SUDDIKSHANA KANNADA NEWS
DAVANAGERE
DATE:24-03-2023
ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ (NARENDRA MODI) ಅವರು ಮಾರ್ಚ್ 25ಕ್ಕೆ ದಾವಣಗೆರೆ ಆಗಮನ ಹಿನ್ನೆಲೆಯಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಜನರು ಈ ಮಾರ್ಗದಲ್ಲಿ
ಸಂಚರಿಸಬೇಕು. ಜಿಲ್ಲಾ ಪೊಲೀಸ್ ಇಲಾಖೆಯು ಈ ಬಗ್ಗೆ ಮಾಹಿತಿ ನೀಡಿದೆ.
ಪಾರ್ಕಿಂಗ್ ಸ್ಥಳಗಳ ವಿವರ:
ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಬೀರೂರು, ಕಡೂರು, ಶೃಂಗೇರಿ, ಬೆಂಗಳೂರು, ಕೋಲಾರ, ತುಮಕೂರು, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಗಳೂರು ಜಿಲ್ಲೆಗಳಿಂದ ಬಾಡಾ ಕ್ರಾಸ್‌ನಿಂದ ದಾವಣಗೆರೆ ನಗರಕ್ಕೆ ಪ್ರವೇಶ ಮಾಡುವ ವಾಹನಗಳಿಗೆ ಎಪಿಎಂಸಿ ಮತ್ತು ಚಿಕ್ಕನಹಳ್ಳಿಗಳಲ್ಲಿ ಪಾರ್ಕಿಂಗ್ (PARKING) ಮಾಡಲು ವ್ಯವಸ್ಥೆ ಮಾಡಲಾಗಿದೆ.
ಚನ್ನಗಿರಿ, ಶಿವಮೊಗ್ಗ, ಭದ್ರಾವತಿ (BHADRAVATHI), ಬೀರೂರು, ಕಡೂರು, ಮಂಗಳೂರು (MANGALORE) ಕಡೆಯಿಂದ ಹದಡಿ ರಸ್ತೆ ಮೂಲಕ ದಾವಣಗೆರೆ ನಗರಕ್ಕೆ ಪ್ರವೇಶ ಮಾಡುವ ವಾಹನಗಳನ್ನು ಡಿಆರ್‌ಎಂ ಸೈನ್ಸ್ ಕಾಲೇಜ್ , ಹೈಸ್ಕೂಲ್ ಮೈದಾನ, ಯು.ಐ.ಡಿ. ಇಂಜಿನಿಯರಿಂಗ್ ಕಾಲೇಜ್ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇದೆ.
ಹುಬ್ಬಳ್ಳಿ, ಧಾರಾವಾಡ, ಬೆಳಗಾವಿ, ಗದಗ, ಹಾವೇರಿ, ಹರಿಹರ ಕಡೆಯಿಂದ ಬೈಪಾಸ್ ರಸ್ತೆ ಮೂಲಕ ಹಳೇ ಕುಂದುವಾಡ ಕಡೆಯಿಂದ ಬರುವ ವಾಹನಗಳನ್ನು ಕುಂದುವಾಡ ಕೆರೆ ಹತ್ತಿರದ ಜಾಗದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಹರಪನಹಳ್ಳಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ವಿಜಯಪುರ, ರಾಯಚೂರು, ಬೀದರ್, ಕಲ್ಬುರ್ಗಿ, ಗದಗ, ಯಾದಗಿರಿ, ಹೊಸಪೇಟೆ ಕಡೆಯಿಂದ ಬರುವ ವಾಹನಗಳು ಕೊಂಡಜ್ಜಿ, ಆವರಗೊಳ್ಳ ಮುಖಾಂತರ ಕಾರ್ಯಕ್ರಮ ಸ್ಥಳಕ್ಕೆ ಪ್ರವೇಶ ಬರುವ ವಾಹನಗಳನ್ನು ಕೇಂದ್ರೀಯಾ ವಿದ್ಯಾಲಯದ ಜಾಗದಲ್ಲಿ ಪಾರ್ಕಿಂಗ್ ಮಾಡಬಹುದಾಗಿದೆ.
ಚಳ್ಳಕೆರೆ, ಮೊಳಕಾಲ್ಕೂರು, ಕೂಡ್ಲಿಗಿ ಜಿಲ್ಲೆಗಳಿಂದ ಜಗಳೂರು ರಸ್ತೆ ಮೂಲಕ ಬರುವ ವಾಹನಗಳನ್ನು ಬಡಗಿ ಕೃಷ್ಣಪ್ಪ ಲೇಔಟ್‌ನಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇದೆ.
ವಾಹನ ಸಂಚಾರ ನಿಷೇಧ:
ನಗರದಲ್ಲಿ ಪ್ರಧಾನ ಮಂತ್ರಿಯವರ ಸಮಾರಂಭ ನಡೆಯುವ ಸ್ಥಳದ ಸುತ್ತಮುತ್ತ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ .
ಪರೀಕ್ಷೆ ಬರೆಯಲು ತೊಂದರೆಯಾಗಬಾರದು:
ದ್ವಿತೀಯ ಪಿಯುಸಿ ಪರೀಕ್ಷೆ (EXAM)ಗೆ ಬರುವ ಮಕ್ಕಳು ತಮ್ಮೊಂದಿಗೆ ಹಾಲ್‌ಟಿಕೆಟ್ ಮತ್ತು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಜೊತೆಯಲ್ಲಿಟ್ಟುಕೊಳ್ಳಬೇಕು. ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಪೊಲೀಸರು ಯಾವುದೇ ಅಡಚಣಿ ಮಾಡದೇ ಪರೀಕ್ಷೆ (EXAM)ಗೆ ಸಂಪೂರ್ಣ ಅನುಕೂಲ ಮಾಡಿಕೊಡಲಾಗುವುದು.
ಬಸ್ ನಿಲ್ದಾಣ ಬಂದ್:
ದಾವಣಗೆರೆ ನಗರದಲ್ಲಿ ಎಲ್ಲಾ ಖಾಸಗಿ ಮತ್ತು ಕೆಎಸ್.ಆರ್‌ಟಿಸಿ (KSRTC) ಬಸ್‌ಗಳ ಬಸ್ ನಿಲ್ದಾಣ (BUS STAND)ಗಳನ್ನು ತಾತ್ಕಾಲಿಕವಾಗಿ ನಗರದ ಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ . ಮಾರ್ಚ್ 25ರಂದು ಎಲ್ಲಾ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದಿಂದ 2 ಕಿ.ಮೀ ವ್ಯಾಪ್ತಿಯ ಸುತ್ತಳತೆಯಲ್ಲಿ ಯಾವುದೇ ರೀತಿಯ ಡ್ರೋನ್ ಹಾರಾಟವನ್ನು ಸಂಪೂರ್ಣ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವಂತಹ ಸಾರ್ವಜನಿಕರು ಕ್ಯೂ.ಆರ್ . ಕೋಡ್ ಅನ್ನು ನೀಡಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿಕೊಂಡು ಈ ಮೇಲ್ಕಂಡ ನಿಲುಗಡೆ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ನಿಲುಗಡೆ ಮಾಡುವುದು ಕಡ್ಡಾಯ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.