ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

EXCLUSIVE: ಎಲ್ ಐಸಿ ಮ್ಯಾನೇಜರ್ ಕಿಡ್ನಾಪ್ ಮಾಡಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಸೆರೆ: ಆಪರೇಷನ್ ರೋಚಕ.. ರಣರೋಚಕ…!

On: June 13, 2024 9:31 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:13-06-2024

ದಾವಣಗೆರೆ: ಅಪಹರಣಕ್ಕೊಳಗಾದ ಎಲ್‌ಐಸಿ ಹೌಸಿಂಗ್ ಪೈನಾನ್ಸ್ ಲಿಮಿಟೆಡ್‌ನ ಮ್ಯಾನೇಜರ್‌ ಅವರನ್ನು ಕೆಲವೇ ಗಂಟೆಯೊಳಗೆ ರಕ್ಷಿಸಿ ಲೋನ್ ವಂಚನೆ ಜಾಲವನ್ನು ಪೊಲೀಸರು ಬೇಧಿಸಿದ ಪ್ರಕರಣ ರೋಚಕ. ರಣರೋಚಕ.
ಕಿಡ್ನಾಪ್ ಆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮ್ಯಾನೇಜರ್ ಎಂ. ಎಸ್. ಶರಣು ಕಿಡ್ನಾಪ್ ಗೆ ಒಳಗಾದವರು. ಶಿವಮೊಗ್ಗದ ಕಾಶಿಪುರದ ಚೇತನ್ ಅಲಿಯಾಸ್ ಚೇತನ್ ರಾಥೋಡ್, ದಾವಣಗೆರೆ ತಾಲೂಕಿನ ನೇರಲಿಗೆ ಗ್ರಾಮದ ಕರಿಬಸಮ್ಮ ಅಲಿಯಾಸ್ ರೋಜ ಅಲಿಸಾಯ್ ನೀಲಾ, ಶಿವಮೊಗ್ಗದ ಸೋಮಯ್ಯ ಲೋಔಟ್ ಹಿಂಭಾಗದ ಮಂಜ ಅಲಿಯಾಸ್ ಮಂಜನಾಯ್ಕ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಿರೇಜಂಬೂರು ವಾಸಿ ವಿಶ್ವನಾಥ್, ನಾಗರಾಜ್, ಶಿವಮೊಗ್ಗ ನಗರದ ಬಸವನಗುಡಿ ವಾಸಿ ನಜೀರ್ ಖಾನ್ ಅಲಿಯಾಸ್ ನಾಸೀರ್ ಖಾನ್, ಶಿವಮೊಗ್ಗದ ಅಮೀರ್ ಅಹ್ಮದ್ ಕಾಲೋನಿಯ ಬಸವನಗುಡಿಯ ರಾಮು ಬಂಧಿತ ಆರೋಪಿಗಳು.

ಘಟನೆ ಹಿನ್ನೆಲೆ ಏನು…?

ಎಲ್‌ಐಸಿ ಹೌಸಿಂಗ್ ಪೈನಾನ್ಸ್ ನಿಂದ ಲೋನ್ ಪಡೆದುಕೊಳ್ಳಬೇಕೆಂದು ಆರೋಪಿಗಳೆಲ್ಲ ಸೇರಿಕೊಂಡು ಹರಿಹರ ತಾಲ್ಲೂಕು ಅಮರವಾತಿ ಗ್ರಾಮದ ಕೆಹೆಚ್‌ಪಿ ಕಾಲೋನಿಯಲ್ಲಿರುವ ನಂ. 174 ಸಂಖ್ಯೆಯ ಮನೆಯನ್ನು ಖರೀದಿ ಮಾಡಿಕೊಂಡಂತೆ
ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು.

ಆರೋಪಿಗಳಲ್ಲಿ ಒಬ್ಬರಾದ ಜ್ಯೋತಿ ಶೆಟ್ಟಿ ಗಂಡ ಭೋಜರಾಜಶೆಟ್ಟಿರವರು ದಾವಣಗೆರೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್‌ಐಸಿ ಹೌಸಿಂಗ್ ಪೈನಾನ್ಸ್ ಕಚೇರಿಗೆ ಮನೆಯ ನಕಲಿ ದಾಖಲೆಗಳನ್ನು ನೀಡಿ ಮ್ಯಾನೇಜರ್ ಎಂ. ಎಸ್. ಶರಣು ಅವರಿಗೆ 49,01,676 ರೂಪಾಯಿ ರೂಪಾಯಿ ಲೋನ್ ಹಣವನ್ನು ಮಂಜೂರು ಮಾಡಿಸಿಕೊಂಡಿರುತ್ತಾರೆ.

