SUDDIKSHANA KANNADA NEWS/ DAVANAGERE/DATE:05_09_2025
ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ಥರು ಪಾಲಿಕೆ ವ್ಯಾಪ್ತಿಯಲ್ಲಿ ತಮ್ಮ ಉದ್ದಿಮೆ, ವ್ಯಾಪಾರ ನಡೆಸಲು ಪಾಲಿಕೆಯಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
READ ALSO THIS STORY: ಈದ್ ಮಿಲಾದ್ ಹಬ್ಬಕ್ಕೆ ಜಿಲ್ಲಾ ಪೊಲೀಸ್ ಬಿಗಿ ಕ್ರಮ: 18500 ಸಿಸಿಟಿವಿ ಸೇರಿ ಖಾಕಿ ಹದ್ದಿನ ಕಣ್ಣು ಹೇಗಿದೆ…?
ಉದ್ದಿಮೆಗಳು, ಅಂಗಡಿಗಳು ಪರವಾನಗಿ ಪಡೆಯದೇ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಈ ಪ್ರಕಟಣೆಯನ್ನು ತಿಳುವಳಿಕೆ ಪತ್ರ ಎಂದು ತಿಳಿದು ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ಥರು
ಪಾಲಿಕೆಯಿಂದ ಪರವಾನಗಿ ಪಡೆಯುವುದು ಮತ್ತು ಪರವಾನಗಿ ಪಡೆದಿರುವವರು ನವೀಕರಿಸಿಕೊಳ್ಳಬಹುದು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.