SUDDIKSHANA KANNADA NEWS/DAVANAGERE/DATE:18_10_2025
ಬೆಂಗಳೂರು: ಪುತ್ತೂರು ಮೂಲದ ಯುವಕನು ಯುವತಿ ಜೊತೆ ಒಂದು ವಾರಕ್ಕೂ ಹೆಚ್ಚು ಕಾಲ ಲಾಡ್ಜ್ ನಲ್ಲಿ ತಂಗಿದ್ದು, ಇಬ್ಬರೂ ಎಂಜಾಯ್ ಮಾಡಿದ್ದಾರೆ. ಪ್ರಿಯಕರ ನಿಗೂಢವಾಗಿ ಮೃತಪಟ್ಟಿದ್ದರೆ, ಯುವತಿ ಮಾತ್ರ ತನಗೇನೂ ಸಂಬಂಧವಿಲ್ಲವೆಂಬಂತೆ ಜಾಗ ಖಾಲಿ ಮಾಡಿದ್ದು, ಈ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿದೆ.
READ ALSO THIS STORY: ಶಾಮನೂರು ಶಿವಶಂಕರಪ್ಪ, ಎಸ್ ಎಸ್ ಎಂ ಹೆಸರು ತೆಗೆಸದಿದ್ದರೆ ಧರಣಿ: ಬಿ. ಪಿ. ಹರೀಶ್ ಎಚ್ಚರಿಕೆ
ಬೆಂಗಳೂರಿನ ಮಡಿವಾಳದ ಲಾಡ್ಜ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ 20 ವರ್ಷದ ಯುವಕ ತಕ್ಷಿತ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೊಲೀಸರ ತಲೆಬಿಸಿಗೆ ಕಾರಣವಾಗಿದೆ.
ಬೆಂಗಳೂರಿಗೆ ಕಳೆದ ಎಂಟು ದಿನಗಳ ಹಿಂದೆಯೇ ಯುವತಿ ಜೊತೆ ಬಂದಿದ್ದ. ಆಕೆ ಜೊತೆ ಎಂಟು ದಿನಗಳ ಕಾಲ ಲಾಡ್ಜ್ ನಲ್ಲಿ ತಂಗಿದ್ದ. ಇಬ್ಬರೂ ಒಂದೇ ರೂಂನಲ್ಲಿದ್ದರು. ಮೆಡಿಕಲ್ ಶಾಪ್ ನಿಂದ ಮಾತ್ರೆ ತಂದಿದ್ದು, ಇಬ್ಬರೂ ಸೇವಿಸಿದ್ದಾರೆ. ಆದ್ರೆ, ಯಾವ ಮಾತ್ರೆ ಎಂಬುದು ಗೊತ್ತಾಗಿಲ್ಲ. ವಯಾಗ್ರ ಅಥವಾ ಲೈಂಗಿಕ ಪ್ರಚೋದಕ ಮಾತ್ರೆಗಳನ್ನು ಇಬ್ಬರು ನುಂಗಿ ಪ್ರಣಯ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮೆಡಿಕಲ್ ಶಾಪ್ ನಿಂದ ಮಾತ್ರೆ ತಂದಿರುವುದು ನಿಜ. ಆದ್ರೆ, ಯಾವ ಮಾತ್ರೆಗಳು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಆದ್ರೆ, ಒಂಬತ್ತನೇ ದಿನ ಯುವಕ ಸತ್ತು ಹೋಗಿದ್ದಾನೆ. ಯುವಕನ ಜೊತೆಗಿದ್ದ ಯುವತಿ ಎಸ್ಕೇಪ್ ಆಗಿದ್ದಾಳೆ. ಮನೆಯವರಿಗೆ ಮೈಸೂರಿನಲ್ಲಿ ಓದಲು ಹೋಗುತ್ತಿದ್ದೇನೆ ಎಂದು ಹೇಳಿ ತಕ್ಷಿತ್ ಹೋಗಿದ್ದಾನೆ. ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಯುವತಿ ಜೊತೆ ಬೆಂಗಳೂರಿನ ಲಾಡ್ಜ್ ಗೆ ಹೋಗಿದ್ದಾನೆ. ಅಕ್ಟೋಬರ್ 9ರಂದು ರೂಂ ಮಾಡಿದ್ದಾನೆ. ಮಡಿವಾಳದ ಈ ಲಾಡ್ಜ್ ನಲ್ಲಿ ಇಬ್ಬರೂ ತಂಗಿದ್ದಾರೆ. ಹಗಲು ರಾತ್ರಿ ಇಬ್ಬರೇ ಇದ್ದಾರೆ. ಅಕ್ಟೋಬರ್ 17ರ ರಾತ್ರಿ ಸಾವನ್ನಪ್ಪಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಮಂಗಳೂರಿನ ಪಣಂಬೂರು ಕಾಲೇಜೊಂದರಲ್ಲಿ ತಕ್ಷಿತ್ ಹಾಗೂ ಯುವತಿ ಜೊತೆಗೆ ಒಂದೇ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಇಬ್ಬರ ಪರಿಚಯ ಸಲುಗೆಗೆ ತಿರುಗಿ ಲಾಡ್ಜ್ ವರೆಗೆ ಬರುವಂತಾಗಿದೆ. ಸುಮಾರು ಒಂದು ವಾರದವರೆಗೆ ಫುಡ್ ಅನ್ನು ಲಾಡ್ಜ್ ನಲ್ಲಿಯೇ ಬುಕ್ ಮಾಡಿ ತರಿಸಿಕೊಂಡಿದ್ದಾರೆ. ಈ ಜೋಡಿಗೆ ಊಟದ ಬಳಿಕ ಫುಡ್ ಪಾಯಿಸನ್ ಆಗಿದೆಯಂತೆ. ಯುವಕ ಸ್ವಲ್ಪ ಚೇತರಿಕೆ ಕಾಣುತ್ತಿದ್ದಂತೆ ಲಾಡ್ಜ್ ನಿಂದ ಯುವತಿ ಹೋಗಿದ್ದಾಳೆ. ಆದರೆ ಆನಂತರ ಏನಾಯ್ತೋ ಏನೋ ತಕ್ಷಿತ್ ಕೊನೆಯುಸಿರೆಳೆದಿದ್ದಾನೆ. ಹಾಗಾಗಿ, ಈ ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆಯತೊಡಗಿದೆ.
ರೂಂ ಬಾಯ್ ಬಾಗಿಲು ತಟ್ಟಿದರೂ ತಕ್ಷಿತ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆ ಬಳಿಕ ಬಾಗಿಲು ಹೊಡೆದು ನೋಡಿದಾಗ ತಕ್ಷಿತ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಲಾಡ್ಜ್ ಸಿಸಿಟಿವಿ, ಡಿವಿಆರ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಯುವಕನ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.