ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

M. P. Renukacharya:ಎಲ್ಲರನ್ನೂ ಉಚ್ಚಾಟನೆ ಮಾಡ್ಲಿ, ನಾಲ್ಕೇ ಜನ ಬಿಜೆಪಿಯಲ್ಲಿರಲಿ – ಯಾರಿಗೂ ಜಗ್ಗಲ್ಲ, ಬಗ್ಗಲ್ಲ: ಜಿಲ್ಲಾ ಬಿಜೆಪಿಗೆ ಸೆಡ್ಡು ಹೊಡೆದ ಎಂ. ಪಿ. ರೇಣುಕಾಚಾರ್ಯ

On: September 12, 2023 6:25 AM
Follow Us:
MADAL VISIT RENUKACHARYA
---Advertisement---

SUDDIKSHANA KANNADA NEWS/ DAVANAGERE/ DATE:12-09-2023

ದಾವಣಗೆರೆ: ನಾನು ಯಾರಿಗೂ ಜಗ್ಗಲ್ಲ, ಬಗ್ಗಲ್ಲ. ದಾವಣಗೆರೆ ಬಿಜೆಪಿ ಜಿಲ್ಲಾ ಘಟಕದಲ್ಲಿ ನಾಲ್ಕೇ ಜನರು ಇರಲಿ. ಉಳಿದವರನ್ನು ಉಚ್ಚಾಟನೆ ಮಾಡಲಿ. ಏನು ಮಾಡುತ್ತಿದ್ದಾರೆ ಎಂಬುದು ನನಗೂ ಗೊತ್ತಿದೆ. ನನ್ನದು ನೇರ ರಾಜಕಾರಣ. ಜಿಲ್ಲಾಧ್ಯಕ್ಷರು ಏನು ಸರ್ವಾಧಿಕಾರಿಯೇ? ಜಿಲ್ಲೆಗೆ ಕೊಡುಗೆ ಏನು? ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. Renukacharya) ಅವರು ಹೇಳುವ ಮೂಲಕ ಸೆಡ್ಡು ಹೊಡೆದಿದ್ದಾರೆ.

ಚನ್ನಗಿರಿಯ ಮಾಡಾಳ್ ಗ್ರಾಮದಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಭೇಟಿ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ಜಿಲ್ಲಾಧ್ಯಕ್ಷರ ಮಾತಿಗೆ ಕವಡೆ ಕಾಸಿನ ಕಿಮತ್ತು ಕೊಡಲ್ಲ. ನಾವೆಲ್ಲರೂ ಸೇರಿ ಅಂದರೆ ಶಾಸಕರು ಜಿಲ್ಲಾಧ್ಯಕ್ಷರ ನೇಮಕ ಮಾಡಿದ್ವಿ. ಆದ್ರೆ, ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡ ಮತ್ತವರ ಪುತ್ರರನ್ನು ನೊಟೀಸ್ ಉಚ್ಚಾಟನೆ ಮಾಡಲಾಗಿದೆ. ಇದು ಸರ್ವಾಧಿಕಾರಿ ವರ್ತನೆ ಎಂದು M. P. Renukacharya ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ: 

