SUDDIKSHANA KANNADA NEWS/ DAVANAGERE/DATE:18_08_2025
ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಹೆಣ ಹೂತಿದ್ದ ಆರೋಪ ಮಾಡಿದ್ದ ಮುಸುಕುಧಾರಿ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಮುಸುಕುಧಾರಿ ಎಸ್ಐಟಿ ಮುಂದೆ ನೀಡಿರುವ ಮಾಹಿತಿ ಈಗ ಮತ್ತೆ ಕುತೂಹಲ ಕೆರಳಿಸಿದೆ. ಕಾನೂನು ಪ್ರಕಾರವೇ ಹೆಣ ಹೂತಿದ್ದರೂ, ಕಾನೂನು ಉಲ್ಲಂಘಿಸಿ ಹೂತಿದ್ದಾಗಿ ಹೇಳುವಂತೆ ಮೂವರು 2023ರಲ್ಲಿ ತಮಿಳುನಾಡಿನಿಂದ ಕರೆದುಕೊಂಡು ಬಂದಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
READ ALSO THIS STORY: ಡಿ. ಕೆ. ಶಿವಕುಮಾರ್ ಆಪ್ತ, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಗೆ ಶಾಕ್ ಕೊಟ್ಟ ಕಾಂಗ್ರೆಸ್ ಶಿಸ್ತು ಸಮಿತಿ!
ಸುಜಾತ ಭಟ್ ದೂರು ನೀಡುವ ಮುನ್ನ ಯಾವುದೇ ಹೇಳಿಕೆಯಾಗಲೀ, ಏನೂ ಹೇಳಬಾರದು. ದೂರು ಕೊಟ್ಟ ಬಳಿಕ ಬಾ ಎಂದು ಮೂವರು ಹೇಳಿದ್ದರು. ಸುಜಾತಾ ಭಟ್ ದೂರು ನೀಡುವ ತನಕ ನನಗೆ ಭಯ ಆಗ್ತಿತ್ತು. ಹೀಗಾಗಿ ನಾನು ಬಂದೆ. ಮೂವರು ಪೊಲೀಸರ ಮುಂದೆ ಏನು ಹೇಳಬೇಕು ಎಂಬ ಕುರಿತಂತೆ ತಯಾರು ಮಾಡಿದ್ದರು. ಮೊದಲ ಕೋರ್ಟ್ ನಲ್ಲಿ ಏನು ಹೇಳಬೇಕು ಎಂಬ ಕುರಿತಂತೆಯೂ ಹೇಳಿದ್ದರು. ಆ ಗುಂಪು ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿತ್ತು ಎಂದು ಮುಸುಕುಧಾರಿ ಬಾಯ್ಬಿಟ್ಟಿದ್ದಾನೆ.
ಬುರುಡೆ ತಂದು ಮೂವರ ಗುಂಪು ಹೇಳಿದಂತೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಈ ವಿಡಿಯೋವನ್ನು ಎಸ್ ಐಟಿ ಅಧಿಕಾರಿಗಳು ದಾಖಲೆ ಮಾಡಿಕೊಂಡಿದ್ದಾರೆ. ನಾನು ಕಾನೂನು ಬದ್ಧವಾಗಿಯೇ ಹೆಣಗಳನ್ನು ಹೂತಿದ್ದೆ ಎಂದೆ. ಆದ್ರೆ,
ಮೂವರ ಗುಂಪು ಹೆಣವನ್ನು ಹೂತಿರುವುದಾಗಿ ಹೇಳು ಎಂದು ನನ್ನ ತಲೆಗೆ ತುಂಬಿದ್ದರು. ಮಹಿಳೆಯ ದೂರಿನ ನಂತರ ತಪ್ಪು ಹೇಳಿಕೆ ನೀಡುವಂತೆ ಹೇಳಿದ್ದರು. ಪೊಲೀಸರ ಮುಂದೆ ಏನು ಹೇಳಬೇಕೆಂಬ ಕುರಿತಂತೆಯೂ ನನಗೆ ಹೇಳಿದ್ದರು
ಎಂದು ತಿಳಿಸಿದ್ದಾನೆ.
2014ರ ನಂತರ ನಾನು ತಮಿಳುನಾಡಿನಲ್ಲಿ ವಾಸವಿದ್ದೆ. ಆದ್ರೆ, 2023ರಲ್ಲಿ ನನ್ನನ್ನು ಗುಂಪೊಂದು ಸಂಪರ್ಕಿಸಿತು. ನಾನು ಲೀಗಲ್ ಆಗಿಯೇ ಶವಗಳನ್ನು ಹೂತಿದ್ದಾಗಿಯೇ ಹಲವುಬಾರಿ ಹೇಳಿದ್ದೇನೆ. ಆದರೂ ಕೇಳಲಿಲ್ಲ. ಮಹಿಳೆ ದೂರು ನೀಡುತ್ತಾರೆ. ಆಮೇಲೆ ನೀನು ಬಾ ಎಂದರು. ಅದೇ ರೀತಿಯಲ್ಲಿ ನಾನು ಬಂದೆ ಎಂಬ ಮಾಹಿತಿ ನೀಡಿದ್ದಾನೆ. ಈ ಮೂಲಕ ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿರುವ ಕೇಸ್ ಮತ್ತೊಂದು ಚರ್ಚೆಗೆ ಹುಟ್ಟು ಹಾಕಿದೆ.