Home ದಾವಣಗೆರೆ ಆಗಸ್ಟ್ 15 ಅಲ್ಲ, ಆಗಸ್ಟ್ 11ರಂದೇ ಸ್ವಾತಂತ್ರ್ಯ ದಿನಾಚರಣೆ! ಮಧ್ಯಪ್ರದೇಶದ ಈ 2 ಪ್ರಸಿದ್ಧ ದೇವಾಲಯಗಳಲ್ಲಿ ಆಚರಿಸಲು ಕಾರಣವೇನು?
ದಾವಣಗೆರೆನವದೆಹಲಿಬೆಂಗಳೂರು

ಆಗಸ್ಟ್ 15 ಅಲ್ಲ, ಆಗಸ್ಟ್ 11ರಂದೇ ಸ್ವಾತಂತ್ರ್ಯ ದಿನಾಚರಣೆ! ಮಧ್ಯಪ್ರದೇಶದ ಈ 2 ಪ್ರಸಿದ್ಧ ದೇವಾಲಯಗಳಲ್ಲಿ ಆಚರಿಸಲು ಕಾರಣವೇನು?

Share
ಸ್ವಾತಂತ್ರ್ಯ ದಿನಾಚರಣೆ
Share

ಇಂದೋರ್: ದೇಶಾದ್ಯಂತ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯ ದಿನಾಚರಣೆಗೆ ಭರಪೂರ ಸಿದ್ಧತೆಗಳು ನಡೆಯುತ್ತಿದ್ದರೆ, ಮಧ್ಯಪ್ರದೇಶದ ಎರಡು ಪ್ರಸಿದ್ಧ ದೇವಾಲಯಗಳು ಆ ನಾಲ್ಕು ದಿನಗಳ ಮುಂಚಿತವಾಗಿ ಅಂದರೆ ಆಗಸ್ಟ್ 11ರಂದೇ ಸ್ವಾತಂತ್ರ್ಯೋತ್ಸವವನ್ನು ಸಡಗರದಿಂದ ಆಚರಿಸಿವೆ.

ಮಂಡ್ಸೌರ್ ಜಿಲ್ಲೆಯ ಅತ್ಯಂತ ಪ್ರಾಚೀನ ಪಶುಪತಿನಾಥ ದೇವಾಲಯ ಮತ್ತು ಉಜ್ಜಯಿನಿಯ ಪ್ರಸಿದ್ಧ ಬಡೇ ಗಣೇಶ ದೇವಾಲಯಗಳಲ್ಲಿ ಆಗಸ್ಟ್ 11ರಂದು ವಿಶೇಷ ಪೂಜೆ, ಧ್ವಜಾರೋಹಣ, ತಿರಂಗ ಯಾತ್ರೆ ಹಾಗೂ ದೇಶಪ್ರೇಮದ ಆಚರಣೆಗಳು ವಿಜೃಂಭಣೆಯಿಂದ ನೆರವೇರಿದವು.

ಆಗಸ್ಟ್ 11ರಂದೇ ಏಕಾಗಿ ಆಚರಣೆ?

ಆಂಗ್ಲ ಕ್ಯಾಲೆಂಡರ್‌ನ (ಗ್ರೆಗೋರಿಯನ್) ಆಗಸ್ಟ್ 15ರ ಬದಲಾಗಿ, ಹಿಂದೂ ಪಂಚಾಂಗದ ‘ಶ್ರಾವಣ ಕೃಷ್ಣ ಚತುರ್ದಶಿ’ ತಿಥಿಯಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ವಿಶಿಷ್ಟ ಸಂಪ್ರದಾಯವನ್ನು ಈ ಎರಡೂ ದೇವಾಲಯಗಳು ಕಳೆದ ಹಲವು ದಶಕಗಳಿಂದ ಪಾಲಿಸಿಕೊಂಡು ಬರುತ್ತಿವೆ.

1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಹಿಂದೂ ಕ್ಯಾಲೆಂಡರ್‌ನಲ್ಲಿ ಶ್ರಾವಣ ಕೃಷ್ಣ ಚತುರ್ದಶಿ ತಿಥಿಯಿತ್ತು. ಪ್ರತಿ ವರ್ಷ ಚಂದ್ರಮಾನ ಪಂಚಾಂಗದ ಪ್ರಕಾರ ದಿನಾಂಕಗಳು ಬದಲಾಗುವುದರಿಂದ, ಈ ವರ್ಷ ಆ ತಿಥಿಯು ಆಗಸ್ಟ್ 11ರಂದು ಬಂದಿತ್ತು. ಹೀಗಾಗಿ ಈ ಎರಡೂ ಧಾರ್ಮಿಕ ಕ್ಷೇತ್ರಗಳಲ್ಲಿ ಆಗಸ್ಟ್ 11ರಂದೇ ರಾಷ್ಟ್ರೀಯ ಹಬ್ಬವನ್ನು ಆಚರಿಸಲಾಯಿತು.

ಪಶುಪತಿನಾಥ ದೇವಾಲಯದಲ್ಲಿ ವಿಶೇಷ ಪೂಜೆ:

ಮಂಡ್ಸೌರ್‌ನ ಶಿವನಾ ನದಿ ತೀರದಲ್ಲಿರುವ ಪುರಾತನ ಪಶುಪತಿನಾಥ ದೇವಾಲಯದ ಅಷ್ಟಮುಖಿ ಶಿವಲಿಂಗಕ್ಕೆ ವಿಶೇಷ ಶೃಂಗಾರ ಹಾಗೂ ದೂರ್ವಾ (ಗರಿಕೆ) ಜಲದಿಂದ ಅಭಿಷೇಕ ನೆರವೇರಿಸಲಾಯಿತು. ವೈದಿಕ ಮಂತ್ರೋಚ್ಚಾರಣೆಯೊಂದಿಗೆ ‘2047ರ ವೇಳೆಗೆ ಭಾರತವು ವಿಕಸಿತ ರಾಷ್ಟ್ರವಾಗಲಿ’ ಎಂದು ಪ್ರಾರ್ಥಿಸಲಾಯಿತು. 1985ರಿಂದ ಈ ದೇವಾಲಯದಲ್ಲಿ ಈ ಆಚರಣೆ ನಿರಂತರವಾಗಿ ನಡೆದುಕೊಂಡು ಬಂದಿದೆ.

ಉಜ್ಜಯಿನಿಯ ಬಡೇ ಗಣೇಶ ದೇವಾಲಯದಲ್ಲಿ ತಿರಂಗ ಯಾತ್ರೆ:

ಉಜ್ಜಯಿನಿಯ ಬಡೇ ಗಣೇಶ ದೇವಾಲಯದಲ್ಲಿ ಗಣೇಶನನ್ನು “ಗಣರಾಜ್ಯದ ದೇವರು” ಎಂಬ ಭಾವನೆಯಿಂದ ಪೂಜಿಸಲಾಗುತ್ತದೆ. ಆಗಸ್ಟ್ 11ರಂದು ದೇವಾಲಯದ ಆವರಣದಲ್ಲಿ ತಿರಂಗ ಯಾತ್ರೆ ನಡೆಸಿ, ಗಣೇಶನಿಗೆ ರಾಷ್ಟ್ರಧ್ವಜವನ್ನು ಅರ್ಪಿಸಿ ಮಹಾ ಆರತಿ ಬೆಳಗಲಾಯಿತು. ನಂತರ ದೇವಾಲಯದ ಮುಖ್ಯ ಗೋಪುರದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು.

Share

Leave a comment

Leave a Reply

Your email address will not be published. Required fields are marked *