SUDDIKSHANA KANNADA NEWS/ DAVANAGERE/ DATE:13-10-2023
ದಾವಣಗೆರೆ (Davanagere): ಬಸವರಾಜ ಪೇಟೆಯ ಗಣಪತಿಯ ಮೆರವಣಿಗೆ ಸ್ಥಗಿತಗೊಳಿಸಿ ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಹಾರಾಜ ಯುವಕರ ಸಂಘದ ವತಿಯಿಂದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಲಾಗಿದೆ.
READ ALSO THIS STORY:
Davanagere: ಗಣೇಶ ಗಲಾಟೆ, ಬಡಾವಣೆ ಪೊಲೀಸ್ ಠಾಣೆ ಮುಂದೆ ಹಿಂದೂ ಸಂಘಟನೆಗಳ ಆಕ್ರೋಶ: ಸ್ಥಳಕ್ಕೆ ಬಂದ ಎಸ್ಪಿ ಹೇಳಿದ್ದೇನು…?
ಅ. 12ರಂದು ಗುರುವಾರ ಸಂಜೆ ದಾವಣಗೆರೆ ನಗರದ ಬಸವರಾಜ ಪೇಟೆಯ ಗಣಪತಿಯ ಮೆರವಣಿಗೆಯು ನಾಸೀರ್ ಮೆಡಿಕಲ್ ಶಾಪ್ ಮುಂದೆ ಹೋಗುವಾಗ ನೂರಾರು ಸಂಖ್ಯೆಯಲ್ಲಿ ಸೇರಿ ಮೆರವಣಿಗೆ ನಿಲ್ಲಿಸಿದರು. ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ನಮ್ಮ ಭಾಗದಲ್ಲಿ ಡಿ.ಜೆ ಹಾಡುಗಳನ್ನು ಹಾಕುವಂತಿಲ್ಲ, ಮೆರವಣಿಗೆ ಮಾಡುವಂತಿಲ್ಲ ಎಂದು ದೌರ್ಜನ್ಯ ಎಸಗಿದರು. ಮಾತ್ರವಲ್ಲ, ಮೆರವಣಿ ಬಂದ್ ಮಾಡಿಸಿದರು.
ಈ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ ಪೋಲೀಸರು ಹಿಂದೂ ಸಂಘಟನೆ ಮುಖಂಡರು, ಕಾರ್ಯಕರ್ತರು, ಮಹಾರಾಜ ಯುವಕರ ಸಂಘದ ಪದಾಧಿಕಾರಿಗಳ ಮೇಲೆ ದೌರ್ಜನ್ಯ ಮಾಡಿದರು. ಮೆರವಣಿಗೆಗೆ ಅಡ್ಡಿಪಡಿಸಿದವರಿಗೆ ಬುದ್ದಿವಾದ ಹೇಳುವುದನ್ನು ಬಿಟ್ಟು ನಮ್ಮ ಮೇಲೆ ಹರಿಹಾಯ್ದರು ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈ ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳ ಮೇಲೆ ಹಾಗೂ ಬಸವರಾಜ ಪೇಟೆಯ ಗಣಪತಿ ಮೆರವಣಿಗೆ ಸ್ಥಗಿತಗೊಳಿಸಿ ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸಲ್ಲಿಸುವ ವೇಳೆ ಮಹಾರಾಜ ಯುವಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಗಳಾದ ಅಜಯ್ ಕುಮಾರ್, ಎಸ್. ಟಿ. ವೀರೇಶ್ ಮತ್ತಿತರರು ಹಾಜರಿದ್ದರು.