SUDDIKSHANA KANNADA NEWS/ DAVANAGERE/DATE:31_08_2025
ಮುಂಬೈ: ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬಳ ಜೊತೆ ಪ್ರಿಯತಮ ಮದುವೆಯಾಗುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೋಪಗೊಂಡ ಪ್ರಿಯಕರ ಆಕೆಯನ್ನು ಕೊಂದು ಶವವನ್ನು ಕಂದಕಕ್ಕೆ ಎಸೆದ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದೆ.
READ ALSO THIS STORY: 16 ಬ್ಯಾಂಕ್ ಅಕೌಂಟ್ ಪತ್ತೆ, ಕರ್ನಾಟಕ ಸೇರಿ 10 ಕಡೆಗಳಲ್ಲಿ ವಂಚನೆ: ಸ್ಫೋಟಕ ಮಾಹಿತಿ ನೀಡಿದ “ಡಿಜಿಟಲ್ ಅರೆಸ್ಟ್” ಕೇಸ್ ನ 2ನೇ ಆರೋಪಿ!
ರತ್ನಗಿರಿಯಿಂದ ತನ್ನ ಗೆಳತಿ ಭಕ್ತಿ ಜಿತೇಂದ್ರ ಮಾಯೇಕರ್ ನಾಪತ್ತೆಯಾದ ಎರಡು ವಾರಗಳ ನಂತರ ದುರ್ವಾಸ್ ದರ್ಶನ್ ಪಾಟೀಲ್ ನನ್ನು ಬಂಧಿಸಲಾಗಿದೆ. 26 ವರ್ಷದ ಭಕ್ತಿ ಜಿತೇಂದ್ರ ಮಾಯೇಕರ್ ಆಗಸ್ಟ್ 17 ರಂದು ನಾಪತ್ತೆಯಾಗಿದ್ದಳು. ನಂತರ ಆಕೆಯ ಕುಟುಂಬವು ಪೊಲೀಸ್ ದೂರು ದಾಖಲಿಸಿ, ಆಕೆ ಸ್ನೇಹಿತನನ್ನು ಭೇಟಿಯಾಗಲು ಹೋಗುತ್ತಿರುವುದಾಗಿ ಹೇಳಿದ್ದಳು ಎಂದು ಹೇಳಿದ್ದರು.
ಪೊಲೀಸರು ತನಿಖೆ ಆರಂಭಿಸಿ, ಆಕೆಯ ಮೊಬೈಲ್ ಫೋನ್ ಟವರ್ ಪರಿಶೀಲಿಸಿದಾಗ ಖಂಡಾಲಾ ಪ್ರದೇಶದ ಬಳಿ ತೋರಿಸಿದೆ. ಅಲ್ಲಿಗೆ ಹೋಗಿ ನೋಡಿದಾಗ ಆಕೆಯ ಶವ ಪತ್ತೆಯಾಗಿದೆ. ಪಾಟೀಲ್ ನನ್ನು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ವಿಚಾರಣೆಯ ಸಮಯದಲ್ಲಿ, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡನು ಮತ್ತು ಆಕೆಯ ದೇಹವನ್ನು ಅಂಬಾ ಘಾಟ್‌ನಲ್ಲಿ ಎಸೆದಿದ್ದಾಗಿ ಹೇಳಿದ್ದಾನೆ. ಬೇರೊಬ್ಬ ಯುವತಿಯೊಂದಿಗೆ ತನ್ನ ವಿವಾಹದ ಪ್ರಸ್ತಾಪದ ಬಗ್ಗೆ ಆಗಾಗ್ಗೆ
ಜಗಳವಾಡುತ್ತಿದ್ದ ಕಾರಣ ಆಕೆಯನ್ನು ಕೊಂದಿದ್ದಾಗಿ ಅವನು ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.
ಪಾಟೀಲ್ ಮತ್ತು ಆತನ ಇಬ್ಬರು ಸಹಾಯಕರಾದ ವಿಶ್ವಾಸ್ ವಿಜಯ್ ಪವಾರ್ ಮತ್ತು ಸುಶಾಂತ್ ಶಾಂತಾರಾಮ್ ನರಲ್ಕರ್ ನನ್ನು ಬಂಧಿಸಿದ್ದಾರೆ.