ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹಿರಿಯರ ಕಡೆಗಣನೆ ಬಿಜೆಪಿ ಹೀನಾಯ ಸೋಲಿಗೆ ಕಾರಣ: ಎಂ. ಪಿ. ರೇಣುಕಾಚಾರ್ಯ ಆಕ್ರೋಶ

On: May 15, 2023 11:58 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:5-05-2023

 

ದಾವಣಗೆರೆ (DAVANAGERE): ಬಿಜೆಪಿ(BJP)ಯಲ್ಲಿ ಹಿರಿಯರ ಕಡೆಗಣನೆ ಮಾಡಿದ ಕಾರಣ ಪಕ್ಷಕ್ಕೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿದೆ. ರಾಜ್ಯದಲ್ಲಿ ಬಿಜೆಪಿ (BJP)ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ (M. P. RENUKACHARYA) ಸ್ವಪಕ್ಷದ ವಿರುದ್ಧವೇ ಕಿಡಿಕಾರಿದರು.

ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಹಿರಿಯ ಮುಖಂಡರೂ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಕಡೆಗಣಿಸಿದ್ದಾರೆಂದು ತಪ್ಪು ಸಂದೇಶ ರವಾನೆ ಆಯಿತು. ಅದು ಮತಗಳಾಗಿ ಪರುವರ್ತನೆ ಮಾಡಿಕೊಂಡ ಕಾಂಗ್ರೆಸ್ ಭರ್ಜರಿ ಜಯ ಗಳಿಸಲು ಸಾಧ್ಯವಾಯ್ತು ಎಂದು ಹೇಳಿದರು.

ಸೋಲೇ ಗೆಲುವಿನ ಮೆಟ್ಟಿಲು. ಕಾಂಗ್ರೆಸ್ ಹಸಿಸುಳ್ಳು ಹೇಳಿ, ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಯಾವ ರೀತಿ ಸರ್ಕಾರ ನಡೆಸುತ್ತಾರೆ ಎಂಬುದನ್ನು ಕಾದು ನೋಡ‌ಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳು ಹಾಗೂ ಮೀಸಲಾತಿ ಗೊಂದಲದಿಂದ ದೊಡ್ಡಪೆಟ್ಟು ಬಿದ್ದಿದೆ. ಉತ್ತಮ ಪ್ರಣಾಳಿಕೆ ನಮ್ಮದಾಗಿದ್ದರೂ ತಡವಾಗಿ ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ನವರು ಎರಡು ತಿಂಗಳು ಮುಂಚೆ ಪ್ರಣಾಳಿಕೆ ಬಿಡುಗಡೆ ಮಾಡಿ, ಗ್ಯಾರಂಟಿಗಳನ್ನು ನೀಡಿದ್ದು ಹೊಡೆತ ತಂದಿದೆ. ಇದರಿಂದ ನಮಗೆ ಹಿನ್ನೆಡೆಯಾಯ್ತು. ಜೊತೆಗೆ ಎನ್ ಪಿ ಎಸ್, ಓಪಿಎಸ್ ನೌಕರರ ಮತಗಳು ಕೈತಪ್ಪಿದವು ಎಂದು ತಿಳಿಸಿದರು.

ಸೋಲಿನ ಬಗ್ಗೆ ಯಾರನ್ನೂ ದೂಷಿಸುವುದಿಲ್ಲ. ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಜನರು 75 ಸಾವಿರ ಮತ ಹಾಕಿದ್ದಾರೆ. ನಾನು ಅವರಿಗೆ ಚಿರಋಣಿ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿ ಗೆಡುವುದು ಬೇಡ. ಇದನ್ನು ಸವಾಲಾಗಿ ಸ್ವೀಕರಿಸಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರೋಣ ಎಂದು ರೇಣುಕಾಚಾರ್ಯ ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment