ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಆರೋಗ್ಯಕರವಾದ ಹಾಗೂ ಸುಲಭವಾಗಿ ಮೆಂತ್ಯೆ ಗೊಜ್ಜು ಮಾಡುವ ವಿಧಾನ…

On: August 3, 2024 7:12 PM
Follow Us:
---Advertisement---

ಬೇಕಾಗುವ ಪದಾರ್ಥಗಳು…

  • ಎಳ್ಳು- 2 ಚಮಚ
  • ಜೀರಿಗೆ- 1 ಚಮಚ
  • ಒಣ ಕೊಬ್ಬರಿ – ಕಾಲು ಬಟ್ಟಲು
  • ಒಣಮೆಣಸು- 5-6
  • ದನಿಯಾ- 1 ಚಮಚ
  • ಸಾಸಿವೆ- ಸ್ವಲ್ಪ
  • ಇಂಗು- ಸ್ವಲ್ಪ
  • ಕರಿಬೇವು-ಸ್ವಲ್ಪ
  • ಈರುಳ್ಳಿ- 1
  • ಅರಿಶಿನ- ಸ್ವಲ್ಪ
  • ಉಪ್ಪು-ರುಚಿಗೆ ತಕ್ಕಷ್ಟು
  • ಮೊಳಕೆ ಬರಿಸಿದ ಮೆಂತ್ಯೆ ಕಾಳು- 1 ಬಟ್ಟಲು
  • ಹುಣಸೆ ಹಣ್ಣಿನ ರಸ-ಸ್ವಲ್ಪ
  • ಬೆಲ್ಲ-ಸ್ವಲ್ಪ

ಮಾಡುವ ವಿಧಾನ…

  • ಒಣ ಬಾಣಲಿಗೆ ಎಳ್ಳು, ಜೀರಿಗೆ, ಕಾಲು ಬಟ್ಟಲು ಒಣ ಕೊಬ್ಬರಿ, ಒಣಮೆಣಸು, ದನಿಯಾವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಇದು ತಣ್ಣಗಾದ ಮೇಲೆ ಎಲ್ಲವನ್ನೂ ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು.
  • ನಂತರ ಬಾಣಲಿಗೆ 2 ಚಮಚ ಎಣ್ಣೆ ಹಾಕಿಕೊಂಡು ಅದಕ್ಕೆ ಮೊಳಕೆ ಬರಿಸಿದ ಮೆಂತ್ಯೆ ಕಾಳನ್ನು ಹಾಕಿ ಸಾಧಾರಣ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿದುಕೊಂಡು ಅದನ್ನು ಒಂದು ಬಟ್ಟಲಿನಲ್ಲಿ ತೆಗೆದಿಟ್ಟುಕೊಳ್ಳಿ.
  • ನಂತರ ಅದೇ ಬಾಣಲಿಗೆ 2–3 ಚಮಚ ಎಣ್ಣೆಗೆ ಸಾಸಿವೆ, ಜೀರಿಗೆ, ಸ್ವಲ್ಪ ಇಂಗು, ಕರಿಬೇವು ಹಾಕಿ. ನಂತರ ಇದಕ್ಕೆ ಸಣ್ಣ ಕತ್ತರಿಸಿದ 1 ಈರುಳ್ಳಿ ಹಾಕು ಅರಿಶಿನ ಹಾಕಿ ಸ್ವಲ್ಪ ಹುರಿದುಕೊಂಡು ಅದಕ್ಕೆ ಹುರಿದಿಟ್ಟುಕೊಂಡಿದ್ದ ಮೆಂತ್ಯೆ ಕಾಳನ್ನು ಹಾಕಿ,
  • ಉಪ್ಪು, 2 ಚಮಚದಷ್ಟು ಬೆಲ್ಲ, ನಿಂಬೆಹಣ್ಣಿನಗಾತ್ರದ ಹುಣಸೆಹಣ್ಣಿನ ರಸ ಬೆರೆಸಿ ಸ್ವಲ್ವ ಹುರಿದುಕೊಂಡ ನಂತರ 1 ಕಪ್ ನೀರು ಬೆರೆಸಿ ಕಾಳು ಮೆತ್ತಗೆ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಮಿಕ್ಸಿ ಮಾಡಿಟ್ಟುಕೊಂಡ ಮಸಾಲವನ್ನು ಬೆರೆಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಬೆರೆಸಿ ಚೆನ್ನಾಗಿ ಕುದಿಸಿದರೆ ಗೊಜ್ಜು ಸಿದ್ಧ. ಈ ಗೊಜ್ಜನ್ನು ಮುದ್ದೆ, ಚಪಾತಿ, ರೊಟ್ಟಿ, ಅನ್ನದೊಂದಿಗೆ ಸವಿಯಬಹುದು.

Join WhatsApp

Join Now

Join Telegram

Join Now

Leave a Comment