ಭೋಪಾಲ್: ಆದಾಯ ಮೀರಿ ಆಸ್ತಿ ಗಳಿಸಿದ್ದ ಆರೋಪದಡಿ ಲೋಕಾಯುಕ್ತ ಪೋಲಿಸರು ಸಾರಿಗೆ ಇಲಾಖೆಯ ಮಾಜಿ ಕಾನ್ಸಟೇಬಲ್ ಮನೆ ಮೇಲೆ ದಾಳಿ ನಡೆಸಿದಾಗ ಬರೊಬ್ಬರಿ 2.85ಕೋಟಿ ರೂ ನಗದು ಹಣ ಮತ್ತು 40ಕೆ.ಜಿ ಚಿನ್ನ ಪತ್ತೆಯಾಗಿರುವ ಪ್ರಕರಣ ಮಧ್ಯ ಪ್ರದೇಶದ ಭೋಪಾಲ್ ಅಲ್ಲಿ ನಡೆದಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಲೋಕಾಯುಕ್ತರು ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿರುವ ಕಾರಣ ದೂರು ದಾಖಾಲಾದ ಹಿನ್ನಲೆಯಲ್ಲಿ ಮಾಜಿ ಸಾರಿಗೆ ಇಲಾಖೆಯ ಕಾನ್ಸ್‌ಟೇಬಲ್ ಮನೆ ಮೇಲೆ ದಾಳಿ ನಡೆಸಿದಾಗ, 2.85 ಕೋಟಿ ರೂ ಹಣ ನಗದು, ಸುಮಾರು 40ಕೆ.ಜಿ.ಚಿನ್ನ ಮತ್ತು 50ಲಕ್ಷ ರೂ.ಮೌಲ್ಯದ ಬೆಲೆ ಬಾಳುವ ಅಭರಣಗಳು ಪತ್ತೆಯಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.