G. M. Siddeshwara: 2 ತಿಂಗಳ ಬಳಿಕ ಎಲ್ಲದಕ್ಕೂ ಉತ್ತರ ಕೊಡ್ತೇನೆ ಎಂದಿದ್ಯಾಕೆ ಜಿ. ಎಂ. ಸಿದ್ದೇಶ್ವರ…?

ನಾನು ಸಂಘಟನೆ, ಕೋರ್ ಕಮಿಟಿ ಬಗ್ಗೆ ಮಾತನಾಡಲ್ಲ. ಉಚ್ಚಾಟನೆ ಮಾಡುವಾಗ ಯಾವ ನೊಟೀಸ್ ಕೊಟ್ಟಿದ್ದಾರೆ. ಕೋರ್ ಕಮಿಟಿ ಸಭೆಗೆ ನನ್ನನ್ನು ಆಹ್ವಾನ ಮಾಡಿಯೇ ಇಲ್ಲ. ಯಾರೂ ನನ್ನನ್ನು ಕರೆದಿಲ್ಲ. ಜಿಲ್ಲಾಧ್ಯಕ್ಷರು ಹೇಳಿರುವುದು ನೂರಕ್ಕೆ ನೂರು ಸುಳ್ಳು. ಇವರಿಗೆ ಬೇಕಾದ ಹಾಗೆ ತೀರ್ಮಾನ ಮಾಡಿರಬಹುದು ಎಂದು M. P. Renukacharya  ಆರೋಪಿಸಿದರು.

ಯಾವ, ಯಾರ ಗೊಡ್ಡು ಬೆದರಿಕೆಗೆ ಜಗ್ಗಲ್ಲ, ಬಗ್ಗಲ್ಲ, ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ಮುಂಬರುವ ಲೋಕಸಭೆ ಚುನಾವಣೆಗೆ ದಾವಣಗೆರೆಯಿಂದ ಕಣಕ್ಕಿಳಿಯಲು ಬಿಜೆಪಿಯ ಪ್ರಬಲ ಆಕಾಂಕ್ಷಿ ಎಂದು ಅನೇಕ ಬಾರಿ ಹೇಳಿದ್ದೇನೆ. ಪಕ್ಷದ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಎಂಬುದನ್ನು ನೋಡೋಣ. ಯಾರನ್ನೂ ಮುಗಿಸಿ ಎಂದು ಹೇಳಲ್ಲ. ಪಕ್ಷ ಕಟ್ಟುವವರು ನಾವು. ಪಕ್ಷಕ್ಕೆ ದುಡಿದವರವನ್ನು ಭೇಟಿ ಮಾಡಿದರೆ ಡ್ಯಾಮೇಜ್ ಆಗುತ್ತಾ. ಬೇಕಾದರೆ ಎಲ್ಲರನ್ನೂ ಉಚ್ಚಾಟನೆ ಮಾಡಲಿ. ಬಿಜೆಪಿಯಲ್ಲಿ ಆ ನಾಲ್ಕೇ ಜನರು ಇರಲಿ. ಗುರುಸಿದ್ದನಗೌಡ ಹಾಗೂ ಅವರ ಪುತ್ರರನ್ನೂ ಉಚ್ಚಾಟನೆ ಮಾಡಿರುವುದು ಜೋಕ್ ಎಂಬಂತಾಗಿದೆ. ಅವರ ಮನೆಯ ಹೆಣ್ಣು ಮಕ್ಕಳನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಿ ಎಂದು ವ್ಯಂಗ್ಯವಾಡಿದರು.

ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಯಾರು ಪಿತೂರಿ, ಷಡ್ಯಂತ್ರ ನಡೆಸಿದ್ದಾರೆ ಎಂಬುದನ್ನು ಮುಂಬರುವ ದಿನಗಳಲ್ಲಿ ಹೇಳುತ್ತೇನೆ. ಚನ್ನಗಿರಿಯಲ್ಲಿ ಅಭಿವೃದ್ಧಿ ಮಾಡಿದ್ದರೂ ಮಾಡಾಳ್ ವಿರೂಪಾಕ್ಷಪ್ಪರನ್ನು ನಿರ್ಲಕ್ಷಿಸಲಾಯಿತು. ಇದರಿಂದಾಗಿ ಬಿಜೆಪಿ ಸೋಲಬೇಕಾಯಿತು ಎಂದು ಹೇಳಿದರು. 

ನನಗೆ ನೊಟೀಸ್ ಕೊಟ್ಟಿದ್ದಾರೆ. ಏಳು ದಿನಗಳೊಳಗೆ ಉತ್ತರ ಕೊಡಬೇಕು ಎಂದು. ಅದೇ ರೀತಿಯಲ್ಲಿ ಗುರುಸಿದ್ದನಗೌಡರಿಗೆ ಯಾಕೆ ನೊಟೀಸ್ ಕೊಟ್ಟಿಲ್ಲ. ಯಾಕೆ ಸಸ್ಪೆಂಡ್ ಮಾಡಬಾರದು ಎಂದು ಕೇಳಬಹುದಿತ್ತು. ಕರೆದು ಮಾತನಾಡಬಹುದಿತ್ತು.
ಈ ಸೌಜನ್ಯ ತೋರಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಕೀಳು ಮಟ್ಟದ ರಾಜಕಾರಣಿ ಅಲ್ಲ. ನಾಡಿನ ಎಲ್ಲಾ ಜನರ ವಿಶ್ವಾಸ ಗಳಿಸಿರುವ ನಾಯಕ. ಮತ್ತೊಬ್ಬ ಯಡಿಯೂರಪ್ಪ ಹುಟ್ಟಲು
ಸಾಧ್ಯವಿಲ್ಲ. ಯಡಿಯೂರಪ್ಪರ ನಾಯಕತ್ವ ಬಿಜೆಪಿಗೆ ಅನಿವಾರ್ಯ ಎಂದು ಪ್ರತಿಪಾದಿಸಿದರು.

ಕೆಲವರ ಹೇಳಿಕೆಗಳನ್ನು ನಾನು ನಿರ್ಲಕ್ಷ್ಯಿಸುತ್ತೇನೆ. ನಾವೆಲ್ಲರೂ ಸೇರಿ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದೇವೆ. ಪಕ್ಷಕ್ಕೆ ವೀರೇಶ್ ಹನಗವಾಡಿ ಕೊಡುಗೆ ಏನು? ಎಲ್ಲೋ ಕುಳಿತು ಕೆಲಸ ಮಾಡಿದರೆ ಆಗುತ್ತಾ? ಮನೆ ಮನೆಗೆ ಸಾವಿರಾರು ಕರಪತ್ರಗಳನ್ನು
ತಲುಪಿಸಿ ಪ್ರಧಾನಿ ನರೇಂದ್ರಮೋದಿ ಅವರ ಕಾರ್ಯಕ್ರಮಗಳನ್ನು ತಿಳಿಸಿದ್ದೇನೆ. ಜಿಲ್ಲಾಧ್ಯಕ್ಷರು ಜಿಲ್ಲಾದ್ಯಂತ ಪ್ರವಾಸ ಮಾಡಿದ್ದಾರಾ? ರಾಜ್ಯದಲ್ಲಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಸಾಧನೆಗಳನ್ನು ಹೊನ್ನಾಳಿ – ನ್ಯಾಮತಿ
ತಾಲೂಕಿನಲ್ಲಿ ಮಹಿಳೆಯರು, ಮನೆ ಮನೆಗೆ ತಲುಪಿಸುವ ಕೆಲಸ ನಾನು ಮಾಡಿದ್ದೇನೆ. ನಿನ್ನಂಥವರಿಂದ ಹೇಳಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ. ಮಾತನಾಡುವುದು ಉಪಯೋಗವಿಲ್ಲ. ನನಗೂ ಗೊತ್ತಿದೆ ರಾಜಕಾರಣ ಎಲ್ಲಿ ಮಾಡಬೇಕು
ಎಂಬುದು. ಬಿಜೆಪಿಯ ಶಿಸ್ತಿನ ಸಿಪಾಯಿ. ಬಿಜೆಪಿಯಿಂದ ಹೊರಗಡೆ ಹೋಗ್ತೇನೆ ಎಂದಿಲ್ಲ. ಷಡ್ಯಂತ್ರ ಮಾಡ್ತಿದ್ದಾರೆ. ನೇರವಾಗಿ ಹೇಳಿದ್ದೇನೆ. ನಾನು ಎಲ್ಲೋ ಹೋಗಲ್ಲ ಎಂದು ಪುನರುಚ್ಚರಿಸಿದರು.

