ದಾವಣಗೆರೆ: ಮಹಿಳೆಯರೊಂದಿಗೆ ಅಶ್ಲೀಲವಾಗಿ ವಿಡಿಯೋ (VEDEO) ಮಾಡಿ ಬೆದರಿಸಿ ಬಲವಂತವಾಗಿ ಹಣದ ಬೇಡಿಕೆ ಇಟ್ಟು ರೂ. 1,50,000 ಪಡೆದು ಮೋಸ ಮಾಡಿದ್ದ ಆರೋಪಿಗಳನ್ನು ವಿದ್ಯಾನಗರ ಪೊಲೀಸರು (VIDYANAGARA POLICE) ಬಂಧಿಸಿದ್ದಾರೆ.
ದಾವಣಗೆರೆ (DAVANAGERE) ವಾಸಿಗಳಾದ ಹರೀಶ, ಚಂದ್ರು, ಗಂಗಾ ಹಾಗೂ ಗಿಡ್ಡ ಗಂಗಮ್ಮಳನ್ನು ಬಂಧಿಸಿ ಆರೋಪಿತರಿಂದ ಒಟ್ಟು 1,30,000 ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.
ದೂರುದಾರನಿಗೆ ಆರೋಪಿತರು ಫೋನ್ (PHONE) ಮಾಡಿದ್ದು ಮಿಸ್ ಕಾಲ್ (MISSCALL)ಆಗಿದೆ. ನಂತರ ವಾಪಾಸ್ ಫೋನ್ (PHONE) ಮಾಡಿದಾಗ ಗಂಗಾ ಹೆಸರಿನ ಹಿರೇಮಳಲಿ ಗ್ರಾಮದವಳು ಅಂತಾ ಪರಿಚಯಿಸಿಕೊಂಡು ಪ್ರತಿನಿತ್ಯ ಫೋನ್ ನಲ್ಲಿ ಮಾತನಾಡಿ ಹಣ ಪಡೆದಿದ್ದಾಳೆ. ಆ ಬಳಿಕ ಮಾರ್ಚ್ (MARCH) 26ರಂದು ದಾವಣಗೆರೆ (DAVANAGERE)ಗೆ ಬಂದಿದ್ದಾಗ ಗಂಗಾ ಎಂಬಾಕೆಯು ಹರೀಶ, ಚಂದ್ರು, ಮತ್ತೊಬ್ಬ ವ್ಯಕ್ತಿ, ಗಿಡ್ಡ ಗಂಗಮ್ಮ ಹಾಗೂ ಇನ್ನೊಬ್ಬ ಮಹಿಳೆ ಜೊತೆ ಸೇರಿಕೊಂಡು ಸಂಚು ಮಾಡಿ ತಮ್ಮ ಜೊತೆಗೆ ಊಟಕ್ಕೆ ಬರಬೇಕೆಂದು ಒತ್ತಾಯ ಮಾಡಿ ಸಿದ್ದವೀರಪ್ಪ ಬಡಾವಣೆಯ ಮನೆಗೆ ಕರೆಯಿಸಿಕೊಂಡಿದ್ದಾಳೆ.
ಆ ಬಳಿಕ ಆರೋಪಿತರೆಲ್ಲರೂ ಸೇರಿಕೊಂಡು ಸಂತ್ರಸ್ತನಿಗೆ ಹೆದರಿಸಿ ಅಶ್ಲೀಲವಾಗಿ ವಿಡಿಯೋ (VEDEO) ಮಾಡಿ ಬೆದರಿಸಿ ಬಲವಂತವಾಗಿ ರೂ. 30 ಲಕ್ಷಕ್ಕೆ ಬೇಡಿಕೆ ಇಟ್ಟು ರೂ. 1,50,000 ವಸೂಲಿ ಮಾಡಿದ್ದಾರೆ.
ಈ ವಿಚಾರವನ್ನು ಯಾರಿಗಾದರೂ ಹೇಳಿದಲ್ಲಿ ಜೀವಸಹಿತ ಬಿಡುವುದಿಲ್ಲ ಎಂದು ಆರೋಪಿಗಳು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ (DAVANAGERE) ನಗರ ಉಪ ವಿಭಾಗದ ಡಿವೈಎಸ್‌ಪಿ (DYSP) ಮಲ್ಲೇಶ್ ಪಿ. ದೊಡ್ಡಮನಿ ಮತ್ತು ವಿದ್ಯಾನಗರ (VIDYANAGARA) ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ ಮಾರ್ಗದರ್ಶನಲ್ಲಿ ಪಿಎಸ್ ಐ ಮೇಘರಾಜ್ ದೊಡ್ಡಮನಿ, ವಿದ್ಯಾನಗರ ಪಿಎಸ್ ಐ ರೇಣುಕಾ ಜಿ.ಎಂ. ಹಾಗೂ ವಿದ್ಯಾನಗರ ಠಾಣೆಯ ಸಿಬ್ಬಂದಿ ವಿಜಯ್, ಗೋಪಿನಾಥ ನಾಯ್ಕ, ಯೋಗೇಶ್ ನಾಯ್ಕ, ಭೋಜಪ್ಪ ಕಿಚಡಿ, ಆಶಾಮತ್ತು ಡಿ.ಸಿ.ಆರ್.ಬಿ ವಿಭಾಗದ ಆಂಜನೇಯ ಅವರನ್ನ ಒಳಗೊಂಡ ತಂಡವು ಆರೋಪಿಗಳನ್ನು ಸೆರೆ ಹಿಡಿದಿದೆ.
ಮೇಲ್ಕಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾದ ಅಧಿಕಾರಿ, ಸಿಬ್ಬಂದಿಯನ್ನು ಎಸ್ಪಿ ಸಿ. ಬಿ. ರಿಷ್ಯಂತ್, ಎಎಸ್ಪಿ ಆರ್.ಬಿ ಬಸರಗಿ ಅವರು ಶ್ಲಾಘಿಸಿದ್ದಾರೆ.