ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BIG BREAKING: ಸೋಲಾರ್ ಅಳವಡಿಸಿದ್ರೆ ಬೆಂಕಿ ಹಚ್ಚಿಬಿಡ್ತೀವಿ: ಎಂ. ಪಿ. ರೇಣುಕಾಚಾರ್ಯ ರೋಷಾಗ್ನಿ ಸ್ಫೋಟ…!

On: June 18, 2024 9:54 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:18-06-2024

ದಾವಣಗೆರೆ: ರೈತರನ್ನ ಒಕ್ಕಲೆಬ್ಬಿಸಿ ಸೋಲಾರ್ ಪ್ಲಾಂಟ್ ಮಾಡಿದ್ದೇ ಆದರೆ ಬೆಂಕಿ ಹಚ್ಚಿಬಿಡ್ತೀವಿ. ರೈತರ ಬದುಕಿನ ಜೊತೆ ಚೆಲ್ಲಾಟ ಆಡ್ತೀರಾ. ಅದು ಹೇಗೆ ತೆರವುಗೊಳಿಸುತ್ತೀರಾ ನಾನು ನೋಡುತ್ತೇನೆ. ಕೋಟ್ಯಂತರ ರೂಪಾಯಿ ಹಣ ಲೂಟಿ ಹೊಡೆದಿರುವುದು ನನಗೆ ಗೊತ್ತು. ಯಾರೆಲ್ಲಾ ಹಣ ಪಡೆದಿದ್ದಾರೆ ಎಂಬುದನ್ನು ಬಹಿರಂಗಗೊಳಿಸುತ್ತೇನೆ. ರೈತರಿಗಾಗಿ ಎಲ್ಲದಕ್ಕೂ ಸಿದ್ಧ.

ಇದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರ ರೋಷಾಗ್ನಿ ಸ್ಫೋಟಗೊಂಡ ಪರಿ. ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಅರಬಗಟ್ಟೆ ಮತ್ತು ಹರಳಹಳ್ಳಿ ಗ್ರಾಮದ ಗೋಮಾಳ ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಲು ಆಗಮಿಸಿದ್ದ ಪೊಲೀಸರು, ಕಂದಾಯ ಇಲಾಖೆ, ಬೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಬೆವರಿಳಿಸಿದ ರೀತಿ ಇದು.

ಅರಬಗಟ್ಟೆ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ಉಳುಮೆ ಮಾಡುತ್ತಿದ್ದ 49 ಎಕರೆ ಹಾಗೂ ಹರಳಹಳ್ಳಿ ಗ್ರಾಮದ 22 ಎಕರೆ ಗೋಮಾಳ ಜಮೀನನ್ನು ಕಂದಾಯ ಇಲಾಖೆ, ಬೆಸ್ಕಾಂ ಇಲಾಖೆ ಅಧಿಕಾರಿಗಳು ರಾತ್ರೋರಾತ್ರಿ ಸೋಲಾರ್ ಅಳವಡಿಕೆಗೆ
ಜಮೀನಿನಲ್ಲಿ ಬೆಳೆದಿದ್ದ ಬೆಳೆ ನಾಶಪಡಿಸಿ, ಜಾಗ ವಶಪಡಿಸಿಕೊಳ್ಳಲು ಬಂದಿದ್ದರು. ಖಾಸಗಿ ಕಂಪನಿಗೆ ಸೋಲಾರ್ ಪ್ಲಾಂಟ್ ಗೆ ಮಂಜೂರು ಮಾಡಲಾಗಿರುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಸುದ್ದಿ ತಿಳಿಯುತ್ತಿದ್ದಂತೆ ಬಂದ ರೇಣುಕಾಚಾರ್ಯ ಅಕ್ಷರಕ್ಷಃ ಕೆಂಡಾಮಂಡಲರಾದರು. ಪೊಲೀಸ್ ಇಲಾಖೆಯ ರಕ್ಷಣೆ ಪಡೆದು ರೈತ ಬೆಳೆಗಳನ್ನು ನಾಶ ಮಾಡಲು ಬಂದಿದ್ದು ರೇಣುಕಾಚಾರ್ಯರ ಸಿಟ್ಟು ಮತ್ತಷ್ಟು ಹೆಚ್ಚಾಗುವಂತೆ ಮಾಡಿತು.

ರೈತರ ಮೇಲೆ ದಬ್ಬಾಳಿಕೆ ಮಾಡಿ ಜಮೀನು ವಶಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿರುವ ವಿಷಯ ರೈತರು ನನ್ನ ಗಮನಕ್ಕೆ ತಂದ ತಕ್ಷಣ ಸ್ಥಳಕ್ಕೆ ಭೇಟಿನೀಡಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಸ್ಕಾಂ ಎಂ. ಡಿ. ಅವರಿಗೆ ದೂರವಾಣಿ ಮೂಲಕ ಮಾತನಾಡಿ ಯಾವುದೇ ಕಾರಣಕ್ಕೂ ರೈತರ ಜಮೀನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದೇನೆ. ಜೆಸಿಬಿ ಗಳನ್ನು ಸ್ಥಳದಿಂದ ಖಾಲಿ ಮಾಡಿಸಿ, ರೈತರು ಹಾಗೂ ಪಕ್ಷದ ಮಂಡಲ ಅಧ್ಯಕ್ಷರು ಹಾಗೂ ಮುಖಂಡರುಗಳೊಂದಿಗೆ ಪ್ರತಿಭಟನೆ ನಡೆಸಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment