SUDDIKSHANA KANNADA NEWS/ DAVANAGERE/ DATE:21-10-2023
ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ತಿರುಗೇಟು ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು, ನನ್ನ ಮೌನವೂ ವೀಕ್ನೇಸ್ ಅಲ್ಲ ಎಂದು ಹೇಳಿದ್ದಾರೆ.
Read Also This Story:
Bangalore: ಕಾಂಗ್ರೆಸ್ ಬಂದಿದೆ ಕನ್ನಡಿಗರ ಕಿವಿ ಮೇಲೆ ಲಾಲ್ ಬಾಗ್ ಅನ್ನೇ ಇಟ್ಟಿದೆ..!ಬಡವರ ಬದುಕು ಬೀದಿಗೆ ತಂದು ನಿಲ್ಲಿಸಿದ್ದೇ ಕೈ ಸಾಧನೆ: ಬಿಜೆಪಿ ಟ್ವೀಟ್ ನಲ್ಲಿ ಟೀಕೆ
ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನ್ನ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಯಾವುದೇ ಅಸಮಾಧಾನ ಇಲ್ಲ, ಭಿನ್ನಮತವೂ ಇಲ್ಲ ಎಂದು ತಿಳಿಸಿದರು.
ನಾನು ಮೌನವಾಗಿದ್ದೇನೆ ಎಂದ ಮಾತ್ರಕ್ಕೆ ದೌರ್ಬಲ್ಯ ಎಂದು ಭಾವಿಸಬೇಡಿ. ನಾನು ಎರಡು ಬಾರಿ ಶಾಸಕಿಯಾದವಳು. ಸತೀಶ್ ಜಾರಕಿಹೊಳಿ ಅವರು ಆರು ಬಾರಿ ಶಾಸಕರಾಗಿದ್ದಾರೆ. ಸಕ್ಕರ್ ಕಾರ್ಖಾನೆ ಬಾಯ್ಲರ್ ಪೂಜಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ನಾನು ಹೋಗಿರಲಿಲ್ಲ. ನನ್ನ ಸೈಲೆನ್ಸ್ ವೀಕ್ನೇಸ್ ಅಲ್ಲ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆಗೆ ನನ್ನ ಮೌನವೂ ವೀಕ್ನೇಸ್ ಅಲ್ಲ ಎಂದು ಪುನರುಚ್ಚರಿಸಿದರು.
ಮೈಸೂರಿಗೆ ಹೋಗಲು ಬೆಳಗಾವಿ ಶಾಸಕರು ಹೋಗಲು ನಿರ್ಧರಿಸಿದ್ದರು. ನನ್ನನ್ನು ಆಹ್ವಾನಿಸಲಾಗಿತ್ತು. ನನಗೂ ಟಿಕೆಟ್ ಬುಕ್ ಮಾಡಿದ್ದರು. ಮೈಸೂರು ದಸರಾ ನಡೆಯುತ್ತಿರುವುದರಿಂದ ತೆರಳುತ್ತಿದ್ದರು. ಹಾಗಾಗಿ, ಸತೀಶ್ ಜಾರಕಿಹೊಳಿ ಹಾಗೂ ನನ್ನ ನಡುವೆ ಯಾವುದೇ ಸಮಸ್ಯೆ ಇಲ್ಲ. ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ತಿಳಿಸಿದರು.
ಯಾವುದೇ ಸಮಸ್ಯೆ ಜಿಲ್ಲೆಯಲ್ಲಿ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ದೊಡ್ಡ ಪಾರ್ಟಿ. ಸಣ್ಣ ಪುಟ್ಟ ಸಮಸ್ಯೆಗಳು ಇರುತ್ತವೆ. ಅದೇ ದೊಡ್ಡದೇನಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.