SUDDIKSHANA KANNADA NEWS/ DAVANAGERE/ 03-04-2023
DAVANAGERE: 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (CONGRESS) ಕಾರ್ಯಕರ್ತರ ಅತಿಯಾದ ನಂಬಿಕೆಯ ಕಾರಣಕ್ಕೆ ಸೋಲುಂಟಾಯಿತು. ಈ ಬಾರಿ ಯಾರೂ ಮೈಮರೆಯುವುದಿಲ್ಲ. ಕಾರ್ಯಕರ್ತರಲ್ಲಿ ಹುರುಪು ಹೆಚ್ಚಿದೆ. ಈಗ
ಜಾಗೃತವಾಗಿದ್ದು, ಕಳ್ಳ ವಿದ್ಯೆಗಳು, ಆಸೆ, ಆಮೀಷಗಳಿಗೆ ಬಲಿಯಾಗಲ್ಲ. ಈ ಬಾರಿ ಕಾವಲುಗಾರರಾಗಿ ಕೆಲಸ ಮಾಡುತ್ತಾರೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN)
ಹೇಳಿದರು.
ಶಾಮನೂರಿನಲ್ಲಿರುವ ಆಂಜನೇಯ ಸ್ವಾಮಿ (ANJANEYA SWAMI) ಮತ್ತು ಈಶ್ವರ (ESHWARA) ದೇಗುಲ (TEMPLE)ದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಿಲ್ಲೆಯ ಮೂರ್ನಾಲ್ಕು ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿಲ್ಲ. ಸದ್ಯದಲ್ಲಿ ಅಂದರೆ ಇನ್ನೆರಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ (RELEASE) ಆಗುತ್ತದೆ. ಎಂದು ತಿಳಿಸಿದರು.
ಎಲ್ಲ ಜನರ ಆಶೀರ್ವಾದ ನನ್ನ ಮೇಲಿದೆ. ಕಾಂಗ್ರೆಸ್ (CONGRESS) ಪಕ್ಷದ ಪರ ಒಲವಿದೆ. ದಾವಣಗೆರೆ ಜಿಲ್ಲೆ ನಗರ ಅಭಿವೃದ್ಧಿ ಆಗಬೇಕಿದೆ. ಕಳೆದ ಐದು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಹಿಂದೆ ಮಾಡಿದ್ದ ಅಭಿವೃದ್ಧಿ ಕೆಲಸಗಳೇ ಇನ್ನು ಮುಗಿದಿಲ್ಲ. ಕಲ್ಲುಗಳನ್ನಷ್ಟೇ ಹಾಕಿದ್ದಾರೆ. ದಾವಣಗೆರೆಗೆ ನೀರಾವರಿ ಯೋಜನೆ ತರಬೇಕಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಇದಾಗುತ್ತೆ ಎಂಬ ವಿಶ್ವಾಸ ಇದೆ. ಜನರ ಪ್ರೀತಿ, ವಿಶ್ವಾಸ ನಮ್ಮ ಮೇಲಿದೆ. ಜಿಲ್ಲೆ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ (CONGRESS( ಪಕ್ಷ (PARTY)ಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ದಾವಣಗೆರೆಯಲ್ಲಿ ಎಷ್ಟು ಕಮೀಷನ್ ತಿನ್ನುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಾವ ರೀತಿ ಜನರ ಲೂಟಿ ಹೊಡೆದರು, ಕೋವಿಡ್ ಸಮಯದಲ್ಲಿ ಜನರ ಪ್ರಾಣ ತೆಗೆದುಕೊಂಡರು, ಸರಿಯಾಗಿ ವ್ಯಾಕ್ಸಿನ್ ಸಹ ನೀಡಲು ಆಗಲಿಲ್ಲ. ದಾವಣಗೆರೆ ಮತ್ತಷ್ಟು ಅಭಿವೃದ್ಧಿಯಾಗಬೇಕಾದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ ಎಂದರು.
