ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ವಿಶೇಷ ಸಾಂದ್ರ ಪರಿಷ್ಕರಣೆ (SIR) ಸೇರಿದಂತೆ ವಿವಿಧ ಬೋಧನೇತರ ಆಡಳಿತಾತ್ಮಕ ಸರ್ವೇ ಕಾರ್ಯಗಳಿಗೆ ನಿಯೋಜಿಸುವುದಕ್ಕೆ ಶೀಘ್ರದಲ್ಲೇ ಶಾಶ್ವತ ತಡೆ ನೀಡಲಾಗುವುದು. ಇದಕ್ಕಾಗಿ ಶೀಘ್ರವೇ ನೂತನ ಮಸೂದೆ (Bill) ಜಾರಿಗೆ ತರಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಪರೀಕ್ಷೆಗಳು ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಶಿಕ್ಷಕರು ತರಗತಿಗಳಲ್ಲಿ ಲಭ್ಯವಿಲ್ಲದಿದ್ದರೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸ ಮತ್ತು ಫಲಿತಾಂಶದ ಮೇಲೆ ತೀವ್ರ ಕೆಟ್ಟ ಪರಿಣಾಮ ಬೀರಲಿದೆ. ಶಿಕ್ಷಕರನ್ನು ಸರ್ವೇ ಕಾರ್ಯಗಳಿಂದ ತಕ್ಷಣವೇ ಹೊರಗಿಡಬೇಕೆಂದು ಒತ್ತಾಯಿಸಿರುವ ಸಚಿವರು, ಶಿಕ್ಷಣದ ಗುಣಮಟ್ಟ ಕಾಪಾಡುವುದು ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ನೂತನ ಕಾಯ್ದೆಯು ಜಾರಿಗೆ ಬಂದರೆ ಮುಂದೆಂದೂ ಶೈಕ್ಷಣಿಕ ಸಮಯ ವ್ಯರ್ಥವಾಗದಂತೆ ಹಾಗೂ ಶಿಕ್ಷಕರನ್ನು ಸರ್ವೇ ಕೆಲಸಗಳಿಗೆ ಬಳಸಿಕೊಳ್ಳದಂತೆ ಶಾಶ್ವತ ತಡೆ ಬೀಳಲಿದೆ.





Leave a comment