ತಿಂಗಳು  ರೂ 105 ಅನ್ನು ಪಾವತಿ ಮಾಡಿಕೊಂಡು ಒಟ್ಟು 30 ವರ್ಷ ಪಾವತಿ ಮಾಡಿದರೆ ನಿಮಗೆ 60 ವರ್ಷ ತುಂಬಿದ ಬಳಿಕ ನಿಮಗೆ ಪ್ರತಿ ತಿಂಗಳು ರೂ 3,000/- ಪಿಂಚಣಿ ಬರುತ್ತದೆ.

Pension application-ಅರ್ಜಿಯನ್ನು ಯಾರೆಲ್ಲ ಸಲ್ಲಿಸಬಹುದು?

1) ಪ್ರಧಾನ ಮಂತ್ರಿ ಶ್ರಮಯೋಗಿ ಮನ್ ಧನ್ ಯೋಜನೆಯಡಿ ಅಸಂಘಟಿತ ವರ್ಗದವರು ಅಂದರೆ ರೈತರು, ಕೃಷಿ ಕಾರ್ಮಿಕರು, ಬೀದಿ ವ್ಯಾಪಾಗಳು ಸೇರಿದಂತೆ ಎಲ್ಲಾ ವರ್ಗದವರು ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಬಹುದು.

2) ಅರ್ಜಿದಾರರ ವಯಸ್ಸು 18 ರಿಂದ 40ರ ಒಳಗಿರಬೇಕು.

PMSYM Online application- ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಅರ್ಜಿದಾರರು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಅಗತ್ಯ ವಿವರವನ್ನು ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step-1: ಪ್ರಥಮದಲ್ಲಿ ಈ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶ ಮಾಡಬೇಕು.

Step-2: ಇದಾದ ಬಳಿಕ “Login” ಬಟನ್ ಮೇಲೆ ಕ್ಲಿಕ್ ಮಾಡಿ “Self Enrollment” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-3: ತದನಂತರ ನಿಮ್ಮ ಮೊಬೈಲ್ ನಂಬರ್,ಆಧಾರ್ ಕಾರ್ಡ ನಂಬರ್ ಹಾಕಿ ಮೊಬೈಲ್ ನಂಬರ್ ಗೆ ಬರುವ ಒಟಿಪಿ(Enter OTP) ನಂಬರ್ ಅನ್ನು ನಮೂದಿಸಿ “Proceed” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಮೇಲಿನ ಹಂತಗಳನ್ನು ಪೂರ್ಣ ಗೊಳಿಸಿದ ಬಳಿಕ ಲಾಗಿನ್ ಅಗುತ್ತದೆ ಇಲ್ಲಿ “Enrollment” ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್   ಮಾಡಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.

Helpline- 18002676888/14434

Join WhatsApp

Join Now

Join Telegram

Join Now

Leave a Comment