SUDDIKSHANA KANNADA NEWS/DAVANAGERE/DATE:25_11_2025
ದಾವಣಗೆರೆ: ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಮೇಲೇಕೆ ವಿಧಿಗೆ ಇಷ್ಟೊಂದು ಕೋಪ.
READ ALSO THIS STORY: ದಾವಣಗೆರೆ ಡಿಸಿ ಆಗಿದ್ದ ಮಹಾಂತೇಶ್ ಬೀಳಗಿ, ಸಹೋದರ ಶಂಕರ ಬೀಳಗಿ ಸೇರಿ ಮೂವರ ಸಾವು: ಐಎಎಸ್ ಅಧಿಕಾರಿ ಕುರಿತ ಡೀಟೈಲ್ಸ್
ಇಂಥದ್ದೊಂದು ಮಾತು ಈಗ ದಾವಣಗೆರೆ ಸೇರಿದಂತೆ ಅವರು ಕೆಲಸ ಮಾಡಿದ್ದ ಸ್ಥಳಗಳಲ್ಲಿ ಕೇಳಿ ಬರುತ್ತಿರುವ ಮಾತು. ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರ ನೆಚ್ಚಿನ ಶಿಷ್ಯರಾಗಿದ್ದರು.
ಮಹಾಂತೇಶ್ ಬೀಳಗಿ,ಸೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಸಾವು ಕಂಡಿದ್ದಾರೆ. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ.
ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಏಕಾಏಕಿ ಅಡ್ಡ ಬಂದ ನಾಯಿ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಲಾಗಿದೆ.
ದಾವಣಗೆರೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಮಹಾಂತೇಶ್ ಬೀಳಗಿ ಅವರು 1974ರ ಮಾರ್ಚ್ 27ರಂದು ಜನಿಸಿದ್ದ 2012ರ ಕರ್ನಾಟಕ ಕೇಡರ್ನ IAS ಅಧಿಕಾರಿಯಾಗಿದ್ದು, ಪ್ರಸ್ತುತ ಅವರು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಮಹಾಂತೇಶ್ ಬೀಳಗಿ ಅವರು ಬೆಸ್ಕಾಂ ಎಂಡಿ ಸಹ ಆಗಿದ್ದರು. ಅಲ್ಲದೇ ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಕಡೆ ಕಾರ್ಯನಿರ್ವಹಿಸಿದ್ದರು.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಮತ್ತು ಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಗಳವರೊಡನೆ ಭಕ್ತಿ ಬಾಂಧವ್ಯ ಹೊಂದಿದ್ದ ಮಹಾಂತೇಶ್ ಬೀಳಗಿರವರು ಕೊರೊನಾ ಸಂದರ್ಭದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಕೊರೋನ ಸೇವಾ ಕೈಂಕರ್ಯಗಳನ್ನು ಬಹು ಮೆಚ್ಚುಗೆ ವ್ಯಕ್ತಪಡಿಸಿದ್ದರು, ಮಠದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಮಹಾಂತೇಶ್ ಬೀಳಗಿ ಅವರು ಶ್ರೀ ಜಗದ್ಗುರುಗಳವರ ಸಮಾಜ ಮುಖಿ ಕಾರ್ಯಗಳು ಮಾದರಿ ಕಾರ್ಯಕ್ರಮಗಳೆಂದು ಸ್ಮರಿಸುತ್ತಿದ್ದರು.
ಬಡತನದಲ್ಲಿ ಬೆಂದು ಅರಳಿ, ಮಾತೃ ಪ್ರೇಮದ ಪ್ರತೀಕವಾಗಿ, ಪ್ರಾಮಾಣಿಕತೆ ನೆಲ ಜಲ ಭಾಷೆಯ ಬಗ್ಗೆ ಗೌರಾಭಿಮಾನ ಹೊಂದಿದ್ದ ಪ್ರಾಮಾಣಿಕ ದಕ್ಷ ಅಧಿಕಾರಿ ತಮ್ಮ ಈರ್ವರು ಸಹೋದರರೊಂದಿಗೆ ದುರಂತದಲ್ಲಿ ಮೃತಪಟ್ಟಿದ್ದು ಅತ್ಯಂತ ನೋವಿನ ಸಂಗತಿ. ಬಾರದ ಲೋಕಕ್ಕೆ ಪಯಣಿಸಿದ ಬೀಳಗಿ ಸರ್ ಮತ್ತು ಅವರ ಸಹೋದರರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬಕ್ಕೆ ಈ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಾವಿರಾರು ಮಂದಿ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
- IAS MAHANTHESH BILAGI
- IAS MAHANTHESH BILAGI DEATH
- IAS MAHANTHESH BILAGI NO MORE
- mahantesh bilagi
- mahantesh bilagi ias
- MAHANTHESH BILAGI
- ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ
- ಮಹಾಂತೇಶ್ ಬೀಳಗಿ
- ಮಹಾಂತೇಶ್ ಬೀಳಗಿ ಇನ್ನಿಲ್ಲ
- ಮಹಾಂತೇಶ್ ಬೀಳಗಿ ನಿಧನ
- ಮಹಾಂತೇಶ್ ಬೀಳಗಿ ನಿಧನಕ್ಕೆ ಸಂತಾಪ
- ಮಹಾಂತೇಶ್ ಬೀಳಗಿ ನ್ಯೂಸ್
- ಮಹಾಂತೇಶ್ ಬೀಳಗಿ ವಿಧಿವಶ
- ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ






Leave a comment