SUDDIKSHANA KANNADA NEWS/ DAVANAGERE/ DATE:22-04-2023
ದಾವಣಗೆರೆ (DAVANAGERE): ಫೋನ್ ಪೇ (PHONE PAY) ಮೂಲಕ 50 ಸಾವಿರ ರೂಪಾಯಿ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ದಾವಣಗೆರೆ (DAVANAGERE) ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ (PSI)ಹಾಗೂ ಪೊಲೀಸ್ ಕಾನ್ ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪೊಲೀಸ್ ಸಬ್ ಇನ್ ಸ್ಪೆಕ್ಟರ್ (PSI) ಶಿವನಗೌಡ ಹಾಗೂ ಕಾನ್ ಸ್ಟೇಬಲ್ ಲಿಂಗರಾಜ ನಾಯ್ಕ ಲೋಕಾಯುಕ್ತ ಬಲೆಗೆ ಬಿದ್ದವರು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳಕಟ್ಟೆ ಗ್ರಾಮದ ರಂಗಸ್ವಾಮಿ ಎಂಬುವವರು ಮಹಿಳೆ ಕಾಣೆ ಬಗ್ಗೆ ದೂರು ನೀಡಿದ್ದರು. ಮಹಿಳೆ ಪತ್ತೆ ಹಚ್ಚಿ ಬಳಿಕ ಜೊತೆಗೆ ಕಳುಹಿಸುವಂತೆ ಮನವಿ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ್ದರು. ಇದಕ್ಕಾಗಿ 50 ಸಾವಿರ ರೂಪಾಯಿ ಲಂಚ ನೀಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದರು.
ರಂಗಸ್ವಾಮಿ ಅವರು ನನ್ನ ಬಳಿ ಹಣ ಇಲ್ಲ ಎಂದಿದ್ದಾರೆ. ಲಂಚದ ಹಣ ನೀಡಲು ಇಷ್ಟವಿಲ್ಲ ಎಂದು ಲೋಕಾಯುಕ್ತ ಪೊಲೀಸರಿಗೆ ಈ ಸಂಬಂಧ ದೂರು ಕೊಟ್ಟಿದ್ದಾರೆ. ಬಳಿಕ ಪಿಎಸ್ ಐ (PSI) ಹಾಗೂ ಕಾನ್ ಸ್ಟೇಬಲ್ ಕ್ಯಾಶ್ ಮೂಲಕ ಹಣ ಬೇಡ, ಫೋನ್ ಪೇ ಮಾಡುವಂತೆ ಸೂಚಿಸಿದ್ದಾರೆ. ಆಗ ನನ್ನ ಮೊಬೈಲ್ ನಲ್ಲಿ ಫೋನ್ ಪೇ (PHONE PAY) ಇಲ್ಲ. ಯಜಮಾನರ ಕಡೆಯಿಂದ ಫೋನ್ ಪೇ ಮೂಲಕ ಹಣ ನೀಡುತ್ತೇನೆ ಎಂದಿದ್ದಾರೆ. ಆಗ ತನ್ನ ಮೊಬೈಲ್ (MOBILE) ನಂಬರ್ ಅನ್ನು ಕೊಟ್ಟಿದ್ದ ಪಿಎಸ್ ಐ ಹಾಗೂ ಕಾನ್ ಸ್ಟೇಬಲ್ ನಂಬರ್ ಗೆ ಹಣ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ಲೋಕಾಯುಕ್ತರ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.