ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

M. P. Renukacharya: ಗಲಭೆಕೋರರ ಎನ್ ಕೌಂಟರ್ ಮಾಡಿ, ರಾಗಿಗುಡ್ಡ ಸಂಘರ್ಷ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂ. ಪಿ. ರೇಣುಕಾಚಾರ್ಯ ಆಗ್ರಹ

On: October 5, 2023 1:33 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:05-10-2023

ದಾವಣಗೆರೆ: ಕೋಮುಗಲಭೆಗಳಲ್ಲಿ ಪಾಲ್ಗೊಂಡವರ ಮೇಲೆ ಕೇಸ್ ವಾಪಸ್ ಪಡೆಯಬಾರದು. ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಗಲಭೆಯಲ್ಲಿ ಪಾಲ್ಗೊಂಡವರ ವಿರುದ್ಧದ ಕೇಸ್ ವಾಪಸ್ ಪಡೆದರೆ ಅನಾಹುತವಾಗುತ್ತದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. Renukacharya) ತಿಳಿಸಿದರು.

ಈ ಸುದ್ದಿಯನ್ನೂ ಓದಿ: 

Davanagere: ಮೂರು ಕಂಬಗಳು ಮೇಲೆ ಬಿದ್ದರೂ ಪವಾಡ ಸದೃಶವಾಗಿ ಬದುಕುಳಿದ ಯುವಕ…! ಎಲ್ಲಿ ನಡೆದಿದ್ದು… ಏನಾಗಿತ್ತು ಗೊತ್ತಾ…?

ಹೊನ್ನಾಳಿಯ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಿವಮೊಗ್ಗದ ರಾಗಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣವನ್ನು ಹಾಲಿ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು‌.

ಶಿವ,ದುರ್ಗಮ್ಮ,ಆಂಜನೇಯ ಶಿಷ್ಟ ಸಂಹಾರಕ್ಕೆ ಆಯುದ ಬಳಸುತ್ತಿದ್ದರು, ಆದರೇ ಇವರು ತಲ್ವಾರ್ ಪ್ರದರ್ಶನ ಮಾಡಿದ್ದು ಯಾವ ಯಾವುದರ ಸಂಕೇತ ಎಂದು ಪ್ರಶ್ನೆ ಮಾಡಿದ ಅವರು, ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದನ್ನು ಮೊದಲು ಕಾಂಗ್ರೇಸ್ ಸಚಿವರು ಬಿಡ ಬೇಕು. ಶಿವಮೊಗ್ಗ ಗಲಾಟೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯ. ಜಿಲ್ಲಾಡಳಿತದ ನಿರ್ಲಕ್ಷವೇ ಗಲಾಟೆಗೆ ಕಾರಣ ಎಂದು ದೂರಿದರು.

ಹಿಂದೂಗಳು ಪ್ರಚೋದನೆ ಮಾಡಲ್ಲ. ಇಂಥ ಹೀನ ಕೃತ್ಯಕ್ಕೆ ಇಳಿಯೋಲ್ಲ. ತಪ್ಪು ಯಾರೇ ಮಾಡಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಲಿ. ರಾಲಿಂಗಾರೆಡ್ಡಿ ಅವರು ಸಚಿವರಾಗಿದ್ದವರು. ಬಿಜೆಪಿಯವರು ಮುಸುಕು ಧರಿಸಿ ಹೋಗಿ ಗಲಾಟೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿರುವುದು ಖಂಡನೀಯ. ಪೂರ್ವನಿಯೋಜಿತ ಸಂಚು. ಬಿಜೆಪಿಯವರು ಬಂದಿಲ್ಲ, ಮುಸ್ಲಿಂರೇ ಮಾಡಿದ್ದು, ಅವರನ್ನು ಬಂಧಿಸಲಿ. ರಾಮಲಿಂಗಾರೆಡ್ಡಿ ಹಿರಿಯ ಸಚಿವರು. ಎಲುಬಿಲ್ಲದ ನಾಲಗೆಯಂತೆ ಮಾತನಾಡುತ್ತಾರೆ ಎಂದರೆ ರಾಜ್ಯದ ಜನರು ಒಪ್ಪಲ್ಲ. ದುಷ್ಕೃತ್ಯ ಎಸಗುವವರೆಗೆ ಮತ್ತಷ್ಟು ಪ್ರಚೋದನೆ ಕೊಟ್ಟಂತಾಗುತ್ತದೆ ಎಂದು ಕಿಡಿಕಾರಿದರು.

ತಂದೆಯನ್ನೇ ಗೃಹಬಂಧನದಲ್ಲಿಟ್ಟ ವ್ಯಕ್ತಿ. ಟಿಪ್ಪು ಸುಲ್ತಾನ್ ಮತಾಂಧ. ಇಂಥವರನ್ನು ವೈಭವೀಕರಿಸಿ ಕರ್ನಾಟಕವನ್ನು ತಾಲಿಬಾನ್ ಮಾಡಲು ಹೊರಟಿದ್ದಾರಾ. ಇದೆಲ್ಲಾ ನಡೆಯಲ್ಲಾ. ಗೃಹ ಸಚಿವ ಜಿ. ಪರಮೇಶ್ವರ್ ಸಣ್ಣ ಘಟನೆ ಎಂದಿದ್ದಾರೆ. ಶಿವಮೊಗ್ಗದ ಜನತೆ ತತ್ತರಿಸಿ ಹೋಗಿದ್ದಾರೆ. ಗಣೇಶ ಉತ್ಸವ ಸಮಿತಿಗಳು ಎಲ್ಲಾ ಕಡೆಗಳಲ್ಲಿಯೂ ಗಣೇಶ ಮೂರ್ತಿ ವಿಸರ್ಜನೆ ವಿಜೃಂಭಣೆಯಿಂದ ಮಾಡಿವೆ. ಕೆಲವು ಕಡೆ ವಿಸರ್ಜನೆ ಮಾಡಬೇಕು. ಒಂದೇ ಒಂದು ಸಣ್ಣ ಕಹಿ ಘಟನೆ ನಡೆದಿಲ್ಲ. ಶಾಂತಿ ರೀತಿಯಿಂದ ಕುಣಿದು ಕುಪ್ಪಳಿಸಿ ವಿಸರ್ಜನೆ ಮಾಡುತ್ತಾರೆ. ಎಲ್ಲಾದರೂ ನಡೆದಿದ್ದರೆ ತೋರಿಸಿ ಎಂದು ಸವಾಲು ಹಾಕಿದರು.

ಹಿಂದೂಗಳ ಮನೆಗಳು ಜಖಂ ಆಗಿದ್ದು ಕೂಡಲೇ ಅವರಿಗೆ ಪರಿಹಾ ರ ನೀಡಿ ಅವರ ನೆರವಿಗೆ ಧಾವಿಸಬೇಕು. ರಾಜ್ಯ ಸರ್ಕಾರವೇ ಮುಸ್ಲಿಂರ ತುಷ್ಟೀಕರಣಕ್ಕೆ ಮುಂದಾಗಿದ್ದು ಇದರಿಂದ ಪ್ರಚೋದನೆಗೆ ಒಳಗಾದ ಕೆಲ ಪುಂಡರು ಈ ರೀತಿಯ ಕೃತ್ಯವೆಸಗಿದ್ಧಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಹೇಳಿದರು.

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣದ ಆರೋಪಿಗಳನ್ನು ಬಂಧಿಸಿದರೆ ಸಾಲದು ಅವರನ್ನು ಎನ್ ಕೌಂಟರ್ ಮಾಡಬೇಕು ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಸರ್ಕಾರ ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣಗಳನ್ನು ವಾಪಸ್ಸು ಪಡೆಯಬಾರದು. ಶಿವಮೊಗ್ಗದಲ್ಲಿ ನಡೆದ ಗಲಾಟೆಗೆ ಬಿಜೆಪಿ ಕಾರ್ಯಕರ್ತರು ಕಾರಣ ಎಂದು ಸಚಿವ ರಾಮಲಿಂಗರೆಡ್ಡಿ ಹೇಳಿದ್ದು ಖಂಡನೀಯ. ಹಿಂದುಗಳು ಯಾರೂ ಕೂಡ ಈ ರೀತಿಯ ಕೃತ್ಯ ಎಸಗುವುದಿಲ್ಲ. ಕೂಡಲೇ ಅವರು ರಾಜ್ಯದ ಜನರ ಕ್ಷಮೆಯಾಚಿಸ‌ ಬೇಕು ಎಂದು ಆಗ್ರಹಿಸಿದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment