ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸ್ವಯಂಘೋಷಿತ ಸಂವಿಧಾನ ತಜ್ಞನ ಮಾತಿಗೆ ಜೈ ಎಂದಿದ್ದಕ್ಕೆ ಸಿದ್ದರಾಮಯ್ಯರಿಗೆ ಹೈಕೋರ್ಟ್ ಕಪಾಳಮೋಕ್ಷ: ಎಂ. ಪಿ. ರೇಣುಕಾಚಾರ್ಯ ಲೇವಡಿ!

On: October 29, 2025 11:36 AM
Follow Us:
ಎಂ. ಪಿ. ರೇಣುಕಾಚಾರ್ಯ
---Advertisement---

SUDDIKSHANA KANNADA NEWS/DAVANAGERE/DATE:29_10_2025

ದಾವಣಗೆರೆ: ಅಧಿಕಾರದ ದರ್ಪ, ದೌಲತ್ತು, ಅಹಂನಿಂದ ಏನು ಬೇಕಾದರೂ ಮಾಡಬಹುದೆಂದು ಹೊರಟಿದ್ದ ರಿಪಬ್ಲಿಕನ್ ಕಲುಬುರಗಿ ಸಚಿವರಿಗೆ ಧಾರವಾಡ ಹೈಕೋರ್ಟ್ ಪೀಠ ನೀಡಿರುವ ಆದೇಶ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

READ ALSO THIS STORY: RRB NTPC ಪದವೀಧರ ನೇಮಕಾತಿ: 5,810 ಸ್ಟೇಷನ್ ಮಾಸ್ಟರ್, ಕ್ಲರ್ಕ್ ಮತ್ತು ಇತರ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

ಆರ್ ಎಸ್ ಎಸ್ ಗುರಿಯಾಗಿಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಚಟುವಟಿಕೆ ನಡೆಸಲು ಅನುಮತಿ ಕಡ್ಡಾಯ ಎಂಬ ಸಂವಿಧಾನ ವಿರೋಧಿ ಸಚಿವ ಸಂಪುಟದ ತೀರ್ಮಾನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ಬಣ್ಣಿಸಿದ್ದಾರೆ.

ನೀಡಿರುವ ಎರಡು ಇಲಾಖೆಯಲ್ಲಿ ಮಾಡಲು ಸಾಕಷ್ಟು ಕೆಲಸವಿದ್ದರೂ ಶೇ.25ರಷ್ಟು ಪ್ರಗತಿಯನ್ನು ಸಾಧಿಸದ ಕಳಪೆ ಮಂತ್ರಿ ಹಾಗೂ ಸ್ವಯಂ ಘೋಷಿತ ಸಂವಿಧಾನ ತಜ್ಞನ ಮಾತಿಗೆ ಜೀ ಹುಜೂರ್ ಎಂದು ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡ ಸಿದ್ದರಾಮಯ್ಯರಿಗೂ ಇದು ಕಪಾಳಕ್ಕೆ ಬಾರಿಸಿದಂತಿದೆ ಎಂದು ಹೇಳಿದ್ದಾರೆ.

ಆರ್ ಎಸ್ ಎಸ್ ಎಂದಿಗೂ ಅಶಾಂತಿ, ಹಿಂಸೆಗೆ ಪ್ರೋತ್ಸಾಹ ನೀಡುವುದಿಲ್ಲ. ತನ್ನ ತವರು ಕ್ಷೇತ್ರದಲ್ಲಿ ಪಥಸಂಚಲನ ನಡೆದರೆ ಮುಂದೊಂದು ದಿನ ರಾಜಕೀಯವಾಗಿ ಮೂಲೆಗುಂಪಾಗಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದ ಬೆಂಗಳೂರು ಕಾನ್ವೆಂಟ್ ವಿದ್ಯಾರ್ಥಿಗೆ ನ್ಯಾಯಾಲಯ ಮುಟ್ಟಿ ನೋಡಿಕೊಳ್ಳುವಂತೆ ನೀತಿ ಪಾಠ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಇನ್ನು ಮುಂದಾದರೂ ದ್ವೇಷ, ಜಿದ್ದು, ಸೇಡು, ಅಸೂಯೆ ಬಿಟ್ಟು ಕಳಪೆ ಮಂತ್ರಿ ಎನಿಸಿಕೊಂಡು ಸಂಪುಟದಿಂದ ಹೊರ ಹೋಗುವ ಮೊದಲು ಎಚ್ಚೆತ್ತುಕೊಂಡು ಕೊಟ್ಟಿರುವ ಎರಡು ಇಲಾಖೆಗಳಲ್ಲಿ ಜನಪರವಾಗಿ ಕೆಲಸ ಮಾಡಿ ಎಂದು ಆರ್ ಎಸ್ ಎಸ್ ಪರವಾಗಿ ಆಶಿಸುವೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment