ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಶಿಪ್, ದಾವಣಗೆರೆ ಸ್ಪರ್ಧಾಳುಗಳ ಪದಕ ಬೇಟೆ: ಎಸ್. ಎಸ್. ಮಲ್ಲಿಕಾರ್ಜುನ್, ಗಡಿಗುಡಾಳ್ ಮಂಜುನಾಥ್ ಸೇರಿ ಹಲವರ ಅಭಿನಂದನೆ

On: January 31, 2024 8:29 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:31-01-2024

ದಾವಣಗೆರೆ: ತಮಿಳುನಾಡು ರಾಜ್ಯದ ಕೊಯಿಮತ್ತೂರುನ ಸ್ವಸ್ತಿಕಾ ಸ್ಕೇಟಿಂಗ್ ರಿಂಕ್, ಸೋಮಯಂಪಾಳ್ಯಂನಲ್ಲಿ ಸ್ಪೀಡ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ 23 ನೇ ನ್ಯಾಷನಲ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಆಯೋಜಿಸಿತ್ತು.

ಬೇರೆ ಬೇರೆ ರಾಜ್ಯಗಳ ಒಟ್ಟು ಹದಿನೈದು ತಂಡಗಳು ಭಾಗವಹಿಸಿದ್ದವು. ಕರ್ನಾಟಕ ತಂಡವೂ ಭಾಗವಹಿಸಿತ್ತು. ಕರ್ನಾಟಕ ರಾಜ್ಯದಿಂದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು. ದಾವಣಗೆರೆ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್‌
ಕೋಚ್ ಪೃಥ್ವಿ ಕಾಂತ್ ಎನ್ ಕೋಟ್ಗಿ ನೇತೃತ್ವದ ತಂಡವು ಸಹ ಭಾಗವಹಿಸಿ ಕರ್ನಾಟಕ ರಾಜ್ಯಕ್ಕೆ 2 ನೇ ಸ್ಥಾನ ತಂದು ಕೊಟ್ಟಿದೆ.

ಈ ಕೀರ್ತಿ ತಂದು ಕೊಟ್ಟ ದಾವಣಗೆರೆಯ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಶನ್ ಮುಖ್ಯ ಕೋಚ್ ಆದ ಪೃಥ್ವಿ ಕಾಂತ್ ಎನ್. ಕೋಟ್ಗಿ ಅವರಿಗೆ ಮತ್ತು ಕ್ರೀಡಾಪಟುಗಳಿಗೆ ಕೆಎಸ್‌ಎಸ್‌ಎ ರಾಜ್ಯ ಕಾರ್ಯದರ್ಶಿ ಮಣಿಕಂಠ ಅವರು
ಅಭಿನಂದನೆ ಸಲ್ಲಿಸಿದ್ದಾರೆ.

ಫಲಕ್ ​​2 ಕಂಚು, ಅರ್ಚಿತ್ 4 ಚಿನ್ನ, ಲಕ್ಷಿತ್ 1 ಬೆಳ್ಳಿ, ರುದ್ರಾಂಶ 1 ಚಿನ್ನ, ವೈಭವ್ 1 ಚಿನ್ನ, ಅರುಣ್ 1 ಕಂಚು, ಷಣ್ಮುಖ 1 ಕಂಚು, ಶ್ರೇಯಸ್ 1 ಕಂಚು, ಅರ್ನವ್ 1 ಕಂಚು, ಪ್ರಥಮ್ 1 ಚಿನ್ನ, ಜೀವನ್ 1 ಚಿನ್ನ, ವಿನಮರಥ 1 ಚಿನ್ನದ
ಪದಕ ಗೆದ್ದಿದ್ದಾರೆ.

ದಾವಣಗೆರೆಯ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಶನ್ ಕೀಡಾಪಟ್ಟುಗಳು ಕಳೆದ ಒಂದು ವರ್ಷಗಳಿಂದ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇನ್ನೂ ಮುಂದಿನ ದಿಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಾಂಪಿಯನ್ ಆಗಿ ಬರಲಿ ಎಂದು ದಾವಣಗೆರೆಯ
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಮತ್ತು ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಸೌಭಾಗ್ಯ ನಾಗರಾಜ್, ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಆಕಾಶ್, ನೀಲಕಂಠ ತಾಯಿಯ ಶೈಲಾ ನೀಲಕಂಠ, ಅಜ್ಜಿ ಬಸಮ್ಮ
ದೊಡ್ಡಬಸಪ್ಪ ಅವರು ಅಭಿನಂದಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment