SUDDIKSHANA KANNADA NEWS/ DAVANAGERE/DATE:30_08_2025
ದಾವಣಗೆರೆ: ಗಣೇಶೋತ್ಸವ ಮೆರವಣಿಗೆಗೆ ಅನುಮತಿ ನೀಡಿ. ಇಲ್ಲದಿದ್ದರೆ ಹೋರಾಟ ಅನಿವಾರ್ಯ. ನನ್ನ ಮೇಲೆ ನೂರಾರು ಕೇಸ್ ಹಾಕಲಿ, ತಾಕತ್ತಿದ್ದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಬಂಧಿಸಲಿ. ನಾನು ಯಾವುದೇ ಕಾರಣಕ್ಕೂ ಅಳುಕಲ್ಲ. ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಗುಡುಗಿದ್ದಾರೆ.
READ ALSO THIS STROY: “ಗಣೇಶ ಹಬ್ಬದ ನೆಪದಲ್ಲಿ ಬೆಂಕಿ ಹಚ್ಚುವವರ ಹತ್ತಿರ ಬಿಟ್ಟುಕೊಳ್ಳಬೇಡಿ”: ಸಚಿವ ಎಸ್. ಎಸ್. ಮಲ್ಲಿಕಾರ್ಜುನ್!
ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸವಾಲು ಒಡ್ಡಿರುವ ರೇಣುಕಾಚಾರ್ಯ ಅವರು. ಹಿಂದೂಗಳ ಶ್ರದ್ಧಾ ಭಕ್ತಿ ಹಬ್ಬವಾದ ಗಣೇಶೋತ್ಸವ ಮೆರವಣಿಗೆ ವೇಳೆ ಡಿಜೆ ಸಿಸ್ಟಂ ಹಾಕುವುದು ನಮ್ಮ ಹಕ್ಕು. ಇದನ್ನು ಯಾರೂ ಕಸಿದುಕೊಳ್ಳಲು
ಸಾಧ್ಯವಿಲ್ಲ ಎಂದು ಹೇಳಿದರು.
ಗಣೇಶೋತ್ಸವ ಮಾತ್ರವಲ್ಲ, ಈದ್ ಮಿಲಾದ್ ಗೂ ಡಿಜೆ ಅವಕಾಶ ಕೊಡಲಿ. ನಾವೇನೂ ಬೇಡ ಎಂದಿಲ್ಲ. ಹಿಂದೂಗಳ ಹಬ್ಬಗಳು ಬಂದಾಗ ರಾಜ್ಯ ಸರ್ಕಾರ ಯಾಕೆ ಯಾವುದೋ ಒಂದು ಸಮುದಾಯದ ಓಲೈಕೆಗೆ ಮುಂದಾಗುತ್ತದೆ ಎಂಬುದು
ಗೊತ್ತಾಗುತ್ತಿಲ್ಲ. ಜಿಲ್ಲೆಯಾದ್ಯಂತ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಸಿಸ್ಟಂ ಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಆದರೂ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಮೇಲೆ ಎಫ್ ಐಆರ್ ಹಾಕಲಾಗಿದೆ. ಸುಮೊಟೋ ಕೇಸ್ ದಾಖಲಿಸಲಾಗಿರುವುದು ನನ್ನ ಗಮನಕ್ಕೆ ಬಂದಿದೆ. ನನ್ನ ಮೇಲೆ ನೂರಾರು ಕೇಸ್ ಗಳಿವೆ. ಅಂಜಿಲ್ಲ, ಅಳುಕಲ್ಲ, ಜಗ್ಗಲ್ಲ ಬಗ್ಗಲ್ಲ. ಈ ಸರ್ಕಾರದ ವಿರುದ್ಧ ಸಂಕಲ್ಪ ಮಾಡುತ್ತೇನೆ. ನನ್ನ ಮೇಲೆ ನೂರು ಕೇಸ್ ಹಾಕಿ ಬಂಧಿಸಿ. ಹೋರಾಟ ಮುಂದುವರಿಯುತ್ತದೆ. ಹಿಂದುತ್ವ ಬಿಡಲ್ಲ. ಕೋಮು ವಿಷ ಬೀಜ ಬಿತ್ತುವ ಕೆಲಸ ನಾವು ಮಾಡಲ್ಲ. ನಾವೆಲ್ಲೂ ಹಿಂದೂ ಮುಸ್ಲಿಂ ಒಂದೇ. ಅನಗತ್ಯವಾಗಿ ಸರ್ಕಾರ, ಜಿಲ್ಲಾಡಳಿತ ಜಾತಿ, ಕೋಮು ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸಂಕಲ ವಿಘ್ನ ನಿವಾರಕ ಗಣೇಶನ ವಿಸರ್ಜನೆ ವೇಳೆ ಡಿಜೆ ಸಿಸ್ಟಂ ಬಳಕೆಗೆ ಅನುಮತಿ ನೀಡಲಾಗುತ್ತದೆ ಎಂಬ ವಿಶ್ವಾಸ ಇದೆ. ಈ ಹಿಂದೆ ಹೊನ್ನಾಳಿ, ದಾವಣಗೆರೆ, ಚಾಮರಾಜನಗರಲ್ಲಿ ನೂರಾರು ಕೇಸ್ ಹಾಕಿದ್ದರು. ನಾನು ಯಾವುದೇ ಕಾರಣಕ್ಕೂ ಕುಗ್ಗಲ್ಲ. ನನ್ನ ಅಂಜಿಸಲು ಯಾರಿಂದಲೂ ಆಗದು. ಡಿಜೆ ಬೇಕು ಎಂಬುದು ಎಲ್ಲರ ಅಪೇಕ್ಷೆ. ಈ ಸರ್ಕಾರ, ಜಿಲ್ಲಾಡಳಿತ ಸಂಜೆಯೊಳಗಾಗಿ ಡಿಜೆಗೆ ಅನುಮತಿ ನೀಡುತ್ತಾರೆ ಎಂಬ ವಿಶ್ವಾಸ ಇದೆ. ನಾವು ಭಿಕ್ಷೆ ಬೇಡಲ್ಲ. ನಮ್ಮ ಹಕ್ಕು ಪ್ರತಿಪಾದನೆ ಮಾಡುತ್ತೇವೆ. ಡಿಜೆ ಅನುಮತಿ ನೀಡಲೇಬೇಕು. ನಾನು ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. 2004ರಲ್ಲಿ ಬಳ್ಳಾರಿ, 15 ದಿನಗಳ ಕಾಲ ಬೆಳಗಾವಿ ಜೈಲಿನಲ್ಲಿದ್ದೆ. ನೂರಾರು ಕೇಸ್ ಹಾಕಿದ್ದರೂ ಖುಲಾಸೆ ಆಗಿವೆ. ನನ್ನ ಮೇಲೆ ಏನು ಕೇಸ್ ಬೇಕಾದರೂ ಹಾಕಲಿ. ಡಿಜೆಗೆ ಅನುಮತಿ ನೀಡಿ ಎಂದು ಎಂ. ಪಿ. ರೇಣುಕಾಚಾರ್ಯ ಹೇಳಿದರು.