SUDDIKSHANA KANNADA NEWS/ DAVANAGERE/ DATE:22-01-2024
ದಾವಣಗೆರೆ: ಅಯೋಧ್ಯೆಯ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ದಿನದ ಅಂಗವಾಗಿ ಗಡಿಯಾರ ಕಂಬದ ವರ್ತಕರು ಪೂಜಾ ಕಾರ್ಯಕ್ರಮ ಹಾಗೂ ಲಾಡು ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ವಿಧಾನ ಪರಿಷತ್ತಿನ ಸದಸ್ಯರು, ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಭಾಗವಹಿಸಿ ಸಾರ್ವಜನಿಕರಿಗೆ ಲಾಡು ವಿತರಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಮಾಜಿ ಮಹಾಪೌರರಾದ ಎಸ್. ಟಿ. ವೀರೇಶ್, ಹಿರಿಯ ಮುಖಂಡರಾದ ವೈ. ಮಲ್ಲೇಶ್, ಮಾಜಿ ಸದಸ್ಯರಾದ ಶಿವನಗೌಡ ಟಿ. ಪಾಟೀಲ್, ವರ್ತಕರಾದ ಮಹೇಂದ್ರ ಕೊಠಾರಿ, ರಮೇಶ್ ಓಸ್ವಾಲ್, ಮೋಹನ್ ಗಂಗಾವತಿ, ಹರಿಹರದ ನಾಗರಾಜ್, ಜಿತೇಂದ್ರ ಕುಮಾರ್, ಲಿಖಿತ್ ಜೈನ್, ರಾಹುಲ್ ಜೈನ್, ಕಿರಣ, ಆನಂದ್, ನಿಖಿಲು ಬಾಹುಬಲಿ, ದಿಲೀಪ್, ಶೀತಲ್ ಕೆ.ಜೆ.ಪಿ ಗೋಲ್ಡ್ ಸಂದೇಶ್, ಆಸೂಜಿ ಅಂಗಡಿಯ ಮಾಲೀಕರು, ಆಟೋ ಚಾಲಕರಾದ ಗಂಗಾಧರ್, ಆನಂದ್, ಪೇಪರ್ ಮಹಾರುದ್ರಪ್ಪ, ಸೇರಿದಂತೆ ಗಡಿಯಾರ ಕಂಬದ ಸುತ್ತಮುತ್ತಲಿನ ವ್ಯಾಪಾರಸ್ಥರು ಭಾಗಿಯಾಗಿದ್ದರು.
ಸಾರ್ವಜನಿಕರಿಗೆ ಲಾಡು ವಿತರಿಸುವ ಮೂಲಕ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಮುಖಂಡರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಿದ್ದು ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ. ಇದಕ್ಕಾಗಿ 500 ವರ್ಷಗಳ ಕಾಲ ಕಾಯಬೇಕಾಯಿತು. ಪ್ರತಿಯೊಬ್ಬ ಹಿಂದೂವಿನ ಆಸೆ ಈಡೇರಿದ ಈ ದಿನ ಪುಣ್ಯ ದಿನ ಎಂದು ಬಣ್ಣಿಸಿದರು.
ರಾಮಮಂದಿರ ನಿರ್ಮಾಣಕ್ಕಾಗಿ ಅದೆಷ್ಟೋ ಮಂದಿಯ ತ್ಯಾಗ, ಬಲಿದಾನ ಆಗಿದೆ. ರಾಮಮಂದಿರ ನಿರ್ಮಾಣ ಆಗಿರುವುದು ನಮ್ಮೆಲ್ಲರ ಪುಣ್ಯ. ಈ ದಿನದಂದು ಲಾಡು ವಿತರಿಸುವ ಮೂಲಕ ಸಂಭ್ರಮಿಸುತ್ತಿದ್ದೇವೆ. ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ದೇಶದ ಕೋಟ್ಯಂತರ ಜನರ ಕನಸು ನನಸು ಮಾಡಿದ್ದಾರೆ ಎಂದು ಹೇಳಿದರು.