Migraine Home Remedies: ಮೈಗ್ರೇನ್ ಒಂದು ರೀತಿಯ ತಲೆನೋವು. ಇದರಲ್ಲಿ ತಲೆಯ ಅರ್ಧಭಾಗದಲ್ಲಿ ನೋವು ಇರುತ್ತದೆ. ಈ ನೋವು ಕೆಲವೊಮ್ಮೆ ಸಾಮಾನ್ಯ ಮತ್ತು ಕೆಲವೊಮ್ಮೆ ತುಂಬಾ ತೀವ್ರವಾಗಿರುತ್ತದೆ. ಅಂದರೆ ಸಹಿಸಲು ಸಹ ಕಷ್ಟವಾಗುತ್ತದೆ. ನಿದ್ರೆಯ ಕೊರತೆ, ಹೆಚ್ಚು ಗಂಟೆಗಳ ಕಾಲ ಹಸಿದಿರುವುದು, ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿಯನ್ನು ದಿನದಲ್ಲಿ ಹೆಚ್ಚಾಗಿ ಬಳಸುವುದು ಮುಂತಾದ ಹಲವು ಕಾರಣಗಳಿಂದ ಮೈಗ್ರೇನ್ ಸಮಸ್ಯೆ ಉಂಟಾಗುತ್ತದೆ.
ಮೈಗ್ರೇನ್ ಚಿಕಿತ್ಸೆಯು ಸಂಪೂರ್ಣವಾಗಿ ಸಾಧ್ಯವಿಲ್ಲ. ಆದರೆ ಕೆಲವು ಔಷಧಿಗಳೊಂದಿಗೆ ಅದನ್ನು ನಿಯಂತ್ರಣ ಮಾಡಬಹುದು. ಅಂತಹ ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಅಜ್ವೈನ್ ಟೀ: ಮಧ್ಯಾಹ್ನ ಅಥವಾ ರಾತ್ರಿಯ ಊಟದ ನಂತರ ಅಜ್ವೈನ್ ಟೀಯನ್ನು ಕುಡಿಯಬೇಕು. ಇದನ್ನು ಕುಡಿಯುವುದರಿಂದ ಶೀಘ್ರವೇ ಮೈಗ್ರೇನ್ ತಲೆನೋವಿನಿಂದ ಪರಿಹಾರ ಪಡೆಯಬಹುದು.
ನೆನೆಸಿದ ಒಣದ್ರಾಕ್ಷಿ: ಬೆಳಗ್ಗೆ ಎದ್ದ ತಕ್ಷಣ ಮೊದಲು ತಿನ್ನಬೇಕಾದ್ದು ಒಣದ್ರಾಕ್ಷಿ. 10 ರಿಂದ 15 ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಅದನ್ನು ನೀರಿನಿಂದ ತೆಗೆದು ಚೆನ್ನಾಗಿ ಜಗಿದು ತಿನ್ನಬೇಕು. 12 ವಾರಗಳ ಕಾಲ ನಿರಂತರವಾಗಿ ತಿನ್ನುವುದರಿಂದ ಪ್ರಯೋಜನಗಳನ್ನು ಪಡೆಯಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.