ಪಡುಬಿದ್ರಿ: ಕಂಟೈನರ್ ಲಾರಿಯನ್ನು ಅದರ ಚಾಲಕ ನಿರ್ಲಕ್ಷ್ಯದಿಂದ ಹೆದ್ದಾರಿಯಲ್ಲೇ ನಿಲ್ಲಿಸಿದ ಕಾರಣ ಮಂಗಳವಾರ ಸಂಜೆಯ ವೇಳೆ ಸುರಿಯುತ್ತಿದ್ದ ಮಳೆ ನಡುವೆ ಕೊಲ್ಲೂರಿನಿಂದ ಮಂಗಳೂರಿನತ್ತ ಸಾಗುತ್ತಿದ್ದ ಖಾಸಗಿ ತಡೆರಹಿತ ಬಸ್ಸೊಂದು ಕಂಟೈನರ್ ಹಿಂಬದಿಗೆ ಢಿಕ್ಕಿಯಾದ ಪರಿಣಾಮ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 20 ಮಂದಿಗೆ ಗಾಯಗಳಾಗಿವೆ.
ಓರ್ವರಿಗೆ ಮೂಳೆ ಮುರಿತವುಂಟಾಗಿದ್ದು ಎಲ್ಲರೂ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮಳೆಗಾಲದಲ್ಲಿ ತೀರಾ ಅಪಾಯಕಾರಿ ಎನಿಸಿರುವ ಹೆಜಮಾಡಿಯ ಬಿಟ್ಟು ದಾಭಾದೆದುರಿನ ರಾಷ್ಟ್ರೀಯ ಹೆದ್ದಾರಿ 66ರ ತಿರುವೊಂದರಲ್ಲಿ ಈ ಅಪಘಾತವು ಸಂಭವಿಸಿದೆ. ಗಾಯಾಳುಗಳನ್ನು ಭವಾನಿ, ಅಮೀನಾ, ಫಾತೀಮಾ, ಸಿಯಾ, ಸಚಿನ್, ಸನತ್ ಕುಮಾರ್, ಸಚಿನ್ ಎ., ಪೌಲ್, ಮಾತುಮ್, ಆನಂದ ಪ್ರಭು, ನಸೀಮ್ ಶೇಖ್, ಅಶೋಕ್, ನಂದನ, ಬಸ್ ಚಾಲಕ ವಿಕ್ರಮ್, ಸಿದ್ದು, ಅಮಿತ್, ಶಕುಂತಳಾ, ಪ್ರದೀಪ್, ಸುಮತಿ, ಈಶ್ವರಮೂರ್ತಿ ಎಂದು ಗುರುತಿಸಲಾಗಿದೆ.