ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಕ್ರೀಡಾ ವಸತಿ ನಿಲಯದ ಖೋ-ಖೋ ತಂಡದ ಪದಕಗಳ ಬೇಟೆ

On: October 9, 2024 6:19 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:09-10-2024

ದಾವಣಗೆರೆ: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಕ್ಟೋಬರ್ 3 ರಿಂದ 6 ರವರೆಗೆ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಖೋ-ಖೋ ಪಂದ್ಯಾವಳಿಯಲ್ಲಿ ನಗರದ ಕ್ರೀಡಾ ವಸತಿ ನಿಲಯದ ಪುರುಷರ ಖೋ-ಖೋ ತಂಡವು ಬೆಳ್ಳಿ ಪದಕ ಪಡೆದಿದೆ.

ತಂಡದಿಂದ ಗಗನ್, ಸಿದ್ಧರೂಢ, ಶರತ್, ಅರ್ಜುನ, ಮಹಮ್ಮದ್ ತಾಸೀನ್, ನಾಗರಾಜ, ರಾಜು, ಧನರಾಜ್, ಆಸೀಫ್, ಷರೀಫ್, ಲಕ್ಷ್ಮಣ ಹಾಗೂ ಲಂಕೇಶ ಇವರುಗಳು ಉತ್ತಮ ಪ್ರದರ್ಶನ ನೀಡಿರುತ್ತಾರೆ. ತಂಡದ ತರಬೇತುದಾರರಾಗಿ ರಾಮಲಿಂಗಪ್ಪ.ಜೆ,
ತಂಡದ ವ್ಯವಸ್ಥಾಪಕರಾಗಿ ರವಿ.ಕೆ ಇವರು ಭಾಗವಹಿಸಿದ್ದರು.

ಖೋ-ಖೋ ತಂಡಕ್ಕೆ ದ್ವಿತೀಯ ಸ್ಥಾನ:

ದಾವಣಗೆರೆ: ಬಿಜಾಪುರ ಜಿಲ್ಲೆಯ ತಾಂಬಾದಲ್ಲಿ ಅಕ್ಟೋಬರ್ 5 ಮತ್ತು 6 ರಂದು ನಡೆದ ರಾಜ್ಯ ಮಟ್ಟದ ಆಹ್ವಾನಿತ ಖೋ-ಖೋ ಪಂದ್ಯಾವಳಿಯಲ್ಲಿ ನಗರದ ಕ್ರೀಡಾ ವಸತಿ ನಿಲಯದ ಪುರುಷರ ತಂಡವು ದ್ವಿತೀಯ ಸ್ಥಾನ ಪಡೆದಿದೆ.

ತಂಡದಿಂದ ವಿಜಯ್, ಹುಲಗಪ್ಪ, ನಿಖಿಲ್, ವಿರೇಶ್, ರವಿಕುಮಾರ್, ಭೀಮಪ್ಪ, ಪ್ರದೀಪ್, ಮಲ್ಲಿಕಾರ್ಜುನ, ಯಮನಪ್ಪ, ಪ್ರಜ್ವಲ್, ಪುನೀತ್, ದಿಲೀಪ್ ಇವರುಗಳು ಉತ್ತಮ ಪ್ರದರ್ಶನ ನೀಡಿದ್ದು, ಕ್ರೀಡಾಪಟುಗಳು ಇಲಾಖೆಯ ತರಬೇತುದಾರರಾದ ರಾಮಲಿಂಗಪ್ಪ.ಜೆ, ಅವರಿಂದ ತರಬೇತಿ ಪಡೆದಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment