ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಅಣ್ಣಾಮಲೈ ಛಾವಟಿ ಚಾಟಿ, ಆಪ್ ನಾಯಕನಿಂದ ಬೆಲ್ಟ್ ಏಟು! ಸ್ವತಃ ಹೊಡೆದುಕೊಂಡು ನ್ಯಾಯಕ್ಕೆ ಆಗ್ರಹ

On: January 7, 2025 9:20 AM
Follow Us:
---Advertisement---

ಗುಜರಾತ್‌ನಲ್ಲಿ ಜನರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆಪ್ ನಾಯಕ ಗೋಪಾಲ್ ಇಟಾಲಿಯಾ ಸಾರ್ವಜನಿಕ ಸಭೆಯಲ್ಲಿ ಚಾಟಿಯಲ್ಲಿ ಹೊಡೆದುಕೊಂಡಿದ್ದಾರೆ. ತಮಿಳ್ನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಅನುಕರಿಸಿ, ಪಾಟಿದಾರ್ ಮಹಿಳೆಯ ಮೇಲಿನ ಬಿಜೆಪಿ ನಾಯಕರ ಮಾನಹಾನಿ ಘಟನೆಯನ್ನು ಉಲ್ಲೇಖಿಸಿ ಕ್ಷಮೆ ಕೇಳುತ್ತಾ ಈ ರೀತಿ ಮಾಡಿದ್ದಾರೆ.

ಸೂರತ್‌: ‘ಬಿಜೆಪಿ ಆಡಳಿತದಲ್ಲಿರುವ ಗುಜರಾತ್‌ನಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ’ ಎಂದು ಆಪ್ ನಾಯಕ ಗೋಪಾಲ್ ಇಟಾಲಿಯಾ ಸಾರ್ವಜನಿಕ ಸಭೆಯೊಂದರಲ್ಲೇ ಚಾಟಿಯಲ್ಲಿ ಹೊಡೆದುಕೊಂಡ ಘಟನೆ ನಡೆದಿದೆ.  ಈ ಮೂಲಕ ತಮಿಳ್ನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಚಾಟಿಯೇಟನ್ನು ಅವರು ಅನುಕರಿಸಿದ್ದಾರೆ.ಅಮ್ರೇಲಿಯಲ್ಲಿ ಪಾಟಿದಾರ್‌ ಮಹಿಳೆಯ ಮೇಲೆ ಬಿಜೆಪಿ ನಾಯಕರೊಬ್ಬರ ಮಾನಹಾನಿ ಘಟನೆಯನ್ನು ಉಲ್ಲೇಖಿಸಿ ವೇದಿಕೆಯ ಕಾರ್ಯಕ್ರಮವೊಂದರಲ್ಲಿ ಜನರಲ್ಲಿ ಕ್ಷಮೆ ಕೇಳಿದ ಎಎಪಿ ರಾಷ್ಟ್ರೀಯ ಕಾರ್ಯದರ್ಶಿ ತನ್ನ ಪ್ಯಾಂಟಿನ ಬೆಲ್ಟ್‌ ತೆಗೆದುಕೊಂಡು ಹೊಡೆದುಕೊಂಡಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ‘ತಾನು ಸಂತ್ರಸ್ತರಿಗಾಗಿ ಕಾನೂನು, ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳನ್ನು ನಡೆಸುತ್ತಿದ್ದೇನೆ. ಆದರೆ ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳು ಮತ್ತು ನಾಯಕರ ಭ್ರಷ್ಟ ನಂಟಿನಿಂದ ಜನರಿಗೆ ನ್ಯಾಯ ಪಡೆಯುವುದು ಕಷ್ಟವಾಗಿದೆ. ಗುಜರಾತಿನಲ್ಲಿ ಹಲವು ದುರಂತ, ಅಕ್ರಮಗಳು ನಡೆದಿವೆ. ಆದರೆ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವಾಗಿಲ್ಲ’ ಎಂದು ಹೇಳಿ ಚಾಟಿ ಬೀಸಿಕೊಂಡರು. ಈ ವೇಳೆ ವೇದಿಕೆ ಮೇಲಿದ್ದ ಆಪ್ ನಾಯಕರು ತಡೆಯಲು ಯತ್ನಿಸಿದರು.

Join WhatsApp

Join Now

Join Telegram

Join Now

Leave a Comment