SUDDIKSHANA KANNADA NEWS/ DAVANAGERE/ DATE:16-12-2023
ದಾವಣಗೆರೆ: ದಾವಣಗೆರೆಯಲ್ಲಿ ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನದಲ್ಲಿ ವೀರಶೈವ ಲಿಂಗಾಯತರ ಶಕ್ತಿ ಪ್ರದರ್ಶಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಾತಿಗಣತಿ ವರದಿಯನ್ನು ಅಂಗೀಕರಿಸಬಾರದು ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ವೀರಶೈವ ಲಿಂಗಾಯತ ಸಮಾಜದ 73 ಶಾಸಕರ
ಪೈಕಿ 60 ಶಾಸಕರು ಸಹಿ ಮಾಡಿದ ಪತ್ರವನ್ನೂ ಸಿದ್ದರಾಮಯ್ಯರಿಗೆ ಸಲ್ಲಿಸಿದ್ದೇವೆ. ಅವೈಜ್ಞಾನಿಕವಾಗಿರುವ ಜಾತಿಗಣತಿ ವರದಿ ಸ್ವೀಕಾರ ಮಾಡಬಾರದು ಎಂದು ಆಗ್ರಹಪಡಿಸಿದ್ದೇವೆ. ಈ ಸಂಬಂಧ ಪತ್ರವನ್ನೂ ಬರೆದಿದ್ದೇವೆ ಎಂದು ತಿಳಿಸಿದರು.
ಅಂಹಿದ ಸಮಾವೇಶಕ್ಕೆ ಠಕ್ಕರ್ ಕೊಡುವ ರೀತಿಯಲ್ಲಿ ಲಿಂಗಾಯತ ಸಮುದಾಯವು ಒಟ್ಟಾಗಿ ಮಹಾ ಅಧಿವೇಶನದಲ್ಲಿ ಶಕ್ತಿ ಪ್ರದರ್ಶನ ತೋರಿಸಲಿದೆ. ಅಹಿಂದ ಸಮಾವೇಶಕ್ಕೆ ಕೌಂಟರ್ ಕೊಡಲಾಗುವುದು ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ:
BIG BREAKING: ಜಾತಿಗಣತಿ ವರದಿ ಅಂಗೀಕರಿಸದಂತೆ ಒತ್ತಾಯ, ವೈಜ್ಞಾನಿಕ – ವಾಸ್ತವಾಂಶ ಆಧಾರಿತ ಗಣತಿ ನಡೆಸಿ: ಸಿಎಂಗೆ ಶಾಮನೂರು ಶಿವಶಂಕರಪ್ಪರ ನೇತೃತ್ವದ ನಿಯೋಗ ಒತ್ತಾಯ
ವೀರಶೈವ ಲಿಂಗಾಯತ ಸಮಾಜವು ರಾಜ್ಯದಲ್ಲಿ ದೊಡ್ಡ ಸಮಾಜ. ಆದ್ರೆ, ವರದಿ ತಯಾರು ಮಾಡುವಾಗ ಸರಿಯಾದ ರೀತಿಯಲ್ಲಿ ಗಣತಿ ಮಾಡಿಲ್ಲ. ಮತ್ತೊಮ್ಮೆ ವೈಜ್ಞಾನಿಕವಾಗಿ ಜಾತಿಗಣತಿ ವರದಿ ತಯಾರಿಸಬೇಕು. ನಾವು ಜಾತಿಗಣತಿಗೆ ವಿರೋಧಿಗಳಲ್ಲ. ಆದ್ರೆ, ವೈಜ್ಞಾನಿಕವಾಗಿ ನಡೆಯಬೇಕು ಎಂಬುದಷ್ಟೇ ನಮ್ಮ ಒತ್ತಾಯ ಎಂದು ಹೇಳಿದರು.