ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಎಲ್ಲರನ್ನೂ ದೇವರೆ ಕಾಪಾಡಬೇಕು; ಡಿಕೆಶಿ ಶತ್ರು ಸಂಹಾರ ಪೂಜೆ ವಿಚಾರಕ್ಕೆ HDK ಟಾಂಗ್..!

On: January 10, 2025 2:18 PM
Follow Us:
---Advertisement---

ತಮಿಳುನಾಡಿನ ಪ್ರತ್ಯಂಗೀರಾ ದೇವಾಲಯಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ‘ಶತ್ರು ಸಂಹಾರ’ದ ಚರ್ಚೆಗೆ ಶುರುವಾಗಿದೆ.

ಪ್ರತ್ಯಂಗೀರಾ ದೇವಾಲಯದಲ್ಲಿ ಸಾಮಾನ್ಯವಾಗಿ ಶತ್ರುಗಳ ಸಂಹಾರಕ್ಕಾಗಿ ಪೂಜೆ ಮಾಡಲಾಗುತ್ತದೆ. ಜೊತೆಗೆ ತಮ್ಮಲ್ಲಿನ ನಕಾರಾತ್ಮಕ ಶಕ್ತಿ ಹೋಗಲೆಂದು ಪೂಜೆ ಮಾಡಲಾಗುತ್ತದೆ. ತಮಿಳುನಾಡಿನ ಕುಂಭಕೋಣಂನಲ್ಲಿರುವ ಪ್ರತ್ಯಂಗೀರಾ ದೇವಾಲಯ ಹಲವು ವಿಶಿಷ್ಟ ಶಕ್ತಿಗಳಿಗೆ ಹೆಸರುವಾಸಿ. ಇನ್ನು ಡಿಕೆಶಿ ಪೂಜೆ ಬೆನ್ನಲ್ಲೇ ಶತ್ರು ಸಂಹಾರ ಪೂಜೆ ಮಾಡಿಸಿದ್ರಾ ಎಂಬ ಪ್ರಶ್ನೆ ಶುರುವಾಗಿದೆ.

ಇದೇ ವಿಚಾರದ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ, ಎಲ್ಲರನ್ನೂ ದೇವರೆ ಕಾಪಾಡಬೇಕು. ಅಧಿಕಾರ ಬೇಕು ಅಂತ ಅಲ್ಲಿ, ಮತ್ತೆಲ್ಲೋ ಶತ್ರು ನಾಶಕ್ಕೆ ಹೋಗೋದು. ಅಲ್ಲೂ ಕೂಡಾ ದೇವರನ್ನ ಕೇಳೋದು ಅಧಿಕಾರ ಕೊಡಪ್ಪ, ಶತ್ರು ನಾಶ ಮಾಡು ಅಂತಾನೇ ಅನ್ನೋ ಮೂಲಕ ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ದಿನ ಪೂಜೆ ಮಾಡುತ್ತೇನೆ. ಪ್ರತಿ ದಿನ ನನಗೆ ಒಳ್ಳೆಯದು ಆಗಲಿ ಎಂದು ಪೂಜೆ ಮಾಡ್ತೇನೆ. ನನಗೆ ಯಾರಾದರೂ ತೊಂದರೆ ಕೊಡ್ತಾರೆ, ಅವರಿಂದ ನನಗೆ ರಕ್ಷಣೆ ಸಿಗಲಿ ಎಂದು ಕೇಳಿಕೊಳ್ತೇನೆ. ಇದರಲ್ಲಿ ಯಾವುದೇ ಮುಚ್ಚು ಮೊರೆ ಯಾವುದೂ ಇಲ್ಲ ಎಂದಿದ್ದಾರೆ.

ಪೂಜೆ ಮಾಡಿಸಿದ ವಿಚಾರದ ಬಗ್ಗೆ ಮಾತನಾಡಿ.. ಹೌದ್ರಿ ನಾನು ದಿನ ಪೂಜೆ ಮಾಡ್ತಾ ಇರ್ತೇನೆ. ದಿನ ದೇವರ ನೋಡುತ್ತ ಇರ್ತೇನೆ. ನಿತ್ಯ ಹೋಮಗಳನ್ನು ಮಾಡುತ್ತಿರುತ್ತೇನೆ. ನನ್ನ ರಕ್ಷಣೆಗೆ, ನನ್ನ ಮನಸ್ಸಿನ ಸಮಾಧಾನಕ್ಕೆ ಪೂಜೆಗಳನ್ನು ಮಾಡುತ್ತೇನೆ. ದೇವರ ಮೇಲೆ ನಂಬಿಕೆ ಇದೆ. ಧರ್ಮದ ಮೇಲೆ, ಆಚರಣೆ ಮೇಲೆ ನಂಬಿಕೆ ಇದೆ. ಪ್ರತಿ ದಿನ ನಾನು ದೇವರಿಗೆ ನಮಸ್ಕಾರ ಮಾಡದೇ ಎಲ್ಲಿಗೂ ಹೋಗಲ್ಲ ಎಂದಿದ್ದಾರೆ.

Join WhatsApp

Join Now

Join Telegram

Join Now

Leave a Comment