ಮಾಡಾಳ್ ವಿರೂಪಾಕ್ಷಪ್ಪರ ನಿರ್ಲಕ್ಷ್ಯದಿಂದ ಬಿಜೆಪಿಗೆ ಅನ್ಯಾಯ ಆಯ್ತು. ಅಂದು ಹೇಳಿದ್ದೇನೆ. ಇಂದು ಹೇಳುತ್ತಿದ್ದೇನೆ. ಸೌಜನ್ಯ ಭೇಟಿ. ಯಾವುದೇ ರಾಜಕಾರಣ ಇಲ್ಲ, ಪಕ್ಷ ಉಳಿಯಬೇಕು. ಸಂಘಟನೆ ವಿಸ್ತಾರ ಆಗಬೇಕು ಎಂಬುದಷ್ಟೇ ನಮ್ಮ ಕಾಳಜಿ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದಷ್ಟೇ ನನ್ನ ಅಪೇಕ್ಷೆ. ಹಾದಿಬೀದಿಯಲ್ಲಿ ಹೋಗುವವರಿಗೆ ಮಹತ್ವ ನೀಡಲ್ಲ ಎನ್ನುವ ಮೂಲಕ ಬಿಜೆಪಿ ಜಿಲ್ಲಾ ಘಟಕಕ್ಕೆ ಟಾಂಗ್
ನೀಡಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಗಣೇಶ

“ಗಣೇಶ ಹಬ್ಬದ ಪೆಂಡಾಲ್ ಗಳು ಕ್ರಾಂತಿಕಾರಿಗಳ ಕಾರ್ಖಾನೆಗಳು, ಇಲ್ಲಿಂದಲೇ ಸ್ವಾತಂತ್ರ್ಯ ಕ್ರಾಂತಿ: ಹಾರಿಕಾ ಮಂಜುನಾಥ್ ಅಬ್ಬರದ ಭಾಷಣ!

ಮೆಡಿಕವರ್ ಆಸ್ಪತ್ರೆಯಿಂದ ವೈದ್ಯ ಹೆಲ್ತ್ ಕೇರ್ ಕ್ಲಿನಿಕ್‌ನಲ್ಲಿ ಮೂಲಭೂತ ಆರೋಗ್ಯ ತಪಾಸಣೆ ಶಿಬಿರ

ದಾವಣಗೆರೆ

BIG BREAKING: ದಾವಣಗೆರೆಯ ಮಟ್ಟಿಕಲ್ ಫ್ಲೆಕ್ಸ್ ವಿವಾದ: ಪಿಎಸ್ಐ ಸಚಿನ್ ಸೇರಿ ಮೂವರ ಸಸ್ಪೆಂಡ್!

M. P. Renukacharya

ನೂರಾರು ಕೇಸ್ ಹಾಕಿ ತಾಕತ್ತಿದ್ದರೆ ಬಂಧಿಸಿ: ಎಫ್ಐಆರ್ ಬಳಿಕ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಎಂ. ಪಿ. ರೇಣುಕಾಚಾರ್ಯ ಸವಾಲ್!

M. P. Renukacharya

BIG NEWS: “ಡಿಜೆ ಬಳಸಿ, ತಾಕತ್ತಿದ್ದರೆ ಜಿಲ್ಲಾಡಳಿತ ತಡೆಯಲಿ” ಎಂದಿದ್ದ ಎಂ. ಪಿ. ರೇಣುಕಾಚಾರ್ಯ ವಿರುದ್ಧ ಎಫ್ ಐಆರ್! ದೂರಿನ ಕಂಪ್ಲೀಟ್ ಡೀಟೈಲ್ಸ್

Ganesha

“ಗಣೇಶ ಹಬ್ಬದ ನೆಪದಲ್ಲಿ ಬೆಂಕಿ ಹಚ್ಚುವವರ ಹತ್ತಿರ ಬಿಟ್ಟುಕೊಳ್ಳಬೇಡಿ”: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್!

Leave a Comment