ನಮ್ಮ ಸಿದ್ದರಾಮಯ್ಯರ ಸಮಾವೇಶ (SAMAVESHA) ಹೆಂಗಾಯ್ತು. ಪ್ರಧಾನಿ ನರೇಂದ್ರ ಮೋದಿ (NARENDRA MODI) ಕಾರ್ಯಕ್ರಮಕ್ಕೂ, ಸಿದ್ದರಾಮೋತ್ಸವಕ್ಕೂ ಹೋಲಿಕೆ ಮಾಡಲು ಆಗುತ್ತಾ. ನಾವು ಶಾಮನೂರಿನಿಂದ ನಡೆದುಕೊಂಡು ಹೋದೆವು. ಮೋದಿ ಸಮಾವೇಶಕ್ಕೆ ಕಾರುಗಳು ಸಲೀಸಾಗಿ ಹೋದವು. ಅದರಲ್ಲಿಯೇ ಬದಲಾವಣೆ ಏನಾಗಿದೆ ಎಂಬುದನ್ನು ನೋಡಬಹುದು ಎಂದು ಹೇಳಿದರು.
ಕುಕ್ಕರ್, ಅಡುಗೆ ಉಪಕರಣಗಳ ಹಂಚಿಕೆ ಸಂಬಂಧ ಕೇಸ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಅಧಿಕಾರದಲ್ಲಿದ್ದು, ಕೇಸ್ ಮಾಡಿದ್ದಾರೆ. ಇವೆಲ್ಲವನ್ನೂ ನೋಡಿದ್ದೇವೇ. ಚುನಾವಣೆ ಸಮಯದ ವೇಳೆ ಇವೆಲ್ಲವೂ ಸಹಜ. ಇವೇನೂ ಹೊಸದಾ. ಪ್ರಾಣಿದೊಂದು ಏನೇನೋ ಮಾಡಿದ್ರು. ಕೋರ್ಟ್ ನಲ್ಲಿ ಇದೆ. ಈಗ ಮಾತನಾಡಲ್ಲ, ಬಗೆಹರಿದ ಮೇಲೆ ಮಾತನಾಡುತ್ತೇನೆ. ಕೇಂದ್ರ, ರಾಜ್ಯ, ಸ್ಥಳೀಯದಲ್ಲಿಯೂ ಇದೇ ಹಣೆಬರಹ. ಹೆದರಿಸಿ ಪ್ರಪಂಚ ಗೆಲ್ಲಲು ಹೊರಟಿದ್ದಾರೆ. ಅರ್ಧ ಮುಖ ಹಿಟ್ಲರ್, ಮತ್ತೊಂದು ಮುಖ ಬೇರೆಯದ್ದೇ ಎಂದು ಕಿಡಿಕಾರಿದರು.
ಕಾಂಗ್ರೆಸ್ (CONGRESS) ಪಕ್ಷದಲ್ಲಿ ಕೊನೆ ದಿನದ ತನಕವೂ ಸಮಸ್ಯೆ ಇರುವ ಕ್ಷೇತ್ರದಲ್ಲಿ ಟಿಕೆಟ್ ನೀಡಿಕೆ ವಿಚಾರ ಚರ್ಚೆಯಾಗುತ್ತಲೇ ಇರುತ್ತದೆ. ಆದಷ್ಟು ಬೇಗ ಒಳ್ಳೆಯ ನಿರ್ಧಾರವನ್ನು ಪಕ್ಷ (PARTY) ವು ಪ್ರಕಟಿಸುತ್ತದೆ. ಗೆಲ್ಲುವುದಕ್ಕೆ ಚುನಾವಣೆಗೆ ನಿಲ್ಲೋದು. ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ ಅಂತಾ ನಾವು ಹೇಳ್ತೀವಿ. ಜನರ ಆಶೀರ್ವಾದ ಬೇಕು. ಬಿಜೆಪಿಯವರಿಗೆ ದುಡ್ಡಿನ ಅಹಂ ಹೆಚ್ಚಾಗಿದೆ. ನೀವು ದಾವಣಗೆರೆಯಲ್ಲಿ ದುಡ್ಡಿನ ಹಮ್ಮು ನೋಡಿರಬೇಕಲ್ವಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ನಿಮಗೇನೂ ಕೊಟ್ಟಿಲ್ವಾ…?
ನಿಮಗೇನೂ ಮಾಡಿಲ್ವ ಏನಪ್ಪಾ.. ಉಂಗುರ ಸೇರಿದಂತೆ ಏನೇನೋ ಕೊಟ್ಟಿರಬೇಕಲ್ವಾ. ತಮಾಷೆಗಷ್ಟೇ ಹೇಳಿದೆ. ನೀವ್ಯಾರು ಬರೆಯೋದಿಲ್ಲ. ನಲ್ವತ್ತು ಪರ್ಸಂಟೈಸ್ ಕಮೀಷನ್ ಬಗ್ಗೆ ಎಂದು ತಮ್ಮ ಧಾಟಿಯಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN)ಮಾತನಾಡಿದರು.