ಲೋನ್ ಹಣಕ್ಕೆ ಸಂಬಂಧಪಟ್ಟಂತೆ ಚೆಕ್ ನೀಡುವ ಸಮಯದಲ್ಲಿ ಆರೋಪಿಗಳು ಹಾಜರುಪಡಿಸಿದ ದಾಖಲೆಗಳು ನಕಲಿ ದಾಖಲೆಗಳೆಂದು ಮ್ಯಾನೇಜರ್‌ರವರಿಗೆ ಮನವರಿಕೆಯಾಗಿ ಚೆಕ್‌ ಅನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಜೂನ್ 31ರಂದು ಸಂಜೆ
6.30 ರ ಸಮಯದಲ್ಲಿ ಕರಿಬಸಮ್ಮ ಅಲಿಯಾಸ್ ರೋಜಾ ಎಂಬಾಕೆ ಎಲ್‌ಐಸಿ ಹೌಸಿಂಗ್ ಪೈನಾನ್ಸ್ ಕಚೇರಿಗೆ ಬಂದು ಮ್ಯಾನೇಜರ್ ಶರಣುರವರಿಗೆ ಲೋನ್ ಯಾಕೆ ಕೊಡುತ್ತಿಲ್ಲಾ ಎಂದು ಕೇಳಿ ವಿನಾಕಾರಣ ಅವರ ಕಪಾಳಕ್ಕೆ ಹೊಡೆದಿದ್ದಳು. ಆಗ ಮ್ಯಾನೇಜರ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತೇನೆಂದು ಕಚೇರಿಯಿಂದ ಹೊರಗೆ ಬಂದು ಬೈಕ್ ಅನ್ನು ತೆಗೆದುಕೊಳ್ಳಲು ಹೋದಾಗ ಇದರಿಂದ ಆರೋಪಿಗಳು ಮಾಡಿರುವ ಮೋಸವು ಬೆಳಕಿಗೆ ಬರುತ್ತದೆಯೆಂದು ಆರೋಪಿಗಳೆಲ್ಲ ಸೇರಿಕೊಂಡು ಮಾರುತಿ ಎರಿಟಿಗಾ ಕಾರಿನಲ್ಲಿ ಮ್ಯಾನೇಜರ್ ಅವರನ್ನು ಅಪಹರಣ ಮಾಡಿಕೊಂಡು ಹೋಗಿ ಕೊಲೆ ಮಾಡಲು ಪ್ರಯತ್ನಿಸಿದ್ದರು.

ಅಪಹರಣದ ಮಾಹಿತಿ ಬಂದ ಕೂಡಲೇ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು, ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಕಾಬಂಧಿಯನ್ನು ಹಾಕಲು ಸೂಚಿಸಿದ್ದರು. ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮುದ್ದುರಾಜ್ ಮತ್ತು ಅವರ ಸಿಬ್ಬಂದಿಯವರು ಹೊನ್ನಾಳಿ ನಗರದ ವಡ್ಡಿನ ಕೆರೆ ಹಳ್ಳದ ಬಳಿ ಎರಟಿಗಾ ಕಾರಿನಲ್ಲಿ ಬಂದ ಆರೋಪಿಗಳು ಮತ್ತು ಕಿಡ್ನಾಪ್ ಗೆ ಒಳಗಾದ ವ್ಯಕ್ತಿಯನ್ನು ವಶಕ್ಕೆ ಪಡೆದರು. ಅಸ್ವಸ್ಥಗೊಂಡಿದ್ದ ಮ್ಯಾನೇಜರ್‌ರವರಿಗೆ ಚಿಕಿತ್ಸೆಕೊಡಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಮ್ಯಾನೇಜರ್ ಅಪಹರಣವಾದ ಬಗ್ಗೆ ತೇಜಸ್ವಿ ಅವರು ನೀಡಿದ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಕೇವಲ 2 ಘಂಟೆಗಳಲ್ಲಿ ಅಪಹರಣಕ್ಕೆ ಒಳಗಾದ ಎಲ್‌ಐಸಿ ಹೌಸಿಂಗ್ ಪೈನಾನ್ಸ್ ಮ್ಯಾನೇಜರ್ ಶರಣು ಅವರನ್ನು ರಕ್ಷಿಸಿ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ ಎರಿಟಿಗಾ ಮತ್ತು ಸಿಯಾಝಾ 2 ಕಾರುಗಳು, ಲ್ಯಾಪ್‌ಟಾಪ್, ಕಂಪ್ಯೂಟರ್, ಚಾಕು,
ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಲ್ಲಿ ಚೇತನ್ ಎಂಬ ಆರೋಪಿಯು ಇದೇ ರೀತಿಯಾಗಿ ಸರಿಯಾದ ದಾಖಲೆಗಳನ್ನು ನೀಡದೇ ಮೋಸ ಮಾಡಿ ಎಲ್‌ಐಸಿ ಹೌಸಿಂಗ್ ಪೈನಾನ್ಸ್ ನಿಂದ ಸಾಲವನ್ನು ಮಂಜೂರು ಮಾಡಿಸಿಕೊಂಡಿರುವ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಮುಖ ಆರೋಪಿಯಾದ ಚೇತನ್ ಮೇಲೆ ಈ ಹಿಂದೆ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿತ್ತು.

ಈ ಕಾರ್ಯಚರಣೆ ವೇಳೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ ಸಂತೋಷ, ಮಂಜುನಾಥ ಜಿ, ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಲ್ಲೇಶ ಡಿ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ಈ ಆಪರೇಷನ್ ನಡೆದಿದೆ.

ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ ಹೆಚ್. ಎಸ್., ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮುದ್ದುರಾಜ್, ಕೆಟಿಜೆ ನಗರ ಠಾಣೆಯ ಪಿಎಸ್‌ಐ ಸಾಗರ್ ಅತ್ತರವಾಲ, ಎಎಸ್‌ಐ ಈರಣ್ಣ, ಸಿಬ್ಬಂದಿ ಪ್ರಕಾಶ, ಶಂಕರ ಜಾಧವ್, ಶಿವರಾಜ್, ಮಂಜಪ್ಪ, ಮಂಜೇಗೌಡ, ಚಂದ್ರಪ್ಪ, ಶ್ರೀನಿವಾಸ, ಗಿರೀಶ, ಹರೀಶ ಹೊನ್ನಾಳಿ ಠಾಣೆಯ ಸಿಬ್ಬಂದಿ ಬಸವರಾಜ್, ಮಲ್ಲೇಶಪ್ಪ, ಜಗದೀಶ, ಕುಮಾರನಾಯ್ಕ, ಲೋಕೇಶ, ವೆಂಕಟೇಶರವರ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment