SUDDIKSHANA KANNADA NEWS/ DAVANAGERE/ DATE:10-09-2023
ದಾವಣಗೆರೆ: ಗುರುಸಿದ್ದನಗೌಡರು ಹಿರಿಯ ನಾಯಕರು. ಮಾಜಿ ಶಾಸಕರು. ದಾವಣಗೆರೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿದ ಹಿರಿಯರು. 2004ರಲ್ಲಿ ಜಿಲ್ಲೆಯಲ್ಲಿ ಎಸ್, ಎ. ರವೀಂದ್ರನಾಥ್, ಗುರುಸಿದ್ದನಗೌಡರು ಹಾಗೂ ನಾನು ಆಯ್ಕೆಯಾಗಿದ್ದೆವು. ಉತ್ತಮ ಕೆಲಸ ಮಾಡಿದ್ದೆವು. ಆದ್ರೆ, ಯಾವುದೇ ನೊಟೀಸ್ ನೀಡದೇ ಗುರುಸಿದ್ದನಗೌಡ ಹಾಗೂ ಪುತ್ರರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವುದು ಆಶ್ಚರ್ಯ ತಂದಿದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. Renukacharya) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ನೂತನ್ ಕಾಲೇಜು ಸಮೀಪವಿರುವ ಗುರುಸಿದ್ದನಗೌಡರ ನಿವಾಸಕ್ಕೆ ಆಗಮಿಸಿ ಉಪಾಹಾರ ಸೇವಿಸಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಾಸಕರಾಗಿದ್ದಾಗ ಗುರುಸಿದ್ದನಗೌಡರು ಕೋಟ್ಯಂತರ ರೂಪಾಯಿ ಅನುದಾನ ತಂದು ಕೆಲಸ ಮಾಡಿದ್ರು. ಗುರುಸಿದ್ದನಗೌಡರು, ಕುಟುಂಬದ ಸದಸ್ಯರನ್ನು ಪಕ್ಷ ವಿರೋಧಿ ಚಟುವಟಿಕೆ ಹಣೆಪಟ್ಟಿ ಕಟ್ಟಿ ನೊಟೀಸ್ ಕೊಡದೇ ಸಸ್ಪೆಂಡ್ ಮಾಡಿರುವುದನ್ನು ಮಾಧ್ಯಮದಲ್ಲಿ ನೋಡಿದೆ.
ಇದು ಆಶ್ಚರ್ಯ ತಂದಿದೆ ಎಂದರು.
ಈ ಸುದ್ದಿಯನ್ನೂ ಓದಿ:
Davanagere: ನಾನೊಂದು ತೀರ ನೀನೊಂದು ತೀರ ಅಂದ್ರು ಅಂದು…. ಒಂದಾಗೋಣ ಬಾ ಅಂದ್ರು ಇಂದು: ಕಠೋರ ನಿರ್ಧಾರ ಬದಲಿಸುವಂತೆ ಮಾಡಿದ್ರು ಮಕ್ಕಳು, ನ್ಯಾಯಾಧೀಶರು…!
ಗುರುಸಿದ್ದನಗೌಡರು ರಾಜಕೀಯವಾಗಿ ಶಕ್ತಿ ಹೊಂದಿದ್ದಾರೆ. ಸಂಘಟನಾ ಶಕ್ತಿಯೂ ಇದೆ. ಪಕ್ಷ ಕಟ್ಟಿದ ಹಿರಿಯ ನಾಯಕರಲ್ಲಿ ಒಬ್ಬರು. ನಾವು ಕಿರಿಯರು. ರಾಜಕೀಯ ಪಕ್ಷ ಅಂದ ಮೇಲೆ ತಾಲೂಕು ಮಟ್ಟದಲ್ಲಿ ತಾಂತ್ರಿಕ ಸಮಸ್ಯೆ ಇದ್ದೇ ಇರುತ್ತದೆ. ಸಂಘಟನೆಯಲ್ಲಿ ನಮಗೆಲ್ಲರಿಗಿಂತ ಮುಂದೆ ಅವರು. ನಮಗೆಲ್ಲಾ ಮಾರ್ಗದರ್ಶನ ಮಾಡಿದ್ರು. ನೊಟೀಸ್ ನೀಡದೇ ಉಚ್ಚಾಟನೆ ಮಾಡಿರುವುದು ಸರಿಯಲ್ಲ. ಜಿಲ್ಲಾ ಘಟಕಕ್ಕೆ ಈ ಅಧಿಕಾರವೂ ಇಲ್ಲ. ಚುನಾವಣಾ ಪೂರ್ವದಲ್ಲಿ ನನ್ನನ್ನು ಭೇಟಿ ಮಾಡಿ ಗೆಲ್ಲುವಂತೆ ಗುರುಸಿದ್ದನಗೌಡರು ಸೇರಿದಂತೆ ಅನೇಕ ಮುಖಂಡರು ಶುಭ ಕೋರಿದ್ದರು. ಬಿಜೆಪಿ ಗೆಲ್ಲಬೇಕು. ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ನಿಟ್ಟಿನಲ್ಲಿ ಎಲ್ಲರೂ ಹೋರಾಟ ಮಾಡಿದೆವು. ಆದ್ರೆ ಆದದ್ದೇ ಬೇರೆ. ಗುರುಸಿದ್ದನಗೌಡರು ಬಿಜೆಪಿಯಷ್ಟೇ ಅಲ್ಲ. ಸಂಘಪರಿವಾರದಲ್ಲಿಯೂ ಕೆಲಸ ಮಾಡಿದವರು ಎಂದು ತಿಳಿಸಿದರು.
ಏಕಾಏಕಿ ಸಸ್ಪೆಂಡ್ ಮಾಡಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂಬ ಹಣೆಪಟ್ಟಿ ಕಟ್ಟಿರುವುದು ಸರಿಯಲ್ಲ. ಚುನಾವಣೆಯಲ್ಲಿ ಅಭ್ಯರ್ಥಿಗಳ ವಿರುದ್ಧವಾಗಿ ಕೆಲಸ ಮಾಡಿದರೆ ದಾಖಲೆ ಇದ್ದರೆ ನೊಟೀಸ್ ಕೊಡಬೇಕು. ಏಳು ದಿನಗಳ ಕಾಲಾವಕಾಶ ಕೊಡಬೇಕು. ನಿಮ್ಮನ್ನು ಏಕೆ ಅಮಾನತು ಮಾಡಬಾರದು ಎಂದು ಎಚ್ಚರಿಕೆ ನೀಡಬಹುದು. ಆದ್ರೆ ಜಿಲ್ಲಾ ಘಟಕಕ್ಕೆ ಸಸ್ಪೆಂಡ್ ಮಾಡುವ ಅಧಿಕಾರ ಇಲ್ಲದಿದ್ದರೂ ಉದ್ದೇಶ ಪೂರ್ವಕವಾಗಿಯೇ ಈ ಕ್ರಮ ಜರುಗಿಸಲಾಗಿದೆ. ಗುರುಸಿದ್ದನಗೌಡರ ಪುತ್ರ ಟ್ರಸ್ಟ್ ಮಾಡಿಕೊಂಡು ಹೆಲ್ತ್ ಕ್ಯಾಂಪ್ ಮಾಡುತ್ತಿದ್ದಾರೆ. ಸಹಜವಾಗಿಯೇ ಸಂಘ ಪರಿವಾರದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆಯಾಗಿದೆ. ರವಿಕುಮಾರ್ ಲೋಕಸಭೆ ಅಭ್ಯರ್ಥಿಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದಿದ್ದಾರೆ. ರಾಜಕೀಯವಾಗಿ ಕುಟುಂಬ ಸದಸ್ಯರು ಬೆಳೆಯಬಾರದು. ಮುಗಿಸಬೇಕು ಎಂಬುದು ಈ ಕ್ರಮ ಕೈಗೊಂಡಿರುವ ವಿಚಾರದಲ್ಲಿ ಕಾಣುತ್ತಿದೆ. ಪಕ್ಷದ ಕಾರ್ಯಕರ್ತನಾಗಿ, ಗುರುಸಿದ್ದನಗೌಡರ ಅಭಿಮಾನಿಯಾಗಿ ನಾನು ಇದನ್ನು ಖಂಡಿಸುತ್ತೇನೆ ಎಂದು ಹೇಳಿದರು.
ಅಂದು ಎಸ್. ಎ. ರವೀಂದ್ರನಾಥ್ ಪಕ್ಷ ಕಟ್ಟಿದರು. ಅಖಂಡ ಚಿತ್ರದುರ್ಗ – ದಾವಣಗೆರೆ ಜಿಲ್ಲೆ ಇತ್ತು. ಭದ್ರಾ ಜಲಾಶಯದಿಂದ ನೀರು ಹರಿಸಬೇಕು ಎಂಬುದೂ ಸೇರಿದಂತೆ ಹಲವು ರೀತಿಯ ಹೋರಾಟ ಮಾಡಿದ್ದಾರೆ. ರವೀಂದ್ರನಾಥ್ ನಾವೆಲ್ಲಾ ಒಟ್ಟಾಗಿ ಸಚಿವರನ್ನಾಗಿ ಮಾಡಿ ಎಂದ್ರು. ಸಚಿವರನ್ನಾಗಿ ಮಾಡಲಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಎಸ್. ಎ. ರವೀಂದ್ರನಾಥ್ ಸಚಿವರಾದರು. ಸ್ಥಳೀಯವಾಗಿ ಮಾಡಲಿಲ್ಲ. ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಜಿಲ್ಲಾಧ್ಯಕ್ಷರ ಏಕಪಕ್ಷೀಯ ನಿರ್ಧಾರ ಖಂಡಿಸುತ್ತೇನೆ. ಗುರುಸಿದ್ದನಗೌಡರನ್ನು ಮಾತನಾಡಿಸುವ ಸಲುವಾಗಿ ಬಂದಿದ್ದೇನೆ. ಇದೊಂದು ಸೌಜನ್ಯ ಭೇಟಿ. ಪಕ್ಷ ವಿರೋಧಿ ಚಟುವಟಿಕೆ ಅಲ್ಲ. ಮೂರು ಬಾರಿ ನಾನು ಶಾಸಕನಾಗಿದ್ದೆ. ಅಭಿವೃದ್ದಿ ಮಾಡಿದೆವು. ಗೌಡರು ಒಂದೇ ಬಾರಿ ಗೆದ್ದರು. ಮೀಸಲಾತಿ ಕಾರಣ ಸ್ಪರ್ಧೆ ಮಾಡಿಲ್ಲ ಎಂದು ಹೇಳಿದರು.