ದಾವಣಗೆರೆ: ದಾವಣಗೆರೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆ ದಾಳಿ ನಡೆಸಿದ್ದು, ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ಬೆಸ್ಕಾಂ ಸಿವಿಲ್ ಡಿಪಾರ್ಟ್ ಮೆಂಟ್ ನ ಎಇಇ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಬೆಸ್ಕಾಂ ಸಿವಿಲ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್. ಅರ್ಜುನ್ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ. ಶಿವಮೊಗ್ಗ ಮೂಲದವರಾದ ಆರ್. ಹೆಚ್. ಅರ್ಜುನ್ ಅವರು ದಾವಣಗೆರೆಯ ಬೆಸ್ಕಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದಾವಣಗೆರೆಯ ನಿಟುವಳ್ಳಿಯ ಕೊಠಡಿ ಹಾಗೂ ಬೆಸ್ಕಾಂ ಕಚೇರಿ, ಶಿವಮೊಗ್ಗದ ಗೋಪಾಳದಲ್ಲಿ ವಾಣಿಜ್ಯ ಸಂಕೀರ್ಣ, ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ ತಳಲೆ ಸಮೀಪದ ತೋಟದ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ದಾಳಿಯ ವಿವರಗಳು
ಅಧಿಕಾರಿಯ ಹೆಸರು: ಆರ್. ಎಚ್. ಅರ್ಜುನ್, ಸಹಾಯಕ ಕಾರ್ಯಪಾಲಕ ಅಭಿಯಂತರರು (AEE), ಸಿವಿಲ್ ವಿಭಾಗ, ಬೆಸ್ಕಾಂ ದಾವಣಗೆರೆ.
ಆರೋಪ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ (ಅಕ್ರಮ ಆಸ್ತಿ).
ದಾಳಿ ನಡೆದ ಸ್ಥಳಗಳು:
ದಾವಣಗೆರೆ: ನಿಟುವಳ್ಳಿಯಲ್ಲಿರುವ ವಾಸದ ಮನೆ ಮತ್ತು ಬೆಸ್ಕಾಂ ಕಚೇರಿ.
ಶಿವಮೊಗ್ಗ: ಗೋಪಾಳದಲ್ಲಿರುವ ವಾಣಿಜ್ಯ ಸಂಕೀರ್ಣ.
ಹೊಸನಗರ: ರಿಪ್ಪನ್ಪೇಟೆ ಸಮೀಪದ ತಳಲೆಯಲ್ಲಿರುವ ತೋಟದ ಮನೆ.ದಾವಣಗೆರೆಯ ನಿಟುವಳ್ಳಿಯ ಕೊಠಡಿ ಹಾಗೂ ಬೆಸ್ಕಾಂ ಕಚೇರಿ, ಶಿವಮೊಗ್ಗದ ಗೋಪಾಳದಲ್ಲಿ ವಾಣಿಜ್ಯ ಸಂಕೀರ್ಣ, ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆ ತಳಲೆ ಸಮೀಪದ ತೋಟದ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ಅರ್ಜುನ್ ಅವರ ವಿರುದ್ದ ಈ ಹಿಂದೆಯೂ ಸಾಕಷ್ಟು ದೂರುಗಳು ಬಂದಿದ್ದವು. ಇತ್ತೀಚಿನ ದಿನಗಳಲ್ಲಿಯೂ ಸಾಕಷ್ಟು ದೂರುಗಳು ಬಂದಿದ್ದವು. ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆಂದು ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ಮುಂದುವರಿದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
- AEE R Arjun
- BESCOM Civil Division
- Corruption Case
- Davanagere BESCOM
- Disproportionate Assets
- Lokayukta Karnataka
- Lokayukta Raid
- Ripponpete Farmhouse.
- Shimoga Commercial Complex
- ಅಕ್ರಮ ಆಸ್ತಿ ಸಂಪಾದನೆ
- ಎಇಇ ಅರ್ಜುನ್
- ದಾವಣಗೆರೆ ಬೆಸ್ಕಾಂ
- ದಾವಣಗೆರೆ ಸುದ್ದಿ
- ಭ್ರಷ್ಟಾಚಾರ ವಿರೋಧಿ ದಳ
- ರಿಪ್ಪನ್ ಪೇಟೆ ತೋಟದ ಮನೆ.
- ಲೋಕಾಯುಕ್ತ ದಾಳಿ
- ಶಿವಮೊಗ್ಗ ವಾಣಿಜ್ಯ ಸಂಕೀರ್ಣ





Leave a comment